ಬೆಂಗಳೂರು: ನಗರದ ವೈದ್ಯಕೀಯ ಕ್ಷೇತ್ರ ಮತ್ತೊಮ್ಮೆ ಅಪರೂಪದ ಕಾರ್ಯಕ್ಕೆ ಸಾಕ್ಷಿಯಾಗಿದೆ. ಗುರುವಾರ ಬೆಳಿಗ್ಗೆ ನಡೆದ ಈ ವಿಶಿಷ್ಟ ಕಾರ್ಯಾಚರಣೆಯಲ್ಲಿ, ನಾರಾಯಣ ಹೆಲ್ತ್ ಆಸ್ಪತ್ರೆ ಹಾಗೂ ಬೆಂಗಳೂರು ಮೆಟ್ರೋ ರೈಲ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಂಯುಕ್ತ ಸಹಯೋಗದೊಂದಿಗೆ, ದಾನಿಯೊಬ್ಬರ ಶ್ವಾಸಕೋಶವನ್ನು ಯಶವಂತಪುರದಿಂದ ನಾರಾಯಣ ಹೆಲ್ತ್‌ಸಿಟಿಗೆ ಕೇವಲ 61 ನಿಮಿಷಗಳಲ್ಲಿ ತಲುಪಿಸಲಾಯಿತು.
ಸಮಯದೊಂದಿಗೆ ಜೀವವೂ ಉಳಿಯಿತು.!
ಸುಮಾರು 30 ರಿಂದ 33 ಕಿಲೋಮೀಟರ್ ದೂರದ ಈ ಪ್ರಯಾಣ ಸಾಮಾನ್ಯವಾಗಿ ರಸ್ತೆ ಸಂಚಾರದ ಕಾರಣದಿಂದ ಎರಡು ಗಂಟೆಗೂ ಹೆಚ್ಚಿನ ಕಾಲ ತೆಗೆದುಕೊಳ್ಳುತ್ತದೆ. ಆದರೆ, ಈ ಬಾರಿ ಮೆಟ್ರೋ ಮಾರ್ಗದ ಮೂಲಕ ಸಾಗಾಟ ಮಾಡಿದ್ದರಿಂದ ಅಮೂಲ್ಯವಾದ ಸಮಯ ಉಳಿಯಿತು ಹಾಗೂ ರೋಗಿಯ ಜೀವ ಉಳಿಸಲು ವೈದ್ಯಕೀಯ ತಂಡ ಶೀಘ್ರ ಕ್ರಮ ಕೈಗೊಳ್ಳಲು ಸಾಧ್ಯವಾಯಿತು.
ಸುರಕ್ಷತೆಯೊಂದಿಗೆ ಶ್ವಾಸಕೋಶದ ಸಾಗಾಣೆ
ಯಶವಂತಪುರದ ಆಸ್ಪತ್ರೆಯೊಂದರಲ್ಲಿ ಶ್ವಾಸಕೋಶವನ್ನು ತೆಗೆದುಕೊಂಡು ಹೊರಟ ವೈದ್ಯಕೀಯ ತಂಡವು ಮೊದಲು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಕ್ಕೆ ತಲುಪಿತು. ಅಲ್ಲಿ ವಿಶೇಷ ವೈದ್ಯಕೀಯ ಕಿಟ್‌ನಲ್ಲಿ ಸಂರಕ್ಷಿತ ಅಂಗವನ್ನು ಸುರಕ್ಷಿತವಾಗಿ ಮೆಟ್ರೋ ರೈಲಿಗೆ ಸೇರಿಸಲಾಯಿತು. ಬಳಿಕ ಆರ್.ವಿ. ರಸ್ತೆ ನಿಲ್ದಾಣದವರೆಗೆ ಪ್ರಯಾಣಿಸಿದ ತಂಡವು ಹಳದಿ ಮಾರ್ಗದ ಮೂಲಕ ಬೊಮ್ಮಸಂದ್ರದತ್ತ ಸಾಗಿತು. ಅಂತಿಮವಾಗಿ ನಾರಾಯಣ ಹೆಲ್ತ್‌ಸಿಟಿಗೆ ಶ್ವಾಸಕೋಶವನ್ನು ಸುರಕ್ಷಿತವಾಗಿ ತಲುಪಿಸಲಾಯಿತು.
