ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕರಾಟೆ ಇಂಡಿಯಾ ಆರ್ಗನೈಜೇಷನ್ ( KIO ) ರವರು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ಸೌತ್ ಇಂಡಿಯಾ ಜೊನಲ್ ಕರಾಟೆ ಚಾಂಪಿಯನ್ಶಿಪ್ 2025 ರಲ್ಲಿ ಚಾಮರಾಜನಗರ ಜಿಲ್ಲೆಯಿಂದ 6 ವಿದ್ಯಾರ್ಥಿಗಳು 14 ವರ್ಷ ಒಳಗಿನ ವಯೋಮಿತಿಯಲ್ಲಿ ಭಾಗವಹಿಸಿ 4- ಚಿನ್ನ,3- ಬೆಳ್ಳಿ, 3- ಕಂಚಿನ ಪದಕ ಗೆಲ್ಲುವುದರ ಮೂಲಕ 10- ಬಹುಮಾನಗಳನ್ನು ಗೆದ್ದು ಜಿಲ್ಲೆಗೆ ಗೌರವ ತಂದಿರುತ್ತಾರೆ.

ಕೊಳ್ಳೇಗಾಲದ ಓಂ ಶಾಂತಿ ರಸ್ತೆ ಕೊನೆಯಲ್ಲಿರುವ ಸಹನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ಭ್ರತ್ವ ಕಣ್ವ -1 ಚಿನ್ನ ಮತ್ತು 1 ಬೆಳ್ಳಿ, ಅನುಶ್ರೀ -1 ಚಿನ್ನ ಮತ್ತು 1 ಬೆಳ್ಳಿ ಗೆದ್ದುಕೊಂಡಿರುತ್ತಾರೆ.
ಈ ಸ್ಪರ್ಧೆಯಲ್ಲಿ ಕರ್ನಾಟಕ,ತಮಿಳ್ ನಾಡು, ಆಂಧ್ರ ಪ್ರದೇಶ್, ತೆಲಂಗಾಣ, ಕೇರಳ ರಾಜ್ಯ ಗಳಿಂದ 1000 ಕ್ಕು ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿರುತ್ತಾರೆ.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ನಂಜುಂಡಸ್ವಾಮಿ ಎನ್ ರವರು ಹಾಗೂ ಮುಖ್ಯ ಶಿಕ್ಷಕರು ಹಾಗೂ ಶಾಲಾ ಶಿಕ್ಷಕ ವೃಂದದವರು ಮತ್ತು ಕರಾಟೆ ತರಬೇತುದಾರ ಹಾಗೂ ಚಾಮರಾಜನಗರ ಜಿಲ್ಲಾ ಕರಾಟೆ ಅಧ್ಯಕ್ಷ -ಕೆ ನಂಜುಂಡಸ್ವಾಮಿ, ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಅಭಿನಂದಿಸಿದರು.