Ad image

`ಬೇಡ ಅನ್ನೋಕೆ ಅವನ್ಯಾರು, ಅವನೊಬ್ಬ ಎಳಸು’

Team SanjeMugilu
2 Min Read
ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ರು. ಗಂಟೆಗಳ ಕಾಲ ಚರ್ಚೆ ನಡೆಸಿದ್ರು. ಬೆಂಗಳೂರು ನಗರಾಭಿವೃದ್ಧಿ, ಟನಲ್ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರೆ ಯುವ ಸಂಸದ ಕೆಲ ಸಲಹೆ ಕೂಡ ನೀಡಿದ್ರು. ಟನಲ್​ ರೋಡ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದ ತೇಜಸ್ವಿ ಸೂರ್ಯ  ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್​ ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
‘ಬೇಡ ಅನ್ನೋಕೆ ಅವನ್ಯಾರು? ಅವನಿನ್ನ ಎಳಸು’

ಟನಲ್ ರೋಡ್ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಆಗ್ರಹಿಸುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್​ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಲ್ಲಿ ಮಾಡಿಸಿ ಡಿಕೆಶಿ, ಟನಲ್ ಬೇಡ ಅನ್ನೋಕೆ ಅವನ್ಯಾರು?  ಆ ಹುಡುಗ, ಅವನಿನ್ನು ಎಳೆಸು ಎಂದಿದ್ದಾರೆ.
Who is he.., ತೇಜಸ್ವಿ ವಿರುದ್ಧ ಡಿಸಿಎಂ ಗರಂ

ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವ್ರು, Who is he.. ಅವನೊಬ್ಬ ಎಳಸು. ಏನೋ ಹೋಗಲಿ ಅಂತ ಮಾತಾಡಲು ಅವಕಾಶ ಕೊಟ್ರೆ, ಏನೇನೋ ಮಾತಾಡ್ತಾನೆ ಎಂದು ನೇರವಾಗಿ ಕಿಡಿಕಾರಿದ್ದಾರೆ.
ಕೇಂದ್ರದಿಂದ 1 ರೂಪಾಯಿ ತರಲು ಆಗಿಲ್ಲ

ಎಲ್ಲಾ ಶಾಸಕರು, ಸಚಿವರು ಆಟೋ ರಿಕ್ಷಾಗಳಲ್ಲೇ ಓಡಾಡಲಿ, ಇದೆಲ್ಲಾ ಆಗುತ್ತಾ? ಬೆಂಗಳೂರಿನಲ್ಲಿ ಒಂದು ಕೋಟಿ ಮೂವತ್ತು ಲಕ್ಷ ಕಾರುಗಳು ಇವೆ. ಅವನೊಬ್ಬ ಎಳಸು, ಖಾಲಿ ಟ್ರಂಕ್, ಕೇಂದ್ರದಿಂದ ಹತ್ತು ರೂಪಾಯಿ ತರಲು ಆಗಿಲ್ಲ ಎಂದು ಡಿಕೆ ಶಿವಕುಮಾರ್​, ಯುವ ಸಂಸದನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವನ ಬಗ್ಗೆ ಪ್ರಶ್ನೆ ಕೇಳ್ಬೇಡಿ

ಮಕ್ಕಳನ್ನ ಶಾಲೆಗೆ ಮೆಟ್ರೋದಲ್ಲಿ ಕಳುಹಿಸಲು ಆಗುತ್ತಾ ಕೇಂದ್ರದಿಂದ ಇವನೇನು ಏನು ಹಣ ತಂದಿದ್ದಾನಾ? ಅವನ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ ಎಂದು ಡಿಕೆಶಿ ಗರಂ ಆಗಿದ್ದಾರೆ.
ಪದೇ ಪದೇ ಎಳಸು ಪದ ಬಳಸಿದ ಡಿಕೆಶಿ

ಜಗದೀಶ್ ಶೆಟ್ಟರ್, ಅಶೋಕ್, ಅಶ್ವಥ್ ನಾರಾಯಣ್, ಬೊಮ್ಮಾಯಿ ಅವರಿಗೆ ತಿಳಿಯುತ್ತೆ. ಇವನಿಗೆ ತಿಳಿಯೋದಿಲ್ಲ, ಇವನೊಬ್ಬ ಎಳಸು ಎನ್ನುತ್ತಾ ಡಿಕೆ ಶಿವಕುಮಾರ್​, ತೇಜಸ್ವಿ ಸೂರ್ಯಗೆ ಪದೇ, ಪದೇ ಎಳಸು ಎನ್ನುವ ಪದ ಬಳಸಿ ವ್ಯಂಗ್ಯ ಮಾಡಿದ್ದಾರೆ. ಡಿಕೆಶಿ ಮಾತಿಗೆ ಯುವ ಸಂಸದ ಯಾವ ರೀತಿ ತಿರುಗೇಟು ನೀಡ್ತಾರೆ ಕಾದು ನೋಡಬೇಕಿದೆ.
Share This Article