Ad image

ರಜೆ ಮುಗಿಯುತ್ತಿದ್ದಂತೆ ಶಾಲೆ ಆರಂಭ; ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ!

Team SanjeMugilu
2 Min Read

ಬೆಂಗಳೂರು: ಬಂಗಾರಪ್ಪನವರ  ಕಾಲದಲ್ಲಿ ಕನ್ನಡ ಶಾಲೆಗಳಿಗೆ  ಅನುದಾನ ನೀಡಲಾಗಿತ್ತು. ರಾಜ್ಯಾದ್ಯಂತ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವನ್ನು ಮುಂದುವರೆಸುತ್ತೇವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಿಗೆ  ಸಮಾನ ಪ್ರಾಮುಖ್ಯತೆ ನೀಡುತ್ತೇವೆ ಸಚಿವ ಮಧು ಬಂಗಾರಪ್ಪ ಎಂದು ಭರವಸೆ ನೀಡಿದ್ದಾರೆ.
ಜಾತಿಗಣತಿ ಸಮೀಕ್ಷೆಯ ಬಗ್ಗೆ ಮಾತನಾಡಿದ ಸಚಿವರು, ತಾಂತ್ರಿಕ ಸಮಸ್ಯೆಗಳು ಸ್ವಾಭಾವಿಕ, ಆದರೆ ಬ್ಯಾಕಪ್ ವ್ಯವಸ್ಥೆ ಇದೆ. ಸಮೀಕ್ಷೆಯಲ್ಲಿ ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸಮೀಕ್ಷೆಗೆ ಶಿಕ್ಷಕರನ್ನು ದಸರಾ ರಜೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಬಿಜೆಪಿಯವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರನ್ನು ಬಳಸದೆ ಬೇರೆ ಪರ್ಯಾಯ ಇಲ್ಲ ಎಂದಿದ್ದಾರೆ.
ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು ನಮ್ಮ ಆಧ್ಯತೆ ಇದ್ದು, ಇದು ಜಾತಿಗಳ ಗಣತಿ ಅಲ್ಲ. ಎಲ್ಲಾ ಎಲ್ಲ ವರ್ಗದವರಿಗೂ ಸಮಾನತೆ ಕೊಡಲು ಇದು ಅವಶ್ಯವಾಗಿದೆ. ಶಿಕ್ಷಕರಿಗೆ ಸಮೀಕ್ಷೆ ಚೆನ್ನಾಗಿ ಮಾಡಿಕೊಡಿ, ಸಹಕಾರ ಕೊಡಿ ಅಂತ ಮನವಿ ಮಾಡಿಕೊಂಡಿದ್ದೇವೆ. ಶಿಕ್ಷಕರು ಸಹ ಅವರ ಹಕ್ಕು ಎಂದು ಭಾವಿಸಿ ಸಮೀಕ್ಷೆ ಮಾಡಬೇಕು. ಹತ್ತು ಜನ ನಾವು ಸಮೀಕ್ಷೆ ಮಾಡಲ್ಲ ಅಂದರೆ ಅವರೇ ಅವರ ಹಕ್ಕು ಉಲ್ಲಂಘನೆ ಮಾಡಿದಂತೆ. ಮನೆ ಬಳಿ ಬರುವ ಶಿಕ್ಷಕರಿಗೆ ಜನರೂ ಕೂಡಾ ಸಹಕಾರ ಕೊಡಬೇಕು. ಶಿಕ್ಷಕರಿಗೆ ಅಂತ ದಸರಾ ರಜೆ ಕೆಲ ದಿನ ವಿಸ್ತರಣೆ ಮಾಡುವುದು ಈ ಹಂತದಲ್ಲಿ ಕಷ್ಟ, ದಸರಾ ರಜೆ ವಿಸ್ತರಣೆ ಪ್ರಸ್ತಾಪ ಇಲ್ಲ. ದಸರಾ ರಜೆ ಮುಗಿಯುತ್ತಿದ್ದಂತೆ ಶಾಲೆಗಳು ಆರಂಭ ಆಗುತ್ತವೆ. ಸಮೀಕ್ಷೆಯಲ್ಲಿ ಭಾಗಿಯಾದ ಶಿಕ್ಷಕರಿಗೆ ಪರ್ಯಾಯ ರಜೆ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಕ್ರಿಶ್ಚಿಯನ್ ಎಂಬ ಪದದಿಂದ ಗೊಂದಲ ಉಂಟಾಗುತ್ತಿದೆ ಎಂಬ ಆಕ್ಷೇಪಕ್ಕೆ ಉತ್ತರಿಸಿದ ಸಚಿವರು, ನಾನು ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಮುಖ್ಯಮಂತ್ರಿಯವರೂ ಈ ಪದವನ್ನು ತೆಗೆಯಲು ಸೂಚಿಸಿದ್ದಾರೆ. ಬಿಜೆಪಿಯವರು ಜಾತಿಗಣತಿಯನ್ನು ವಿರೋಧಿಸುವುದರ ಮೂಲಕ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಾವು ಸಮಾನತೆ ತರಲು ಈ ಸಮೀಕ್ಷೆ ಮಾಡುತ್ತಿದ್ದೇವೆ, ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಶರಾವತಿ ಯೋಜನೆ, ಜನರ ವಿಶ್ವಾಸದೊಂದಿಗೆ ಅಭಿವೃದ್ಧಿ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸ್ಥಳೀಯರ ವಿರೋಧದ ಬಗ್ಗೆ ಮಾತನಾಡಿದ ಸಚಿವರು, ಜನರು ವಿರೋಧಿಸಿದರೆ ಧಿಕ್ಕರಿಸಿ ಯೋಜನೆ ಜಾರಿಗೊಳಿಸುವುದಿಲ್ಲ. ಆದರೆ ರಾಜ್ಯಕ್ಕೆ ವಿದ್ಯುತ್ ಉತ್ಪಾದನೆಯೂ ಅಗತ್ಯ. ಜನರಿಗೆ ತಿಳುವಳಿಕೆ ನೀಡಿ, ಒಮ್ಮತದಿಂದ ತೀರ್ಮಾನ ಕೈಗೊಳ್ಳುತ್ತೇವೆ. ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದ ಅವರು, ಬಿಜೆಪಿಯವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಟೀಕಿಸಿದ್ದಾರೆ. ಅಭಿವೃದ್ಧಿಯ ಜೊತೆಗೆ ಜನರ ವಿಶ್ವಾಸವನ್ನೂ ಗಳಿಸಬೇಕು ಎಂದು ಒತ್ತಿ ಹೇಳಿದ್ದಾರೆ.
ಜಿಎಸ್‌ಟಿ, ಕೇಂದ್ರದ ನೀತಿಗೆ ಟೀಕೆ
ಸಚಿವ ಮಧು ಬಂಗಾರಪ್ಪ ಅವರು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಜಿಎಸ್‌ಟಿ ಮೂಲಕ ಸಂಗ್ರಹವಾಗುವ ತೆರಿಗೆಯಲ್ಲಿ ಸಮರ್ಪಕ ಪಾಲನ್ನು ನೀಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಿಂದ ದೊಡ್ಡ ಮೊತ್ತದ ತೆರಿಗೆ ಕೇಂದ್ರಕ್ಕೆ ಹೋಗುತ್ತಿದೆ, ಆದರೆ ನಮಗೆ ಬರುವ ಹಣದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಬಿಜೆಪಿಯವರು ಸಂಭ್ರಮಾಚರಣೆ ಮಾಡುವ ಬದಲು ರಾಜ್ಯಕ್ಕೆ ಸಿಗಬೇಕಾದ ಹಣವನ್ನು ತರುವ ಕೆಲಸ ಮಾಡಬೇಕಿದೆ. ಕೇಂದ್ರದ ಜಿಎಸ್‌ಟಿ ನೀತಿಯನ್ನು ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಬಿಜೆಪಿ ವಿರೋಧಿಸಿತ್ತು ಎಂದು ನೆನಪಿಸಿದ್ದಾರೆ. ಈಗ ಇವರೇ ಜಿಎಸ್‌ಟಿಯನ್ನು ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ನಾಚಿಕೆ ಆಗಬೇಕು ಎಂದು ಟೀಕಿಸಿದ್ದಾರೆ.

Share This Article