Ad image

ಪೆಟ್- ಪೇರೆಂಟ್ ಬಾಂಧವ್ಯವನ್ನು ಸಂಭ್ರಮಿಸಲು ಮತ್ತು ಪ್ರಾಣಿ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸಲು ಬೆಂಗಳೂರಿನಲ್ಲಿ ಯಶಸ್ವಿಯಾಗಿ ವಾಗಥಾನ್ ಆಯೋಜಿಸಿದ ಝಿಗ್ಲಿ

Team SanjeMugilu
2 Min Read

ಭಾರತದ ಮೊದಲ ತಂತ್ರಜ್ಞಾನ ಆಧರಿತ ಓಮ್ನಿ ಚಾನೆಲ್ ಪೆಟ್ ಕೇರ್ ಬ್ರಾಂಡ್ ಆದ ಝಿಗ್ಲಿ!

ಕೋರಮಂಗಲದ ಝಿಗ್ಲಿ ಎಕ್ಸ್ಪೀರಿಯನ್ಸ್ ಸೆಂಟರ್ ನಲ್ಲಿ ತನ್ನ ಪ್ರಮುಖ ಕರ‍್ಯಕ್ರಮವಾದ ವಾಗಥಾನ್ ಅನ್ನು ಯಶಸ್ವಿಯಾಗಿ ಆಯೋಜಿಸಿತು.

ಫಿಟ್ನೆಸ್, ಸೌಹಾರ್ದತೆ ಮತ್ತು ಸಾಕುಪ್ರಾಣಿಗಳ ಮಾಲೀಕತ್ವವನ್ನು ಸಂಭ್ರಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಉತ್ಸಾಹಿ ಸಾಕು ಪ್ರಾಣಿಗಳ ಮಾಲೀಕರನ್ನು ಮತ್ತು ಅವರ ಸಾಕುಪ್ರಾಣಿಗಳನ್ನು ಒಂದು ಆಕರ್ಷಕ ವಾಕಥಾನ್ ಗಾಗಿ ಒಟ್ಟುಗೂಡಿಸುವ ಮೂಲಕ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.

ವಾಗಥಾನ್ ಬೆಳಿಗ್ಗೆ 7:00 ಗಂಟೆಗೆ ನೋಂದಣಿ ಮಾಡುವುದರ ಮೂಲಕ ಮತ್ತು ಕಿಟ್ ವಿತರಣೆಯೊಂದಿಗೆ ಆರಂಭವಾಯಿತು. ಇದರಲ್ಲಿ ಭಾಗವಹಿಸುವವರಿಗೆ ನೀರಿನ ಬಾಟಲಿಗಳು ಮತ್ತು ಝಿಗ್ಲಿ ಕ್ಯಾಪ್ ಗಳನ್ನು ನೀಡಲಾಯಿತು. ಬೆಳಿಗ್ಗೆ 7:30 ಗಂಟೆಗೆ ಝಿಗ್ಲಿ ಎಕ್ಸ್ಪೀರಿಯನ್ಸ್ ಸೆಂಟರ್ ನಿಂದ ಆರಂಭವಾದ ಒಂದು ಕಿಲೋಮೀಟರ್ ನ ಉತ್ಸಾಹಭರಿತ ವಾಕಥಾನ್ ಬಳಿಕ ಆರಂಭದ ಸ್ಥಳಕ್ಕೆ ವಾಪಸ್ ಆಗಮಿಸಿತು. 120ಕ್ಕೂ ಹೆಚ್ಚು ಭಾಗವಹಿಸುವವರೊಂದಿಗೆ ಸಾಕು ಪ್ರಾಣಿಗಳ ಮತ್ತು ಅವರ ಪೋಷಕರ ಉತ್ಸಾಹ ಮತ್ತು ಶಕ್ತಿಯಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಬೆಂಗಳೂರಿನ ಪೆಟ್ ಸಮುದಾಯದ ಒಂದು ಆಕರ್ಷಕ ಮತ್ತು ಸಂಭ್ರಮದ ಆಚರಣೆಯಾಗಿ ಈ ಕಾರ್ಯಕ್ರಮ ನಡೆಯಿತು.

ವಾಗಥಾನ್ ಅನ್ನು ಯಶಸ್ವಿಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಭಾಗವಹಿಸಿದ ಎಲ್ಲರಿಗೂ ಕಾರ್ಯಕ್ರಮದ ಭಾಗವಹಿಸುವಿಕೆಯ ಭಾಗವಾಗಿ ಪ್ರಮಾಣಪತ್ರಗಳು, ಪದಕಗಳು ಮತ್ತು ಟ್ರೋಫಿಗಳನ್ನು ನೀಡಲಾಯಿತು.ಈ ಕುರಿತು ಮಾತನಾಡಿದ ಕಾಸ್ಮೋ ಫಸ್ಟ್ ಗ್ರೂಪ್ ಸಿಇಒ ಶ್ರೀ ಪಂಕಜ್ ಪೊದ್ದಾರ್ ಅವರು,  “ಬೆಂಗಳೂರಿನ ಪೆಟ್ ಪೋಷಕರು ಬೆಳಿಗ್ಗೆ ಬೇಗನೆ ತಮ್ಮ ಪೆಟ್ಗಳೊಂದಿಗೆ ವಾಕಥಾನ್ಗೆ ಆಗಮಿಸಿ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಭಾವುಕರಾಗಿದ್ದೇವೆ” ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, “ಪೆಟ್ ಪೋಷಕರ ಕೊಡುಗೆಯೊಂದಿಗೆ ಈ ಯೋಜನೆಯು ಸಾಕುಪ್ರಾಣಿ ಕಲ್ಯಾಣದ ಮಹತ್ತರ ಉದ್ದೇಶಕ್ಕೂ ಸಹಾಯ ಮಾಡಲಿದೆ ಎಂಬ ತುಂಬಾ ಹೆಮ್ಮೆ ನಮಗಿದೆ. ವಾಗಥಾನ್ ಕೇವಲ ಒಂದು ಕಾರ್ಯಕ್ರಮವಲ್ಲ; ಇದು ಪೆಟ್- ಪೇರೆಂಟ್ ಬಾಂಧವ್ಯದ  ಸಂಭ್ರಮ ಆಚರಣೆಯಾಗಿದೆ” ಎಂದು ಹೇಳಿದರು.

ಪೆಟ್ ಕೇರ್ ಗಿಂತಲೂ ಒಂದು ವಿಭಿನ್ನ ಪರಿಣಾಮವನ್ನು ಉಂಟು ಮಾಡುವ ತನ್ನ ಧ್ಯೇಯಕ್ಕೆ ಅನುಗುಣವಾಗಿ, ಝಿಗ್ಲಿಯು ವಾಗಥಾನ್ ಉಪಕ್ರಮದ ಮೂಲಕ ಸುಮಾರು ₹2 ಲಕ್ಷವನ್ನು ಸಂಗ್ರಹಿಸಿದೆ ಎಂದು ಘೋಷಿಸಲಾಯಿತು. ಈ ಆದಾಯವನ್ನು ಝಿಗ್ಲಿ ಫೌಂಡೇಶನ್ ಗೆ ಹಸ್ತಾಂತರಿಸಲಾಯಿತು, ಇದು ಸಾಕುಪ್ರಾಣಿಗಳು ಮತ್ತು ಪ್ರಾಣಿಗಳಿಗೆ ಹೆಚ್ಚು ಕರುಣಾಮಯ ಪರಿಸರವನ್ನು ಸೃಷ್ಟಿಸುವ ಝಿಗ್ಲಿಯ ಬದ್ಧತೆಯನ್ನು ಸಾರಿತು.

ಝಿಗ್ಲಿಯ ಹಲವಾರು ಸಮುದಾಯ- ಆಧರಿತ ಕಾರ್ಯಕ್ರಮಗಳಲ್ಲಿ ಒಂದಾದ ವಾಗಥಾನ್, ಪೆಟ್ ಪೋಷಕರನ್ನು ಒಗ್ಗೂಡಿಸುವ, ಜಾಗೃತಿಯನ್ನು ಮೂಡಿಸುವ ಮತ್ತು ಜವಾಬ್ದಾರಿಯುತ ಪೆಟ್ ಮಾಲೀಕತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತದಾದ್ಯಂತ ತನ್ನ ಬೆಳೆಯುತ್ತಿರುವ ಎಕ್ಸ್ಪೀರಿಯನ್ಸ್ ಸೆಂಟರ್ ಗಳ ಜಾಲದೊಂದಿಗೆ, ಝಿಗ್ಲಿಯು ಆಹಾರ, ಗ್ರೂಮಿಂಗ್, ಪಶುವೈದ್ಯಕೀಯ ಸೇವೆಗಳು ಮತ್ತು ಆಕ್ಸೆಸರೀಸ್ ಗಳಿಂದ ಎಲ್ಲಾ ಪೆಟ್ ಕೇರ್ ಅಗತ್ಯಗಳ ಏಕ ನಿಲುಗಡೆ ತಾಣವಾಗಿ ಮುಂದುವರಿಯುತ್ತಿದೆ.

Share This Article