Ad image

ವಾಣಿಜ್ಯ ಎಲ್‌ಪಿಜಿ ಬಳಕೆಯ ಸಿಲಿಂಡರ್ ಬೆಲೆ 51 ರೂ. ಇಳಿಕೆ

Team SanjeMugilu
1 Min Read

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 51.50 ರೂ. ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ 51.50 ರೂ.ಗಳಷ್ಟು ಕಡಿಮೆ ಮಾಡುವುದಾಗಿ ತಿಳಿಸಿವೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮಾತ್ರ ಕಡಿಮೆಯಾಗಿದ್ದು 14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪರಿಷ್ಕರಣೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಈಗ 1,580 ರೂ.ಗಳಿಗೆ ಲಭ್ಯವಿರುತ್ತದೆ. ಅಂತಾರಾಷ್ಟಿçà ಮಾರುಕಟ್ಟೆಯಲ್ಲಿ ದರಕ್ಕೆ ಅನುಗುಣವಾಗಿ ಎಲ್‌ಪಿಜಿ ದರ ಪ್ರತಿ ತಿಂಗಳು ಪರಿಷ್ಕರಣೆಯಾಗುತ್ತಿರುತ್ತದೆ

ಹಿಂದೆ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 33.50 ರೂ.ಗಳಷ್ಟು ಕಡಿಮೆ ಮಾಡಿದ್ದವು. ಅದಕ್ಕೂ ಮೊದಲು ಜುಲೈ 1 ರಂದು 58.50 ರೂ.ಗಳಷ್ಟು ಬೆಲೆಯನ್ನು ಕಡಿಮೆ ಮಾಡಿದ್ದವು.

ಜೂನ್‌ನಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳಿಗೆ 24 ರೂ.ಗಳಷ್ಟು ಕಡಿತವನ್ನು ಘೋಷಿಸಿ, ದರವನ್ನು 1,723.50 ರೂ.ಗಳಿಗೆ ನಿಗದಿಪಡಿಸಿದ್ದವು. ಏಪ್ರಿಲ್‌ನಲ್ಲಿ ಬೆಲೆ 1,762 ರೂ.ಗಳಷ್ಟಿತ್ತು. ಫೆಬ್ರವರಿಯಲ್ಲಿ 7 ರೂಪಾಯಿಗಳಷ್ಟು ಸಣ್ಣ ಇಳಿಕೆಯಾಗಿತ್ತು. ಆದರೆ ಮಾರ್ಚ್‌ ನಲ್ಲಿ 6 ರೂ. ಹೆಚ್ಚಳ ಮಾಡಿತ್ತು.

Share This Article