Ad image

ಪ್ರತಿಷ್ಠಿತ PES ಶಿಕ್ಷಣ ಸಂಸ್ಥೆಗಳಿಗೆ ಐಟಿ ಶಾಕ್

Team SanjeMugilu
2 Min Read

ಬೆಂಗಳೂರು : ಆದಾಯ ಮೀರಿ ಅಸ್ತಿಗಳಿಕೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆ ಪ್ರತಿಷ್ಠಿತ ಪಿಇಎಸ್​ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ  ನಡೆದಿದೆ. ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನ PES ಕಾಲೇಜುಗಳು  ಸೇರಿದಂತೆ ಹಲವು ಕಡೆಯ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕಾಲೇಜಿನ ಮಾಲೀಕರ ಮೇಲೆ ದಾಳಿ
ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಕಾಲೇಜಿನ ಮಾಲೀಕರು, ಆಡಳಿತ ಮಂಡಳಿಯವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ. ಹೊಸಕೆರೆಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಹನುಮಂತನಗರ ಸೇರಿದಂತೆ ಕೆಲ ಕಡೆಗಳ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಬೆಳ್ಳಂ ಬೆಳಗ್ಗೆ ದಾಳಿ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಇಂಚಿಂಚು ಬಿಡದೆ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಹೊರ ರಾಜ್ಯಗಳ ಶಾಖೆ ಮೇಲೂ ದಾಳಿ
ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು , ಎಲೆಕ್ಟ್ರಾನಿಕ್ ಸಿಟಿ ಕಾಲೇಜ್ , ಹನುಮಂತನಗರ ಕಾಲೇಜ್ , ಆಂಧ್ರದ ಕುಪ್ಪಂ ಕಾಲೇಜ್ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ ಶಾಖೆಗಳ ಮೇಲೆ ದಾಳಿ ನಡೆದಿದೆ ಎನ್ನಲಾಗ್ತಿದೆ.
ದೊರೆಸ್ವಾಮಿ ನಾಯ್ಡು ಮನೆ ಮೇಲೂ ರೇಡ್​
ಬನಶಂಕರಿ ಬಿಡಿಎ ಕಾಂಪ್ಲೇಕ್ಸ್ ಬಳಿಯ ದೊರೆಸ್ವಾಮಿ ನಾಯ್ಡು ಇದ್ದ ಮನೆ ಮೇಲೂ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲದೇ ದೊರೆಸ್ವಾಮಿ‌ ಸಂಬಂಧಿಕರ ಮನೆ ಮೇಲೂ ರೇಡ್ ಆಗಿದೆ ಎಂದು ತಿಳಿದು ಬಂದಿದೆ. ದೊರೆಸ್ವಾಮಿ ನಿಧನದ ಬಳಿಕ ಮಗ ಸಂಸ್ಥೆಯ ಜವಾಬ್ದಾರಿ ನೋಡಿಕೊಳ್ತಿದ್ದಾರೆ.
100 ಕ್ಕೂ ಹೆಚ್ಚು ಅಧಿಕಾರಿಗಳಿಂದ ರೇಡ್​
ಚೆನ್ನೈ , ಮಂಗಳೂರು, ಆಂಧ್ರದಿಂದ ಬಂದಿರೋ ಸುಮಾರು 100 ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ. ಆದಾಯಕ್ಕೆ‌ ಮೀರಿದ ಆಸ್ತಿಗಳಿಕೆ ಆರೋಪ ಹಾಗೂ ತೆರಿಗೆ ವಂಚನೆ ಮಾಡಿರೋ ಆರೋಪ ಹಿನ್ನಲೆ ದಾಳಿ ನಡೆದಿದೆ ಎನ್ನಲಾಗ್ತಿದೆ.
ದೊರೆಸ್ವಾಮಿ ಪುತ್ರನ ವಿಚಾರಣೆ ಸಾಧ್ಯತೆ
ಸದ್ಯ ಪಿಇಎಸ್ ಶಿಕ್ಷಣ ಸಂಸ್ಥೆಗಳನ್ನ ದೊರೆಸ್ವಾಮಿ ಪುತ್ರ ಜವಹರ್ ದೊರೆಸ್ವಾಮಿ ನೋಡಿಕೊಳ್ತಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಮೇಲೆ ಐಟಿ ದಾಳಿ ನಡೆಸಿದ್ದು, ಮೂರು ಇನೋವಾ ಕಾರು ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ರೇಡ್​ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಕಾಲೇಜಿನ ಹಣಕಾಸು ಲೆಕ್ಕ, ಪೀಠೋಪಕರಣಗಳ ಖರೀದಿ ಹಾಗೂ ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ಖರ್ಚು ಮಾಡಿರುವ ಹಣದ ಬಗ್ಗೆ ವಿವರಣೆಗಳನ್ನ ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದ ಮಾಹಿತಿಯನ್ನ ಕೂಡ ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರಂತೆ.

Share This Article