Ad image

ಊರಿಗೆ ತೆರಳಿದ ಜನ – ಮೆಜೆಸ್ಟಿಕ್‌ ಬಸ್‌ನಿಲ್ದಾಣ ಖಾಲಿ ಖಾಲಿ

Team SanjeMugilu
1 Min Read

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ, ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ  ಖಾಲಿ ಖಾಲಿಯಾಗಿದೆ.

ಶುಕ್ರವಾರ, ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೇರೆ ಜಿಲ್ಲೆ, ರಾಜ್ಯಗಳಲ್ಲಿರುವ ಊರಿಗೆ ತೆರಳಿದ್ದರು. ಕಳೆದ 4 ದಿನಗಳಿಂದ ಬೆಂಗಳೂರಿನಿಂದ ತೆರಳುವ ಬಹುತೇಕ ಬಸ್ಸುಗಳು ಭರ್ತಿಯಾಗಿದ್ದವು. ಇಂದು ಬಸ್ಸುಗಳಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.

ಬೆಂಗಳೂರಿನಿಂದ ಹಾಸನಾಂಬ ದರ್ಶನಕ್ಕೆ ತೆರಳುವವರ ಸಂಖ್ಯೆ ಕೂಡ ಇಳಿಕೆಯಾಗಿದೆ. ಈ ಬಾರಿ ಬುಧವಾರ ದೀಪಾವಳಿ ಬಂದಿರುವ ಕಾರಣ ಶನಿವಾರವೇ ಉದ್ಯೋಗಿಗಳು ಊರಿಗೆ ತೆರಳಿದ್ದರು.

ಈ ಶನಿವಾರ ಸಂಜೆ ಮತ್ತು ಭಾನುವಾರ ಊರಿಗೆ ತೆರಳಿರುವ ಪ್ರಯಾಣಿಕರು ಮರಳಿ ಬರಲಿರುವುದರಿಂದ ಬೆಂಗಳೂರು ಪ್ರವೇಶಿಸುವ ಮಾರ್ಗಗಳಾದ ಗೊರಗುಂಟೆಪಾಳ್ಯ ಸಿಗ್ನಲ್‌, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಹಲವು ಕಡೆ ಭಾರೀ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆಗಳಿವೆ.

Share This Article