Ad image

ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

Team SanjeMugilu
1 Min Read
ವಿಚ್ಛೇದನ ಪಡೆದು ಒಂಟಿಯಾಗಿದ್ದ ಸಮಂತಾ ಹೆಸರು ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು  ಜೊತೆ ಥಳುಕು ಹಾಕಿಕೊಂಡಿತ್ತು. ದುಬೈನಲ್ಲಿ ಇಬ್ಬರೂ ಕೈ ಹಿಡಿದು ಓಡಾಡುವ ಫೋಟೋ ವೈರಲ್ ಆದ್ಮೇಲಂತೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಮುಂಬೈನ ಬಾಂದ್ರಾದಲ್ಲಿ ಒಟ್ಟಿಗೆ ಕಾಣಿಸ್ಕೊಂಡು ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ಪ್ರೀತಿ ವದಂತಿಗೆ  ಇನ್ನಷ್ಟು ರೆಕ್ಕೆ ಪುಕ್ಕ ಬಂದಂತಾಗಿದೆ.

ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಕೊಂಚ ಹೆಚ್ಚೇ ಅನ್ಯೋನ್ಯವಾಗಿರೋದು ಹಲವು ಬಾರಿ ಸುದ್ದಿಯಾಗಿತ್ತು. ಇಬ್ಬರೂ ಒಟ್ಟಿಗೆ ಫ್ಯಾಮಿಲಿ ಮ್ಯಾನ್ ಹಾಗೂ ಸಿಟಾಡೆಲ್ ವೆಬ್‍ಸಿರೀಸ್‍ಗಳನ್ನ ಮಾಡುವಾಗ ಹೆಚ್ಚಿನ ಒಡನಾಟ ಸಾಮಾನ್ಯ. ಆದರೂ ಅದಕ್ಕೂ ಮೀರಿ ಇಬ್ಬರ ನಡುವಿನ ಸ್ನೇಹ, ಪ್ರೀತಿಗೆ ತಿರುಗಿದೆ ಎನ್ನಲಾಗಿತ್ತು. ಇದೀಗ ಆ ವದಂತಿಗೆ ಬಲವಾದ ಸಾಕ್ಷ್ಯ ಸಿಕ್ಕಂತಾಗಿದೆ. ಇನ್ಮೇಲೆ ಯಾಕೆ ಮುಚ್ಚುಮರೆ ಎಂಬಂತೆ ಒಟ್ಟಿಗೆ ಕಾಣಿಸ್ಕೊಂಡಿದೆ ಈ ಜೋಡಿ.

ರೆಗ್ಯುಲರ್ ಆಗಿ ಮುಂಬೈನಲ್ಲಿ ಸಮಂತಾ ಜಿಮ್ ಮುಗಿಸಿ ವಾಪಸ್ ಬರುವಾಗ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಈ ಬಾರಿ ವಿಶೇಷ ಅಂದ್ರೆ ಸಮಂತಾ ಜೊತೆ ರಾಜ್ ಕೂಡ ಕಾಣಿಸ್ಕೊಂಡಿದ್ದಾರೆ. ಮೊದಲು ರಾಜ್ ಹೊರಬಂದು ಕಾರಿನೊಳಗೆ ಕುಳಿತ್ರು. ಬಳಿಕ ಒಂದೇ ನಿಮಿಷದಲ್ಲಿ ಸಮಂತಾ ಹೊರಬಂದು ಅದೇ ಕಾರಿನಲ್ಲಿ ಕುಳಿತು ಜೊತೆಯಾಗಿ ತೆರಳಿದ್ದಾರೆ. ಪ್ರಸ್ತುತ ಈ ಬೆಳವಣಿಗೆ ಇಬ್ಬರ ನಡುವೆ ಪ್ರೀತಿ ಚಿಗುರಿರೋ ಸುದ್ದಿಗೆ ಸೀಲ್ ಹೊಡೆದಂತಾಗಿದೆ. ಈ ಬಗ್ಗೆ ಸಮಂತಾ ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೋ ಕಾದು ನೋಡ್ಬೇಕು.
Share This Article