Ad image

ಡಿಕ್ಲರೇಷನ್‌ಗೆ ಸಹಿ ಹಾಕಿ ಅಥವಾ ದೇಶದ ಕ್ಷಮೆ ಕೇಳಿ

Team SanjeMugilu
2 Min Read

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಹಾಗೂ ಅಕ್ರಮ ಮತದಾನದ ಆರೋಪ ಮಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಚುನಾವಣಾ ಆಯೋಗವು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ನಿಮ್ಮ ಹೇಳಿಕೆಯನ್ನು ಬೆಂಬಲಿಸಲು ಘೋಷಣೆಗೆ ಸಹಿ ಹಾಕಿ ಅಥವಾನಕಲಿಆರೋಪಗಳನ್ನು ಮಾಡಿದ್ದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಿ ಎಂದು ಸೂಚಿಸಿದ್ದಾರೆ. ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ನಡೆದ ಮತ ಕಳ್ಳತನದ ಆರೋಪದ ಬಗ್ಗೆ ರಾಹುಲ್ ಗಾಂಧಿ ಮತ್ತು ಚುನಾವಣಾ ಆಯೋಗ ವಾಗ್ವಾದ ನಡೆದ ಒಂದು ದಿನದ ನಂತರ ಚುನಾವಣಾ ಪ್ರಾಧಿಕಾರದ ಅಧಿಕಾರಿಗಳು ಮತ್ತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಹಿ ಮಾಡಿದ ಘೋಷಣೆಯನ್ನು ನೀಡುವ ಮೂಲಕ ಅವರ ಆರೋಪವನ್ನು ದೃಢೀಕರಿಸಲು ಒತ್ತಾಯಿಸಿದ್ದಾರೆ.

`ರಾಹುಲ್ ಗಾಂಧಿ ನಿಯಮಗಳ ಪ್ರಕಾರ ಘೋಷಣೆ ಮಾಡಬೇಕು ಅಥವಾ ತಮ್ಮ ಸುಳ್ಳು ಆರೋಪಗಳಿಗೆ ದೇಶಕ್ಕೆ ಕ್ಷಮೆಯಾಚಿಸಬೇಕುಎಂದು ಚುನಾವಣಾ ಆಯೋಗ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಆಗಸ್ಟ್ 7ರಂದು ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ನಂತರ ಹಲವು ಬೆಳವಣಿಗೆಗಳು ನಡೆದವು. ರಾಹುಲ್ ಅವರು 2024 ಲೋಕಸಭಾ ಚುನಾವಣೆಯನ್ನು ಬಿಜೆಪಿಗೆ ಲಾಭವಾಗುವಂತೆ ಚುನಾವಣಾ ಆಯೋಗವು ಅಕ್ರಮ ಮತದಾನಕ್ಕೆ ಸಹಾಯ ಮಾಡಿದೆ ಎಂದು ಆರೋಪಿಸಿದ್ದರು. ಅಕ್ಕೆ ಬೇಕಾದ ಕೆಲವು ದಾಖಲೆಗಳನ್ನೂ ನೀಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ, ಸಾಕ್ಷಿಗಳು ಸಾಕಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು.

ಕಾಂಗ್ರೆಸ್ ಪಕ್ಷದ ಆಂತರಿಕ ವಿಶ್ಲೇಷಣೆಯನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಕೇವಲ 9 ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್ 7 ಅನಿರೀಕ್ಷಿತ ಸೋಲುಗಳನ್ನು ತನಿಖೆ ಮಾಡಿದೆ. ಮಹದೇವಪುರದಲ್ಲಿ 1,00,250 ಮತಗಳನ್ನು ಒಳಗೊಂಡ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.

`ರಾಹುಲ್ ಗಾಂಧಿ ತಮ್ಮ ಪಕ್ಷದ ವಿಶ್ಲೇಷಣೆಯನ್ನು ನಂಬಿದರೆ ಮತ್ತು ಇಸಿಐ ವಿರುದ್ಧದ ಅವರ ಆರೋಪಗಳು ನಿಜವೆಂದು ನಂಬಿದರೆ ಡಿಕ್ಲರೇಷನ್‌ಗೆ ಸಹಿ ಹಾಕಬೇಕು. ಅಫಿಡವಿಟ್‌ಗಳಿಗೆ ಸಹಿ ಹಾಕದಿದ್ದರೆ ಅವರು ದೇಶದ ಕ್ಷಮೆಯಾಚಿಸಬೇಕುಎಂದು ಇಸಿಐ ರಾಹುಲ್ ಗಾಂಧಿಗೆ ಸೂಚಿಸಿದೆ.

Share This Article