ಬೆಂಗಳೂರು: ಕರ್ನಾಟಕ ರಾಜ್ಯದ ವಿವಿಧ ನಗರಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿ ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ, ರಸ್ತೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ಶಾಲಾ ಮೈದಾನ, ಉದ್ಯಾನಗಳನ್ನು “ಸಮೂಹ ನಮಾಜ್” ಕಾರ್ಯಕ್ಕಾಗಿ ಆಕ್ರಮಿಸುವ ಘಟನೆಗಳು ನಿಯಮಿತವಾಗಿ ನಡೆಯುತ್ತಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ತುರ್ತು ಸೇವೆಗಳಾದ ಅಂಬುಲೆನ್ಸ್, ಅಗ್ನಿ ಶಾಮಕ ವಾಹನ ಮತ್ತು ನಾಗರಿಕರ ಸ್ವತಂತ್ರ ಸಂಚಲನ ಹಕ್ಕು ಗಂಭೀರವಾಗಿ ಹಾನಿಗೊಳಗಾಗುತ್ತಿದೆ ಎಂದು ಶ್ರೀರಾಮಸೇನೆ ಆರೋಪಿಸಿದೆ.
ಭಾರತ ಸಂವಿಧಾನದ Article 14 – “Equality Before Law” ಪ್ರಕಾರ ಸರ್ಕಾರ ಎಲ್ಲಾ ಧರ್ಮಗಳ ವಿಷಯದಲ್ಲಿ
ಸಮನಾಗಿ ವರ್ತಿಸಬೇಕಾಗಿದೆ. ಆದರೆ ಹಿಂದೂ ಹಬ್ಬಗಳು, ಜಾತ್ರೆಗಳು, ಗಣೇಶೋತ್ಸವ, ರಾಮನವಮಿ ಮೆರವಣಿಗೆಗಳಿಗೆ ಮಾತ್ರ ಕಟ್ಟುನಿಟ್ಟಿನ ನಿಯಮ ಹೇರಲಾಗುತ್ತಿದೆ; ರಸ್ತೆ ಮೇಲಿನ ನಮಾಜ್ ಪ್ರಕರಣದಲ್ಲಿ ಸರ್ಕಾರ ಮೌನದಲ್ಲಿರುವುದು ಸ್ಪಷ್ಟವಾದ ಧಾರ್ಮಿಕ ವೈಷಮ್ಯ ಮತ್ತು ಸಂವಿಧಾನದ ಧರ್ಮನಿರಪೇಕ್ಷ ನೀತಿಯ ದ್ರೋಹ ಎಂದು ಆರೋಪಿಸಿದೆ.
ಸರ್ಕಾರಕ್ಕೆ ತಕ್ಷಣ ನಿರ್ದೇಶನ ನೀಡಿ, ಯಾವುದೇ ಧಾರ್ಮಿಕ ಪ್ರಾರ್ಥನೆಗಳು, ನಮಾಜ್ ಅಥವಾ ಸಮೂಹ ಸಭೆಗಳು ರಸ್ತೆ, ಸರ್ಕಾರಿ ಕಚೇರಿ ಅವರಣ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನಗಳಲ್ಲಿ ನಡೆಯದಂತೆ ನಿಷೇಧ ಸರ್ಕ್ಯೂಲರ್ ಹೊರಡಿಸುವಂತೆ ಸೂಚಿಸಬೇಕು.
ಪೊಲೀಸರು “Public Right of Passage” ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಉಲ್ಲಂಘಕರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸುವಂತೆ ಸೂಚಿಸಬೇಕೆಂದು ಸೇನೆ ರಾಜ್ಯಪಾಲರಿಗೆ ಮನವಿ ಮಾಡಿದೆ.
