Ad image

ಆಪರೇಷನ್ ಸಿಂಧೂರ್ ಚದುರಂಗ ಆಟದಂತಿತ್ತು: ಸೇನಾ ಮುಖ್ಯಸ್ಥ

Team SanjeMugilu
2 Min Read

ನವದೆಹಲಿ: ಆಪರೇಷನ್ ಸಿಂಧೂರ್ ಚೆಸ್ ಆಟದಂಡಿತ್ತು, ನಾವು ಪಾಕ್ ಅನ್ನು ಚೆಕ್‌ಮೇಟ್ ಮಾಡಿದ್ದೇವೆ ಎಂದು ಭಾರತ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಹೇಗೆ ಆಪರೇಷನ್ ಸಿಂಧೂರ್ ಬೇರೆಲ್ಲಾ ಕಾರ್ಯಾಚರಣೆಗಳಿಗಿಂತ ಭಿನ್ನವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ಆಪರೇಷನ್ ಸಿಂಧೂರ್‌ನ್ನು ನಾವು ಚೆಸ್‌ನಂತೆ ಆಡಿದ್ದೇವೆ. ಶತ್ರುಗಳ ಮುಂದಿನ ನಡೆ ಏನು? ನಾವು ಏನು ಮಾಡಲಿದ್ದೇವೆ ಎಂಬುದು ಗೊತ್ತಿರಲಿಲ್ಲ. ಇದನ್ನು ಗ್ರೇಝೋನ್ ಎಂದು ಕರೆಯಲಾಗುತ್ತದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಸಂಬAಧಿಸಿದ ಮೊದಲ ಸಭೆ ನಡೆಸಲಾಯಿತು. ಏಪ್ರಿಲ್ 23 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮೂವರು ಸಶಸ್ತç ಪಡೆಗಳ ಮುಖ್ಯಸ್ಥರ ಸಭೆ ನಡೆಸಲಾಯಿತು, ಆಗ ಕಾರ್ಯಾಚರಣೆಯನ್ನು ನಿರ್ಧರಿಸಲು ಸೇನೆಗೆ ಮುಕ್ತ ಹಸ್ತ ನೀಡಲಾಯಿತು ಎಂದು ದ್ವಿವೇದಿ ಹೇಳಿದರು.

ಮೇ 7 ರಿಂದ ಪಾಕಿಸ್ತಾನದ ವಿರುದ್ಧ ನಡೆಸಿದ ಕಾರ್ಯಾಚರಣೆಗಳನ್ನು ವಿವರಿಸಲು ಸೇನಾ ಮುಖ್ಯಸ್ಥರು ಚೆಸ್‌ನ ಉದಾಹರಣೆಯನ್ನು ತೆಗೆದುಕೊಂಡು, ಇದು ಸಾಂಪ್ರದಾಯಿಕ ಯುದ್ಧಗಳಂತಲ್ಲ ಎಂದು ಹೇಳಿದರು. ಈ ಕಾರ್ಯಾಚರಣೆಯು ಭಾರತದ ಹೆಚ್ಚಿನ ನಿಖರತೆ, ಸಂಘಟಿತ ಮಿಲಿಟರಿ ಕ್ರಮದ ಸಾಮರ್ಥ್ಯವನ್ನು ಪ್ರದರ್ಶಿಸಿತು, ಇದು ಭಯೋತ್ಪಾದಕ ಮೂಲಸೌಕರ್ಯವನ್ನು ಯಶಸ್ವಿಯಾಗಿ ಕೆಡವಿತು.

ಭಾರತದ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಯು ಆಪರೇಷನ್ ಸಿಂಧೂರ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಸಮೀರ್ ವಿ. ಕಾಮತ್ ಹೇಳಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು.

ಆಪರೇಷನ್ ಸಿಂಧೂರ್ ಮೂಲಕ ಭಾರತವು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ನಾಶಪಡಿಸಿದ್ದಷ್ಟೇ ಅಲ್ಲದೆ ತನ್ನ ಸ್ಥಳೀಯ ತಂತ್ರಜ್ಞಾನದ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಭಾರತ ತೋರಿಸಿಕೊಟ್ಟಿದೆ ಎಂದಿದ್ದಾರೆ.

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಸಮೀರ್ ಕಾಮತ್ ಸಮೀರ್, ಭಾರತವು ತನ್ನ ಸ್ಥಳೀಯ ತಂತ್ರಜ್ಞಾನದಿಂದ ತನ್ನ ಗಡಿಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಸಂದೇಶವೂ ಆಗಿತ್ತು ಎಂದರು.

Share This Article