Ad image

ಬೆಂಗಳೂರು ಪೊಲೀಸರಿಂದ ಬರೋಬ್ಬರಿ 23 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ಭರ್ಜರಿ ಬೇಟೆ

Team SanjeMugilu
1 Min Read

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿಗೆ ಗಾಂಜಾ, ಡ್ರಗ್ಸ್ ದಂಧೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ 10 ಲಕ್ಷ ರೂ.ಗಳ ಗಾಂಜಾ ಪ್ರಕರಣ ಭೇದಿಸಿದ ಬೆನ್ನಲ್ಲೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ವಿದೇಶಿ ಪ್ರಜೆಗಳನ್ನು ಸೇರಿ 6 ಆರೋಪಿಗಳನ್ನು ಕೆ.ಜಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿದೇಶದಿಂದ ಮಾದಕವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಕೆಜಿ ನಗರದ ಅಂಚೆ ಕಚೇರಿಗೆ ಬರುತ್ತಿದ್ದ ಪಾರ್ಸೆಲ್ ಪತ್ತೆ ಹಚ್ಚಿದ ಪೊಲೀಸರು ಮಾದಕವಸ್ತುಗಳನ್ನು ವಶಕ್ಕೆ ಪಡದಿದ್ದಾರೆ.

ಬೆಂಗಳೂರು ಪೊಲೀಸರಿಂದ ಮಾದಕ ವಸ್ತುಗಳ ಭರ್ಜರಿ ಬೇಟೆಯಾಡಿ ಬರೊಬ್ಬರಿ 23‌ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ವಿದೇಶೀ ಪ್ರಜೆಗಳಿಂದ ಕೂಡಿದ 6 ಆರೋಪಿಗಳ ಗುಂಪು ಮಾದಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇವರು ನಕಲಿ ಕ್ರಿಪ್ಟೋ ಕರೆನ್ಸಿ ಮೂಲಕ ಥೈಲ್ಯಾಂಡ್ ಹಾಗೂ ಜರ್ಮನಿ ದೇಶಗಳಿಂದ ಹೈಡ್ರೋಗಾಂಜಾ ಖರೀದಿ ಮಾಡುತ್ತಿದ್ದರು. ಕೆಜಿ ನಗರದ ಸರ್ಕಾರಿ ಅಂಚೆ ಕಚೇರಿಗೆ ಗಾಂಜಾ ಪಾರ್ಸೆಲ್ ಬರುತ್ತಿತ್ತು.

ಈ ಹಿಂದೆ ಕೂಡ ಇದೇ ವಿದೇಶದಿಂದ ಡ್ರಗ್ ಸರಬರಾಜು ಆಗುತ್ತಿತ್ತು.ಇದೀಗ ಪೋಸ್ಟ್ ಆಫೀಸ್ನಲ್ಲಿ ಅನುಮಾನಾಸ್ಪದ ಪಾರ್ಸಲ್ ಬಂದ ಕಾರಣದಿಂದ ಪರೀಶಿಲನೆ ನಡೆಸಲಾಗಿತ್ತು. ಸ್ನಿಫರ್ ಶ್ವಾನಗಳ ಮೂಲಕ ಮಾದಕ ವಸ್ತುಗಳನ್ನು ಪತ್ತೆ ಹಚ್ಚಿದ ಪೊಲೀಸರು , ಸದ್ಯ ಆರೋಪಿಗಳನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ 3 ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಬಂಧಿತರಿಂದ ಒಟ್ಟೂ 7.ಕೆಜಿ ಹೈಡ್ರೋ ಗಾಂಜ , 1. 3999 ಕೆಜಿ ಎಂಡಿಎಂಎ ಕ್ರಿಸ್ಟಲ್ ,2 ಕೆಜಿ ಅಫೀಮ್ ವಶಕ್ಕೆ ಪಡೆಯಲಾಗಿದೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು 4 ಕೋಟಿ ಮೌಲ್ಯದ 1.399 ಕೆಜಿ ಎಂಡಿಎಂಎ ಕ್ರಿಸ್ಟಲ್‌ ಮತ್ತು 2.30 ಕೆಜಿ ಅಫೀಮ್ ವಶಕ್ಕೆ ಪಡೆದಿದ್ದಾರೆ. ಇನ್ನು ಕೆ ಜಿ ನಗರ ಠಾಣಾ ವ್ಯಾಪ್ತಿಯಲ್ಲಿ 3.81 ಕೋಟಿ ಮೌಲ್ಯದ 7 ಕೆಜಿ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕೊತ್ತನೂರು ಪೊಲೀಸ್ ಠಾಣೆಯ ಪೊಲೀಸರಿಗೆ 12.03 ಕೋಟಿ ಮೌಲ್ಯದ 4.851 ಕೆಜಿ ಎಂಡಿಎಂಎ ಕ್ರಿಸ್ಟಲ್ ಸಿಕ್ಕಿದೆ.

Share This Article