Ad image

ರಾಜಕೀಯವಿಜಯೇಂದ್ರ ಮತ್ತೆ ಅಧ್ಯಕ್ಷರಾದರೆ ಮರುದಿನವೇ ಜೆಸಿಬಿ ಪಕ್ಷ: ಯತ್ನಾಳ್ ಘೋಷಣೆ

Team SanjeMugilu
1 Min Read

ಬೆಳಗಾವಿ: ಬಿಜೆಪಿ ಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರ ನಾಯಕತ್ವವನ್ನು ನಾನು ಒಪ್ಪೋದಿಲ್ಲ” ಎಂದು ಘೋಷಿಸಿದ ಅವರು, ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸರಾಗಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್ ಅವರು, “ವಿಜಯೇಂದ್ರ ಅವರನ್ನು ಹೈ ಕಮಾಂಡ್ ಮತ್ತೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ, ಮರುದಿನವೇ ‘ಜೆಸಿಬಿ’ ಎಂಬ ಹೆಸರಿನ ಹೊಸ ಪಕ್ಷ ಕಟ್ಟುತ್ತೇನೆ” ಎಂದು ಘೋಷಣೆ ಮಾಡಿದರು.

ಇದಕ್ಕೂ ಮುಂದಾಗಿ ಅವರು, “ಬಿಹಾರ ಚುನಾವಣೆ ಬಳಿಕ ರಾಜ್ಯದ ಬಿಜೆಪಿ ಘಟಕದಲ್ಲೂ ‘ಆಪರೇಷನ್’ ನಡೆಯಲಿದೆ. ರಾಜ್ಯದ 25 ಸಂಸದರ ಪೈಕಿ 23 ಎಂಪಿಗಳು ಮತ್ತು 60 ಶಾಸಕರ ಪೈಕಿ 55 ಮಂದಿ ನನ್ನ ಪರವಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯತ್ನಾಳ್ ಅವರು ತಮ್ಮ ಮರುಸೇರ್ಪಡೆ ಕುರಿತು ಹೇಳುವಾಗ, “2027ರ ಗೋವಾ ಚುನಾವಣೆಗೂ ಮುನ್ನ ಹೈ ಕಮಾಂಡ್ ನನ್ನ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಆದರೆ ವಿಜಯೇಂದ್ರ ಅವರನ್ನು ಮತ್ತೆ ರಾಜ್ಯಾಧ್ಯಕ್ಷ ಮಾಡಿದರೆ, ನಾನು ಹೊಸ ಪಕ್ಷ ಕಟ್ಟಲು ಹಿಂಜರಿಯುವುದಿಲ್ಲ” ಎಂದು ಪುನರಾವರ್ತಿಸಿದರು.

ರಾಜ್ಯ ರಾಜಕೀಯದಲ್ಲಿ ಯತ್ನಾಳ್ ಅವರ ಈ ಘೋಷಣೆ ಮತ್ತೊಂದು ರಾಜಕೀಯ ಬಿರುಸು ಮೂಡಿಸಿದ್ದು, ಬಿಜೆಪಿ ಒಳಕಿಚ್ಚಿಗೆ ಮತ್ತಷ್ಟು ಇಂಧನ ನೀಡಿದೆ.

Share This Article