Ad image

ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ ಓರ್ವ ಸಾವು, 29 ಮಂದಿಗೆ ಗಾಯ

Team SanjeMugilu
1 Min Read

ಅಂಕಾರಾ: ಭೂಕಂಪ ಪೀಡಿತ ರಾಷ್ಟçವಾದ ಟರ್ಕಿಯ ವಾಯುವ್ಯ ಪ್ರಾಂತ್ಯ ಬಲಿಕೆಸಿರ್ ಎಂಬಲ್ಲಿ ಭಾನುವಾರ ಸಂಜೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.


ಬಲಿಕೆಸಿರ್ ಪ್ರಾಂತ್ಯದ ಸಿಂದಿರಗಿಯಲ್ಲಿ 11 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಪರಿಣಾಮ 200 ಕಿ.ಮೀ. ದೂರದ ಇಸ್ತಾಂಬುಲ್ ಮತ್ತು ಇಜ್ಜಿರ್ನಲ್ಲೂ ಕಂಪನದ ಅನುಭವ ಆಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಬಲ ಭೂಕಂಪದ ಬೆನ್ನಲ್ಲೇ ಟರ್ಕಿಯ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ, ಸುರಕ್ಷತೆಯ ದೃಷ್ಟಿಯಿಂದ ನೆಲಕಚ್ಚಿದ ಕಟ್ಟಡಗಳನ್ನು ಪ್ರವೇಶಿಸದಂತೆ ಸರ್ವಜನಿಕರಿಗೆ ಸೂಚಿಸಿದೆ.
ಸಿಂದಿರಗಿಯಲ್ಲಿ 14ಕ್ಕೂ ಅಧಿಕ ಕಟ್ಟಡಗಳು ಧರೆಗುರುಳಿದ್ದು, ಅವುಗಳಲ್ಲಿದ್ದ 4 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಅವಶೇಷಗಳ ಅಡಿ ಸಿಲುಕಿರುವ 2 ಮಂದಿಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 81 ರಷ್ಯಾದ ಒರ್ವ ವ್ಯಕ್ತಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

Share This Article