Ad image

ಸಂಸದ ಸುಧಾಕರ್‌ ಪತ್ನಿ ಹೌಸ್‌ ಅರೆಸ್ಟ್‌ – 14 ಲಕ್ಷ ದೋಚಿದ ಸೈಬರ್‌ ಕಳ್ಳರು

Team SanjeMugilu
2 Min Read

ಬೆಂಗಳೂರು:ಬಿಜೆಪಿ ಸಂಸದ ಡಾ ಕೆ ಸುಧಾಕರ್ ಪತ್ನಿಯನ್ನು ಹೌಸ್ ಅರೆಸ್ಟ್ ಮಾಡಿದ ಸೈಬರ್ ವಂಚಕರು 14 ಲಕ್ಷ ರೂ. ಹಣ ಕಿತ್ತಿದ್ದಾರೆ. ವೈದ್ಯರಾಗಿರುವ ಸಂಸದರ ಪತ್ನಿಗೆ ಹೀಗೆ ಹೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ ಹಣ ಕಿತ್ತು ಸೈಬರ್ ಚೋರರು ಸವಾಲೆಸೆದಿದ್ದಾರೆ.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡರ 3 ಲಕ್ಷ ಹಣವನ್ನ ಸೈಬರ್ ಚೋರರು ವಂಚಿಸಿದ್ರು. ಇದೀಗ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಪತ್ನಿ, ವೃತ್ತಿಯಲ್ಲಿ ವೈದ್ಯೆಯಾಗಿರೊ ಡಾ ಪ್ರೀತಿ ರವರಿಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 14 ಲಕ್ಷ ವಂಚಿಸಿದ್ದಾರೆ.

ವಂಚನೆ ಎಸಗಿದ್ದು ಹೇಗೆ?
ಕಳೆದ ಆಗಸ್ಟ್ 26 ರಂದು ಡಾ. ಪ್ರೀತಿ ಸುಧಾಕರ್ ಅವರ ಮೊಬೈಲಿಗೆ ಸೈಬರ್ ವಂಚಕರು ಕರೆ ಮಾಡಿ, ನಾವು ಮುಂಬೈ ಸೈಬರ್ ವಿಭಾಗದಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡು ನಿಮ್ಮ ಹೆಸರಲ್ಲಿ ಕ್ರೆಡಿಡ್ ಕಾರ್ಡ್ ಮಾಡಿಸಿ ಅದರಿಂದ ಅಕ್ರಮ ವ್ಯವಹಾರ ನಡೆಸಿ ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್‌ ದೇಶಗಳಿಗೆ ಕಾನೂಬಾಹಿರ ಚಟುವಟಿಕೆ ನಡೆಸಲು ಜನರನ್ನ ಕಳುಹಿಸಿದ್ದಾನೆ. ಈ ಪ್ರಕರಣದಲ್ಲಿ ಸದ್ಬತ್ ಖಾನ್ ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಇದರ ವಿಚಾರಣೆ ಅವಶ್ಯಕತೆಯಿದ್ದು ವೀಡಿಯೊಕಾಲ್ ಅಟೆಂಡ್ ಮಾಡುವಂತೆ ಸೂಚಿಸಿದ್ದಾರೆ.

ಅಷ್ಟೇ ಅಲ್ಲದೇ ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡೋದಾಗಿ ಬೆದರಿಸಿದ್ದಾರೆ. ನಿಮ್ಮ ಖಾತೆ ಅಕ್ರಮ ಆಗಿದ್ದು ಅದನ್ನು ಪರಿಶೀಲಿಸಲು ಹಣ ಹಾಕಿ ಎಂದು ಬೆದರಿಸಿ ಡಾ.ಪ್ರೀತಿ ಅವರಿಂದ 14 ಲಕ್ಷ ರೂ. ಹಣ ಹಾಕಿಸಿಕೊಕೊಂಡಿದ್ದಾರೆ.

ಹಣ ಹಾಕಿದ ಬಳಿಕ ಆರ್‌ಬಿಐ ನಿಯಮ ಪರೀಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕುವುದಾಗಿ ಹೇಳಿದ್ದಾರೆ. ವಂಚಕರು ಹೇಳಿದ ಖಾತೆಗೆ ಪ್ರೀತಿ ಸುಧಾಕರ್ 14 ಲಕ್ಷ ರೂ.ಹಣವನ್ನ ಹಾಕಿದ್ದಾರೆ. ಹಣ ಹಾಕಿದ ನಂತರ ವಂಚಯಾಗಿರುವುದು ಗೊತ್ತಾಗಿ ವೆಸ್ಟ್ ಸೆನ್ ಠಾಣೆಗೆ ದೂರು ನೀಡಿದ್ದಾರೆ.

ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಡಿಸಿಪಿ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಣ ಹಾಕಿದ ಖಾತೆಯನ್ನು ಫ್ರೀಜ್‌ ಮಾಡಲಾಗಿದೆ. ಖಾತೆಯಿಂದ 14 ಲಕ್ಷ ರೂ. ಹಣವನ್ನು ಪ್ರೀತಿ ಅವರಿಗೆ ನೀಡಲಾಗಿದ್ದು ಸೈಬರ್‌ ಕಳ್ಳರ ಬಂಧನಕ್ಕೆ ಪೊಲೀಸರು ಈಗ ಬಲೆ ಬೀಸಿದ್ದಾರೆ.

 

Share This Article