Ad image

ನಮೋ ಎಂಟ್ರಿಗೆ ಬೆಂಗಳೂರಿನ ರಸ್ತೆಗಳೆಲ್ಲಾ ಕೇಸರಿಮಯ

Team SanjeMugilu
3 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ನಗರದ ರಸ್ತೆಗಳೆಲ್ಲಾ ಕೇಸರಿಮಯವಾಗಿದೆ. ಕೇಸರಿ ಬಾವುಟ ಹಾಗೂ ಮೋದಿ ಫೋಟೋಗಳು ರಾರಾಜಿಸುತ್ತಿದೆ. ಇಂದು ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಮೋದಿ ಭೇಟಿ ಹಿನ್ನೆಲೆ ಮಧ್ಯರಾತ್ರಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದೇ ವೇಳೆ ವೈಷ್ಣವ್ ಅವರು ಇಂದಿನ ಕಾರ್ಯಕ್ರಮದ ಸಿದ್ದತೆ, ರೂಪುರೇಷೆಗಳ ಪರಿಶೀಲನೆ ನಡೆಸಿದರು.

 

ಮಧ್ಯರಾತ್ರಿ ರೈಲ್ವೆ ಕೇಂದ್ರ ಸಚಿವರ ಭೇಟಿ:

ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಮೂರು ವಂದೇ ಭಾರತ್ ರೈಲುಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ರೈಲ್ವೆ ನಿಲ್ದಾಣವನ್ನು ಪರಿಶೀಲಿಸಿದ್ರು. ಸಂದರ್ಭದಲ್ಲಿ ವೈಷ್ಣವ್ ಅವರು ಇಂದಿನ ಕಾರ್ಯಕ್ರಮದ ಸಿದ್ದತೆ, ರೂಪುರೇಷೆಗಳ ಪರಿಶೀಲನೆ ನಡೆಸಿದ್ರು. ಪ್ರಧಾನಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಮಧ್ಯರಾತ್ರಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕುರಿತು ಮಾತಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ದೀರ್ಘಕಾಲದ ಬೇಡಿಕೆ ಈಡೇರುತ್ತಿದ್ದು, ಉತ್ತರ ಕರ್ನಾಟಕ ಮತ್ತು ಬೆಂಗಳೂರಿನ ಸಂಬA ಬೆಸೆಯುತ್ತಿದೆ ಎಂದು ಹೇಳಿದ್ರು. ಜೊತೆಗೆ ಇನ್ನೆರಡು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

 ಪ್ರಯಾಣದ ದರ ಇಳಿಕೆ:

ಅಮೃತ್ ಭಾರತ್ ಕೂಡ ಉತ್ತಮ ದರ್ಜೆಯ ಪ್ರಯಾಣದ ಅನುಭವವನ್ನ ನೀಡುತ್ತಿದೆ. ಇದರ ಪ್ರಯಾಣದ ದರ ಕಡಿಮೆ ಇದೆ. ನವ ಭಾರತ್ ರೈಲು ಕೂಡ ಯಶಸ್ವಿಯಾಗಿ ಸಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಪ್ರಾರಂಭವಾಗಲಿದೆ.

ಮೆಟ್ರೋ ರೈಲಿಗೆ ಹೆಚ್ಚು ಆದ್ಯತೆ:

ಬೆಂಗಳೂರು ಐಟಿ ಕ್ಯಾಪಿಟಲ್ ಸಿಟಿಯಾಗಿದ್ದು, ಪ್ರಧಾನ ಮಂತ್ರಿಗಳು ಇಲ್ಲಿನ ಮೆಟ್ರೋ ರೈಲಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇಂತಹ ನಗರಕ್ಕೆ ಮೆಟ್ರೋ ತುಂಬಾ ಅವಶ್ಯಕವಾಗಿದೆ. ರಾಜ್ಯ ಸರ್ಕಾರದ ಜೊತೆಗೂಡಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ನಾಲ್ಕು ಲೈನ್ ರೈಲು ಕೂಡ ಪ್ರಾರಂಭವಾಗುತ್ತಿದೆ. ರೈಲ್ವೆ ಅಭಿವೃದ್ಧಿಯನ್ನು ಹೆಚ್ಚಾಗಿ ಮಾಡುತ್ತಿದ್ದು, 2009-2014ರಲ್ಲಿ 865 ಕೋಟಿ ನೀಡಲಾಗಿತ್ತು. ಅದರ 9 ಪಟ್ಟು ಹೆಚ್ಚು ಹಣವನ್ನು ಈಗ ನೀಡುತ್ತಿರೋದಾಗಿ ಕೇಂದ್ರ ಸಚಿವರು ಹೇಳಿದ್ರು.

ಬೆಂಗಳೂರಲ್ಲಿ ಫುಲ್ ಟೈಟ್ ಸೆಕ್ಯೂರಿಟಿ:

ಇಂದು ಪ್ರಧಾನಮಂತ್ರಿಗಳ ಬೆಂಗಳೂರು ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಮಂತ್ರಿಗಳು ಸಂಚರಿಸುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರತಿ ಜಂಕ್ಷನ್ ನಲ್ಲಿ 100 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಮಾರ್ಗದುದ್ದಕ್ಕೂ, ಸಂಚಾರ ದಟ್ಟಣೆ ಮತ್ತು ಬಂದೋಬಸ್ತ್ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಲಾಗಿದೆ.

 ಬಿಜೆಪಿ ನಾಯಕರಿಂದ ಮೋದಿಗೆ ಸ್ವಾಗತ:

ಮೇಖ್ರಿ ಸರ್ಕಲ್ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಸರ್ಕಲ್ ಸುತ್ತಮುತ್ತ ಖಾಕಿ ಸರ್ಪಗಾವಲು ಇರಿಸಲಾಗಿದ್ದು, ಮೋದಿ ಅವರು ಮೇಖ್ರಿ ಸರ್ಕಲ್ ಮೂಲಕ ಕೆಎಸ್‌ಆರ್ ರೈಲು ನಿಲ್ದಾಣ ತಲುಪಲಿದ್ದಾರೆ. ಪ್ರಧಾನಮಂತ್ರಿಗಳಿಗೆ ಸ್ವಾಗತ ಕೋರಲು ಬಿಜೆಪಿ ಕಾರ್ಯಕರ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಮೇಖ್ರಿ ಸರ್ಕಲ್ ಬಿಜೆಪಿ ಬಾವುಟಗಳಿಂದ ಸಿಂಗಾರಗೊAಡಿದೆ. ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ನಿರ್ವಹಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಲಾಗಿದೆ.

Share This Article