ಬೆಂಗಳೂರು ದಕ್ಷಿಣ : ರಾಜಕೀಯದಲ್ಲಿ ಪಕ್ಷಾಂತರ ಪರ್ವ ಸಾಮಾನ್ಯವಾಗಿದೆ. ಚುನಾವಣೆ ಹತ್ತಿರ ಬರ್ತಿದ್ದಂತೆ ನಾಯಕರು ಪಕ್ಷಾಂತರಗೊಳ್ಳೋದು ಸಾಮಾನ್ಯವಾಗಿದೆ. ಜೆಡಿಎಸ್ಗೆ ಬಿಗ್ ಶಾಕ್ ಕೊಡಲು ಜೆಡಿಎಸ್ ಮಾಜಿ ಶಾಸಕ ಮುಂದಾದಂತೆ ಕಾಣ್ತಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ರೂ, ಪಕ್ಷಾಂತರದ ಭೀತಿ ಇದೆ. ಮಾಜಿ ಶಾಸಕ ಮಾಗಡಿ ಮಂಜುನಾಥ್ ಆರ್ಎಸ್ಎಸ್ ಕಾರ್ಯಕ್ರಮದ ರುವಾರಿಯಂತೆ ವೇಷ ಧರಿಸಿದ್ದಾರೆ. ಮಂಜುನಾಥ್ ನಡೆ ಭಾರೀ ಕುತೂಹಲ ಮೂಡಿಸಿದ್ದು, ಜೆಡಿಎಸ್ ಮಾಜಿ ಶಾಸಕ ಬಿಜೆಪಿಯತ್ತ ಮುಖ ಮಾಡ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
RSS ಗಣವೇಷಧಾರಿಯಾದ ಜೆಡಿಎಸ್ ಮಾಜಿ ಶಾಸಕ
ಮಾಗಡಿ ಜೆಡಿಎಸ್ ಮಾಜಿ ಶಾಸಕ ಮಂಜುನಾಥ್ ಅಧಿಕಾರ, ಅಸ್ತಿತ್ವಕ್ಕಾಗಿ ಬಿಜೆಪಿಯತ್ತ ಮುಖ ಮಾಡೋದು ಪಕ್ಕಾ ಎನ್ನಲಾಗ್ತಿದೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಇದ್ರು, ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ನಾಯಕರು ಭಾಗಿಯಾಗೋದು ಕಡಿಮೆ. ಇದೀಗ ಮಾಗಡಿ ಮಂಜುನಾಥ್ RSS ಬಟ್ಟೆ ತೊಟ್ಟು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ್
ಮಾಗಡಿ ಮಾಜಿ ಜೆಡಿಎಸ್ ಶಾಸಕ, ಬೆಂಗಳೂರು ದಕ್ಷಿಣ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ್, ಇದೇ ಅಕ್ಟೋಬರ್ 2 ರಂದು ಬಿಡದಿಯಲ್ಲಿ ನಡೆಯುವ RSS ಕಾರ್ಯಕ್ರಮದ ರೂವಾರಿಯಂತೆ ಪ್ರಚಾರಕ್ಕೆ ಇಳಿದಿದ್ದಾನೆ. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ RSS ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನ ನೀಡಿದ್ದು ಸರೀನಾ ಎನ್ನುವ ಚರ್ಚೆ ಶುರುವಾಗಿದೆ.
ಗೊಂದಲ ಮೂಡಿಸಿದ ಮಂಜುನಾಥ್ ನಡೆ
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಅಸ್ತಿತ್ವ ಕಳೆದುಕೊಳ್ತಿರುವ ಭೀತಿ ಜೊತೆಗೆ ಈ ಸಮಯದಲ್ಲಿ ಪಕ್ಷದ ಮಾಜಿ ಶಾಸಕನಿಂದಲೇ RSSಗೆ ಬೆಂಬಲ ಸಿಗ್ತಿರೋದು ಭಾರೀ ಕುತೂಹಲ ಮೂಡಿಸಿದೆ. ಜೊತೆಗೆ ಮಂಜುನಾಥ್ ನಡೆ ತೀವ್ರಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ದೇವೇಗೌಡರ ಕುಟುಂಬದ ಆಪ್ತ ದೂರು ದೂರ!?
ಮಾಗಡಿ ಮಂಜುನಾಥ್, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಅತ್ಯಾಪ್ತರಾಗಿದ್ದಾರೆ. ಜೆಡಿಎಸ್ ನಿಂದ ಮಾಗಡಿ ಶಾಸಕರಾಗಿ ಕೆಲಸ ಮಾಡಿದ್ರು. ಸದ್ಯ ಮಂಜುನಾಥ್ ಬೆಂಗಳೂರು ದಕ್ಷಿಣ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸಕ್ರಿಯರಾಗಿದ್ದಾರೆ.
ಜೆಡಿಎಸ್ ತೊರೆಯಲು ಮುಂದಾದ್ರಾ ಮಂಜುನಾಥ್?
ಇದೀಗ ಆರ್ಎಸ್ಎಸ್ ಬಟ್ಟೆ ತೊಟ್ಟ ಮಂಜು ನಡೆಯಿಂದ ಮಾಗಡಿ ಹಾಗೂ ಜಿಲ್ಲಾ ಜೆಡಿಎಸ್ನಲ್ಲಿ ಗೊಂದಲ ಸೃಷ್ಟಿಯಾಗಿದೆ. ಜೆಡಿಎಸ್ ತೊರೆಯಲು ಮುಂದಾದ್ರಾ ಎನ್ನುವ ಅನುಮಾನ ಮೂಡಿದೆ. ಭವಿಷ್ಯದಲ್ಲಿ ಮಂಜುನಾಥ್ ಮಾಗಡಿ ಬಿಜೆಪಿ ಅಭ್ಯರ್ಥಿ ಆಗ್ತಾರಾ ಎಂಬ ಗುಸುಗುಸು ಕೂಡ ಶುರುವಾಗಿದೆ.