Ad image

ಪತ್ನಿ ಶೀಲ ಶಂಕಿಸಿ ಜನ್ಮ ಕೊಟ್ಟ ತಂದೆಯಿಂದಲೇ ಮಕ್ಕಳ ಬರ್ಬರ ಹತ್ಯೆ!

Team SanjeMugilu
1 Min Read
ಯಾದಗಿರಿ: ಪತ್ನಿಯ  ಶೀಲ ಶಂಕಿಸಿ ಹೆತ್ತ ತಂದೆಯೇ ತನ್ನ ಮಕ್ಕಳನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿ  ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ.

ಮಲಗಿದ್ದ ಮಕ್ಕಳ ಮೇಲೆ ಕ್ರೌರ್ಯ ಮೆರೆದ ರಾಕ್ಷಸ ತಂದೆ ಶರಣಪ್ಪ. ತಾಯಿ ಬಹಿರ್ದೆಸೆಗೆ ಹೋಗಿದ್ದಾಗ ಮಕ್ಕಳನ್ನ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ. ಸಾನ್ವಿ (5), ಭರತ (3) ಮೃತ ದುರ್ದೈವಿ ಮಕ್ಕಳು. ಮತ್ತೋರ್ವ ಮಗನ ಸ್ಥಿತಿ ಗಂಭಿರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಶರಣಪ್ಪನ ಪತ್ನಿ ಕಳೆದ ಕೆಲ ದಿನಗಳಿಂದ ಗಂಡನೊಂದಿಗೆ ಹೊಂದಾಣಿಕೆಯಾಗದೇ ತವರು ಮನೆ ಸೇರಿದ್ದಳು. ಹದಿನೈದು ದಿನಗಳ ಹಿಂದಷ್ಟೇ ಪತ್ನಿಯನ್ನ ಶರಣಪ್ಪ ಕರೆತಂದಿದ್ದ. ಮಗಳು ಸಾನ್ವಿ ಜೊತೆ ಹೋಗಿ ಕರೆದುಕೊಂಡು ಬಂದಿದೆ.

ಬೆಳಗ್ಗೆ ಹೆಂಡತಿ ಬಹಿರ್ದೆಸೆಗೆ ಹೋಗಿದ್ದಾಗ ಮಲಗಿದ್ದ ಮಕ್ಕಳನ್ನ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಒಬ್ಬರು ಮಕ್ಕಳು ಸಾವನ್ನಪ್ಪಿದ್ರೆ, ಮತ್ತೋರ್ವ ಮಗನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಯಾದಗಿರಿ ಡಿವೈಎಸ್ಪಿ ಸುರೇಶ್ ನಾಯಕ್, ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ಪರಿಶೀಲಿಸಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Share This Article