Ad image

ಭಾರತದ ವಿರುದ್ಧ ಟ್ರಂಪ್ ವಾಗ್ದಾಳಿ

Team SanjeMugilu
1 Min Read

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ಭಾರತದ ವ್ಯಾಪಾರ ನೀತಿಗಳನ್ನು ಟೀಕಿಸಿದ್ದಾರೆ. ಎರಡೂ ದೇಶಗಳ ನಡುವಿನ ರ‍್ಥಿಕ ಸಂಬಂಧವನ್ನು ಸಂಪರ‍್ಣವಾಗಿ ಅವರು ಏಕಪಕ್ಷೀಯ ಎಂದು ಅವರು ಕರೆದಿದ್ದಾರೆ. ಆದರೆ, ಸತ್ಯ ಏನೆಂದರೆ ಭಾರತವು ಎರಡು ದೇಶಗಳ ನಡುವಿನ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವ ಭರವಸೆಗೆ ಅನುಗುಣವಾಗಿ ಅಮೆರಿಕದಿಂದ ತೈಲ ಮತ್ತು ಅನಿಲ ಖರೀದಿ ಹೆಚ್ಚಿಸಿದೆ.

ಪ್ರಧಾನಿ ಮೋದಿ ರಷ್ಯಾ ಮತ್ತು ಚೀನಾ ಅಧ್ಯಕ್ಷರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರ ಈ ಸೋಷಿಯಲ್ ಮೀಡಿಯಾ ಪೋಸ್ಟ್ ಹೊರ ಬಿದ್ದಿದೆ. ಇದರಲ್ಲಿ ಅವರು ಭಾರತದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

‘‘ಕೆಲವು ಜನರು ರ‍್ಥಮಾಡಿಕೊಳ್ಳದ ವಿಷಯ ಎಂದರೆ ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ. ಆದರೆ ಅವರು ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಅವರು ನಮಗೆ ಬೃಹತ್ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತಾರೆ. ನಾವು ಅವರ ಅತಿದೊಡ್ಡ ಗ್ರಾಹಕ , ಆದರೆ ನಾವು ಅವರಿಗೆ ಬಹಳ ಕಡಿಮೆ ಮಾರಾಟ ಮಾಡುತ್ತಿದ್ದೇವೆ’’ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇಂಧನ ಮತ್ತು ರಕ್ಷಣಾ ಉಪಕರಣಗಳಿಗಾಗಿ ಭಾರತವು ರಷ್ಯಾವನ್ನು ನಿರಂತರವಾಗಿ ಅವಲಂಬಿಸಿರುವುದನ್ನು ಅಮೆರಿಕ ಅಧ್ಯಕ್ಷರು ಉಲ್ಲೇಖಿಸಿದ್ದಾರೆ. ಆದರೆ ಈ ರ‍್ಷದ ಜನವರಿಯಿಂದ ಜೂನ್ ವರೆಗೆ ಭಾರತವು ಅಮೆರಿಕದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದನ್ನ ಶೇಕಡಾ 51 ರಷ್ಟು ಹೆಚ್ಚಾಗಿರುವ ಅಂಶವನ್ನು ಅವರು ಕಡೆಗಣಿಸಿದ್ದಾರೆ.

Share This Article