ಇಂದು ಕರ್ನಾಟಕದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ ಮನೆ ಮಾಡಿದೆ. ಆದರೆ ನಾಡಹಬ್ಬದಂದೆ (ನವೆಂಬರ್ 1, 2025) ಕಲಬುರಗಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ರಾಜ್ಯೋತ್ಸವದ ಹಬ್ಬದ ದಿನದಂದೇ ಪ್ರತ್ಯೆಕ ರಾಜ್ಯದ ಕೂಗು ಕೇಳಿಬಂದಿದೆ. ಅಲ್ಲದೇ ನಾಡಹಬ್ಬದ ದಿನದಂದೆ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಈ ಘಟನೆ ನಡೆದಿದೆ.
ಕಲಬುರಗಿಯಲ್ಲಿ ನಾಡಹಬ್ಬ ಕನ್ನಡ ರಾಜ್ಯೋತ್ಸವದಂದೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಆಗ್ರಹದ ಕೂಗು ಮೊಳಗಿತು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದರು.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ!
ಕನ್ನಡ ರಾಜ್ಯೋತ್ಸವದಂದೇ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಪ್ರತ್ಯೇಕ ಧ್ವಜಾರೋಹಣಕ್ಕೂ ಯತ್ನಿಸಿದ್ದು, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ನಾಯಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ 20ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿದ್ದಾರೆ. ಇದು ರಾಜ್ಯೋತ್ಸವದ ಉತ್ಸವವನ್ನು ಮುಂದಿಟ್ಟು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕೊರತೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಸೇರಿದಂತೆ ಪ್ರಮುಖ ನಾಯಕರು ಬಂಧನಕ್ಕೊಳಗಾಗಿದ್ದಾರೆ.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಧ್ವನಿ!
ನಗರದ ಜಗತ್ ವೃತ್ತದಲ್ಲಿ ಈ ಹೋರಾಟ ಆರಂಭವಾಗಿದ್ದು, ಹೋರಾಟಗಾರರು ಧರಣಿ ನಡೆಸಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಧ್ವನಿ ಎತ್ತಿದ್ದರು. ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್‌ನತ್ತ ಮೆರವಣಿಗೆಗೆ ತೆರಳಿದರು. ಇಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ವಿಶೇಷ ಧ್ವಜಾರೋಹಣ ಮಾಡಲು ಯತ್ನಿಸಿದ್ದು, ಆದರೆ, ಬ್ರಹ್ಮಪುರ ಪೊಲೀಸ್ ಠಾಣೆಯ ಸಿಬ್ಬಂದಿ ಮೆರವಣಿಗೆಯನ್ನು ತಡೆಯಂತೆ ಮಾರ್ಗವನ್ನು ಬಂದೋಬಸ್ತ್ ಮಾಡಿದ್ದರು. ಹೋರಾಟಗಾರರು ಮುಂದುವರೆದಾಗ, ಅವರನ್ನು ತಕ್ಷಣ ಬಂಧಿಸಲಾಯಿತು. “ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತೇವೆ. ಪ್ರತ್ಯೇಕ ರಾಜ್ಯವೇ ಏಕೈಕ ಮಾರ್ಗ” ಎಂದು ಹೋರಾಟಗಾರರು ಕೂಗಾಡಿದರು.
ಕಲ್ಯಾಣ ಕರ್ನಾಟಕ ಅಂದರೆ ಹಿಂದಿನ ಹೈದರಾಬಾದ್ ಕರ್ನಾಟಕ ಇದು ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿದೆ. ಈ ಪ್ರದೇಶವು 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚು. 2010ರಲ್ಲಿ ಸಂವಿಧಾನದ 371(ಜೆ) ಕಲಂ ಸೇರಿಸಿ, ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಯಿತು. ಆದರೆ, ಹೋರಾಟಗಾರರ ಪ್ರಕಾರ ಇದು ಕಾಗದದ ಮೇಲೆ ಮಾತ್ರ ಎನ್ನಲಾಗಿದೆ. “ನಮ್ಮ ಜಿಲ್ಲೆಗಳಲ್ಲಿ ರಸ್ತೆಗಳು, ರೈಲು ಸೇವೆ, ನೀರು, ಉದ್ಯೋಗಗಳು ಯಾವುದೂ ಸಮರ್ಪಕವಾಗಿಲ್ಲ. ರಾಜ್ಯದ ಉತ್ತರ ಭಾಗದ ಸಂಪನ್ಮೂಲಗಳನ್ನು ಬಳಸಿ, ಅಭಿವೃದ್ಧಿ ಇಲ್ಲ ಎಂದು ಆರೋಪಿಸುತ್ತಾರೆ. ಉದಾಹರಣೆಗೆ, ಕಲಬುರಗಿಯಲ್ಲಿ ರೈಲು ವಿಭಾಗವನ್ನು ಆಗ್ರಹಿಸಿ ಹೋರಾಟ ನಡೆದರೂ, ಕೇಂದ್ರ ಬಜೆಟ್‌ನಲ್ಲಿ ಕಿರಿಕಿರಿ ಉಂಟಾಗುತ್ತೆ.
ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ, “ಕಲ್ಯಾಣ ಕರ್ನಾಟಕವು ರಾಜ್ಯದ 30% ಜನಸಂಖ್ಯೆಯನ್ನು ಹೊಂದಿದ್ದರೂ, ಬಜೆಟ್‌ನಲ್ಲಿ ಕೇವಲ 10% ಹಂಚಿಕೆಯಾಗಿದೆ. ಪ್ರತ್ಯೇಕ ರಾಜ್ಯವೇ ನ್ಯಾಯ” ಎಂದು ಹೇಳಿದ್ದಾರೆ. ಈ ಹೋರಾಟವು 2019ರಲ್ಲಿ ಬಿಜೆಪಿ ಸರ್ಕಾರದಿಂದ ಪ್ರತ್ಯೇಕ ಸೆಕ್ರೇಟೇರಿಯಾಟ್ ಭರವಸೆಯ ನಂತರ ಹೆಚ್ಚು ತೀವ್ರಗೊಂಡಿದೆ. ಆದರೆ, ಯಾವುದೇ ಪ್ರಗತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ; ಆದರೆ ಈ ಜಿಲ್ಲೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗು
