ಬೆಂಗಳೂರು: ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಈಗಾಗಲೇ ಅರ್ಜಿ ಆಹ್ವಾನ ಆಗಿದೆ. ಬೆಂಗಳೂರಿನ 500ಕ್ಕೂ ಹೆಚ್ಚು ಮಂದಿ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರದಿಂದ ಬೆಂಗಳೂರು ಒನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ. ಮತ್ತೊಂದು ಕಡೆ ಅರ್ಜಿ ಸಲ್ಲಿಕೆಯ ಡೆಮೋ ವೀಡಿಯೋವನ್ನ ಜಿಬಿಎ ಇಂದು ರಿಲೀಸ್ ಮಾಡಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿ ಆದ ಬಳಿಕ ಸರ್ಕಾರ ಬೆಂಗಳೂರಿಗರಿಗೆ ನೀಡಿರೋ ದೊಡ್ಡ ಗಿಫ್ಟ್ ಅಂದರೆ ಅದು ಬಿ ಖಾತೆಗಳಿಗೆ ಎ ಖಾತಾ ಮಾನ್ಯತೆ ನೀಡಿರುವುದು. ಡಿಸಿಎಂ ಡಿಕೆ ಶಿವಕುಮಾರ್ ವೆಬ್‌ಸೈಟ್ ಬಿಡುಗಡೆ ಮಾಡಿ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಅರ್ಜಿ ಹಾಕೋದಕ್ಕೆ ಅವಕಾಶ ನೀಡಿ ಐದು ದಿನ ಆಗಿದ್ದು, 500 ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 3 ಸಾವಿರ ಜನ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಮಾಹಿತಿ ಪಡೆದುಕೊಂಡಿರೋದು ಬಯಲಾಗಿದೆ. ಬೆಂಗಳೂರು ಜನ ಬಿ ಖಾತಾ ಪರಿವರ್ತನೆಯ ವೆಬ್‌ಸೈಟ್‌ಗೆ ವಿಸಿಟ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ.
ಅರ್ಜಿ ಸಲ್ಲಿಕೆಯನ್ನ ಬೆಂಗಳೂರು ಒನ್‌ಗಳಲ್ಲೂ ಕೂಡ ಅಪ್ಲೈ ಮಾಡಬಹುದಾಗಿದೆ. ನಾಳೆಯಿಂದ ಬೆಂಗಳೂರು ಒನ್‌ಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಜನರೇ ತಮ್ಮ ಮೊಬೈಲ್‌ನಲ್ಲಿ ಹೇಗೆ ಅರ್ಜಿ ಸಲ್ಲಿಕೆ ಮಾಡಿಕೊಳ್ಳೋದು ಮತ್ತು ಅರ್ಜಿ ಸಲ್ಲಿಕೆ ಕ್ರಮ ಹೇಗೆ ಅಂತಾ ಒಂದು ಡೆಮೋ ವೀಡಿಯೋವನ್ನ ಬಿಡುಗಡೆ ಮಾಡುವುದಾಗಿ ಪಬ್ಲಿಕ್ ಟಿವಿಗೆ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.
ಎ ಖಾತಾ ಪಡೆಯಬೇಕು ಅಂದರೆ 5% ಮಾರ್ಗಸೂಚಿ ದರ ಕೂಡ ಕಟ್ಟಬೇಕಾಗಿದೆ. ಇದು ಮಧ್ಯಮ ವರ್ಗಕ್ಕೆ ಹೊರೆ ಆಗುತ್ತದೆ, ವಿನಾಯ್ತಿ ಮಾಡಿ ಅಂತಾ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ. ಆದರೆ ಡಿಸಿಎಂ ಮಾರ್ಗಸೂಚಿ ದರ 5% ಕಡಿಮೆ ಬೆಲೆ. ಬೆಲೆ ಫಿಕ್ಸ್ ಮಾಡಲಾಗಿದೆ, ವಿನಾಯಿತಿ ಇಲ್ಲ. ಎ ಖಾತಾ ಆದರೆ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ ಮತ್ತು ಸೈಟ್ ಬೆಲೆ ಜಾಸ್ತಿ ಕೂಡ ಆಗುತ್ತೆ ಎಂದಿದ್ದಾರೆ.