ತಿರುಮಲ (ಆಂಧ್ರ ಪ್ರದೇಶ): ಭಗವಾನ್ ಬಾಲಾಜಿಯ ವರ‍್ಷಿಕ ಉತ್ಸವ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ತಿರುಮಲದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ರ‍್ಷದಂತೆ ಈ ರ‍್ಷವೂ ಬ್ರಹ್ಮೋತ್ಸವವನ್ನು ಅತ್ಯಂತ ವೈಭವದಿಂದ ಆಯೋಜಿಸಲು ಟಿಟಿಡಿಯ ಪರ‍್ವಭಾವಿ ಕರ‍್ಯಗಳು ಭರದಿಂದ ಸಾಗಿವೆ. ಒಂಬತ್ತು ದಿನಗಳ ಬ್ರಹ್ಮೋತ್ಸವದ ಜೊತೆಗೆ ವಾಹನ ಸೇವೆಗಳು ಮತ್ತು ಮೂಲಮರ‍್ತಿಯ ರ‍್ಶನಕ್ಕೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಸೆಪ್ಟಂಬರ್ 24 ರಿಂದ ಅಕ್ಟೋಬರ್ 2ರ ವರೆಗೆ ಒಂಬತ್ತು ದಿನಗಳ ಕಾಲ ಬ್ರಹ್ಮೋತ್ಸವ ನೆರವೇರಲಿದೆ. ಅಸಂಖ್ಯಾತ ಭಕ್ತರ ಆಗಮನ ಹಿನ್ನೆಲೆಯಲ್ಲಿ ಉತ್ಸವದ ಪ್ರಮುಖ ದಿನವಾದ ಗರುಡ ವಾಹನ ಸೇವಾ ದಿನಕ್ಕೆ ವಿಶೇಷ ಗಮನ ನೀಡಲಾಗಿದೆ. ಟಿಟಿಡಿ ಇಒ ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಅವರು ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬ್ರಹ್ಮೋತ್ಸವದ ನರ‍್ವಹಣೆ ಮತ್ತು ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾರೆ.
ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಶ್ರೀವಾರಿ ದೇವಾಲಯದ ಗೋಪುರ, ಕನುಮ ರಸ್ತೆಗಳು ಮತ್ತು ಪುಷ್ಕರಿಣಿಯ ದುರಸ್ತಿ ಪರ‍್ಣಗೊಂಡಿದ್ದು, ನೀರು ತುಂಬಿಸಲಾಗಿದೆ. ಬೀದಿಗಳಲ್ಲಿ ಆಧುನೀಕರಣ ಕರ‍್ಯವನ್ನು ತ್ವರಿತಗೊಳಿಸಲಾಗಿದೆ. ತಿರುಮಲ ದೇವಾಲಯದ ಗೋಪುರ ಮತ್ತು ಸುತ್ತಮುತ್ತಲು ದೀಪಾಲಂಕಾರ ಕರ‍್ಯ ಕೈಗೊಳ್ಳಲಾಗಿದೆ. ಭಕ್ತರು ಯಾವುದೇ ತೊಂದರೆಗಳಿಲ್ಲದೆ ಗರುಡ ವಾಹನ ಸೇವೆಗಳನ್ನು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸ್ವಚ್ಛತೆ ಮತ್ತು ನರ‍್ಮಲ್ಯಕ್ಕೆ ವಿಶೇಷ ಗಮನ ನೀಡಲಾಗಿದೆ. ಜೊತೆಗೆ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಹೊಸದಾಗಿ ನರ‍್ಮಿಸಲಾದ ವೆಂಕಟಾದ್ರಿ ನಿಲಯವನ್ನು ಉದ್ಘಾಟಿಸಲಿದೆ.
ಬ್ರಹ್ಮೋತ್ಸವದ ಮೊದಲ ದಿನದಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೇವರಿಗೆ ರೇಷ್ಮೆ ವಸ್ತ್ರಗಳನ್ನು ರ‍್ಪಿಸಲಿದ್ದಾರೆ. ಶ್ರೀವಾರಿ ಬ್ರಹ್ಮೋತ್ಸವದ ಸ್ಮರಣರ‍್ಥ ಸೆ. 16 ರಂದು ದೇವಾಲಯದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನಂ ನಡೆಯಲಿದೆ. ಸೆ. 23 ರ ಸಂಜೆ, ರ‍್ಚಕರು ಶಾಸ್ತ್ರಗಳ ಪ್ರಕಾರ ಬ್ರಹ್ಮೋತ್ಸವಕ್ಕೆ ದೀಕ್ಷಾ ಸಮಾರಂಭ ನಡೆಸಲಿದ್ದು, 24ರ ಸಂಜೆ 6.15ಕ್ಕೆ ಮೀನ ಲಗ್ನದಲ್ಲಿ ಧ್ವಜಾರೋಹಣ ನೆರವೇರಲಿದೆ. ಅದೇ ದಿನ, ಶ್ರೀವಾರಿ ಬ್ರಹ್ಮೋತ್ಸವದ ವಾಹನ ಸೇವೆಗಳು ರಾತ್ರಿ 9 ಗಂಟೆಗೆ ದೊಡ್ಡ ಶೇಷ ವಾಹನ ಸೇವೆಯೊಂದಿಗೆ ಪ್ರಾರಂಭವಾಗುತ್ತವೆ. ಪ್ರತಿದಿನ ಬೆಳಗ್ಗೆ 8 ರಿಂದ 10ರ ವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 9ರ ವರೆಗೆ ವಾಹನ ಸೇವೆಗಳು ನಡೆಯುತ್ತವೆ. ಶ್ರೀವಾರಿ ಬ್ರಹ್ಮೋತ್ಸವದ ಕೊನೆಯ ದಿನದಂದು ಚಕ್ರಸ್ನಾನ ಜರುಗಲಿದೆ.