ಮೇಟ್ರೋ ಸಿಬ್ಬಂದಿ ಸಕ್ರಿಯ ಭಾಗಿ
ಮೆಟ್ರೋ ಅಧಿಕಾರಿಗಳು ವೈದ್ಯಕೀಯ ತಂಡಕ್ಕೆ ಮಾರ್ಗ ತೆರವುಗೊಳಿಸುವಲ್ಲಿ, ರೈಲು ಚಲನೆಯ ಸಮಯದಲ್ಲಿ ಸಹಾಯ ಮಾಡುವಲ್ಲಿ ಹಾಗೂ ಸುರಕ್ಷಾ ವ್ಯವಸ್ಥೆ ಒದಗಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಸಹಕಾರಕ್ಕಾಗಿ ನಾರಾಯಣ ಹೆಲ್ತ್ ಸಂಸ್ಥೆಯು ಬಿಎಂಆರ್‌ಸಿಎಲ್‌ಗೆ ಕೃತಜ್ಞತೆ ಸಲ್ಲಿಸಿದೆ.
ನೂತನ ಮಾದರಿಗೆ ಕೃತಜ್ಞತೆ
ನಗರದ ಸಂಚಾರ ದಟ್ಟಣೆ ನಡುವೆಯೂ ಜೀವ ಉಳಿಸುವ ಈ ವೇಗದ ಕಾರ್ಯಾಚರಣೆ, ಮೆಟ್ರೋ ಮೂಲಸೌಕರ್ಯ ವೈದ್ಯಕೀಯ ಸೇವೆಗಳಲ್ಲಿ ಉಪಯೋಗಿಸುವ ನೂತನ ಮಾದರಿಯಾಗಿದೆ. ಇದು ಭವಿಷ್ಯದಲ್ಲಿ ಅನೇಕ ತುರ್ತು ಕಾರ್ಯಗಳಿಗೆ ದಾರಿ ತೆರೆದಂತಾಗಿದೆ. ಈ ಕಾರ್ಯಕ್ಕೆ ಹಲವಾರು ಕಡೆಯಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.
ಬಿಡುವೇ ಇರದ ಮೇಟ್ರೋ ಸಹಾಯಕ್ಕೆ ಬಂದಾಗ..!
ಮುಂಜಾನೆ ಮೇಟ್ರೋ ಸಿಗೊದೆಂದ್ರೆ ಹಳೇ ಕಾಲದಲ್ಲಿ ಪುಣ್ಯ ಎನ್ನುವ ಮಾತುಗಳನ್ನು ಕೇಳುತ್ತೇವೆ. ಅದರ ಟಿಕೆಟ್ ವೆಚ್ಚ ಎಷ್ಟೇ ಇರಲಿ ಅದರ ಬೇಡಿಕೆ ಕಡಿಮೆಯಾಗದು. ಅಂಥ ಮೇಟ್ರೋದಲ್ಲಿ ಇಂದು ಮಾನವೀಯ ಘಟನೆ ನಡೆದಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಬೆಂಗಳೂರಿನಂತಹ ಜನದಟ್ಟನೆಯ ನಗರಗಳಲ್ಲಿಇಂದು ಸಂಚರಿಸುವುದು ಕಷ್ಟಸಾಧ್ಯ ಆ,ಇಂಥ ವಸ್ತು ಸ್ಥಿಯಲ್ಲಿ ಅಂಗಾಗ ಸಮಯಕ್ಕೆ ಸರಿಯಾಗಿ ಅಂಗಾಗ ಸ್ಥಳಾಂತರಿಸಿದ್ದು, ಮಾನವೀಯ ವ್ಯವಸ್ಥೆಗೆ ಮಾದರಿಯಾಗಿದೆ.
ನಮ್ಮ ಮೆಟ್ರೋ ಮೂಲಕ ಆಸ್ಪತ್ರೆ ತಲುಪಿತು ಶ್ವಾಸಕೋಶ! ಜೀವ ಉಳಿಸಲು ನೆರವಾದ ಬಿಎಂಆರ್‌ಸಿಎಲ್
