‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಂಸತ್ ಅವರು ಯುವರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ.
ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಉದ್ದಕ್ಕೂ ರುಕ್ಮಿಣಿ ವಸಂತ್ ಅವರು ಮಿಂಚಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ತೂಕ ಇರುವ ಸೂಚನೆ ಟ್ರೇಲರ್ ನಲ್ಲಿ ಸಿಕ್ಕಿದೆ.
ಟ್ರೇಲರ್ ನಲ್ಲಿ ರುಕ್ಮಿಣಿ ವಸಂತ್ ಅವರು ವಾರಿಯರ್ ಆಗಿಯೂ ಕಾಣಿಸಿಕೊಂಡಿದ್ದಾರೆ ಎನ್ನಬುದು. ಅವರು ಯುದ್ಧ ಭೂಮಿಗೆ ಇಳಿದು ಹೋರಾಡುತ್ತಾರೆ. ಅವರು ಆ್ಯಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆಯುವ ಸೂಚನೆಯನ್ನು ನೀಡಲಾಗಿದೆ.
`ಕಾಂತಾರ’ ಚಿತ್ರದಲ್ಲಿ ರಾಂಪಾ ಆಗಿ ಕಾಣಿಸಿಕೊಂಡಿದ್ದ ಪ್ರಕಾಶ್ ತುಮಿನಾಡ್ ಅವರು ಪ್ರೀಕ್ವೆಲ್ ನಲ್ಲೂ ಇದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಎಷ್ಟು ವಿಸ್ತಾರವಾಗಿದೆ ಎಂಬುದು ಸಿನಿಮಾದಲ್ಲಿ ತಿಳಿಯಲಿದೆ.
ಕನ್ನಡದವರೇ ಆದ ಗುಲ್ಶನ್ ದೇವಯ್ಯ ಅವರು ಯುವ ರಾಜನ ಪಾತ್ರದಲ್ಲಿ ನಟಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಅವರ ಪಾತ್ರ ಹೈಲೈಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ.
ಈ ಮೊದಲೇ ಹೇಳಿದಂತೆ ರಿಷಬ್ ಶೆಟ್ಟಿ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಯುದ್ಧ ಕಲೆಗಳನ್ನು ಕಲಿತಿದ್ದಾರೆ. ಅದು ಟ್ರೇಲರ್ ನಲ್ಲಿ ಹೈಲೈಟ್ ಆಗಿದೆ. ಅವರು ಈ ಚಿತ್ರದ ನಿರ್ದೇಶಕರು ಕೂಡ ಹೌದು.