Ad image

ಕೃತಿಕಾ ರೆಡ್ಡಿ ಕೊ* ಕೇಸ್​, ಫೋನ್​ ಪೇನಲ್ಲಿ ಆಪ್ತ ಗೆಳತಿ ಜೊತೆ ಚಾಟಿಂಗ್; ಬಯಲಾಯ್ತು ಕಿಲ್ಲರ್ ಡಾಕ್ಟರ್ ಕಳ್ಳಾಟ

Team SanjeMugilu
2 Min Read

ಬೆಂಗಳೂರು: ಡಾಕ್ಟರ್​ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ನಾನೇನೂ ಮಾಡಿಲ್ಲ ಅಂತಿದ್ದ ಕಿಲ್ಲರ್ ಡಾಕ್ಟರ್​ ಮಹೇಂದ್ರ ರೆಡ್ಡಿ ಪೊಲೀಸರ  ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ವಿಚಾರಣೆ ನಡೆಸುತ್ತಿರುವ ಪೊಲೀಸರು, ಕಿಲ್ಲರ್ ಡಾಕ್ಟರ್​ ಕಳ್ಳಾಟವನ್ನ ಬಯಲು ಮಾಡ್ತಿದ್ದಾರೆ. ಇದೀಗ ಚಾಟಿಂಗ್ ವಿಚಾರ ಬಯಲಾಗಿದೆ.
ಮಹೇಂದ್ರನ ಮತ್ತಷ್ಟು ಕಳ್ಳಾಟ ಬಯಲು
ಬೆಂಗಳೂರಿನ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಗಂಡ ಮಹೇಂದ್ರನ ಮತ್ತಷ್ಟು ಕಳ್ಳಾಟ ಬಯಲಾಗಿದ್ದು, ಮಾರತ್ತಹಳ್ಳಿ ಪೊಲೀಸರಿಂದ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಪ್ತ ಗೆಳತಿ ಜೊತೆ ಮಹೇಂದ್ರ ರೆಡ್ಡಿ ಡೇಟಿಂಗ್​
ಹೆಂಡತಿ ವಿಚಾರವಾಗಿ ಆಪ್ತ ಸ್ನೇಹಿತೆ ಜೊತೆ ಮಹೇಂದ್ರ ರೆಡ್ಡಿ ಚಾಟಿಂಗ್ ಮಾಡ್ತಿದ್ದ ಎನ್ನಲಾಗ್ತಿದೆ. ಪದೇ ಪದೇ ಚಾಟಿಂಗ್ ಮಾಡ್ತಿದ್ದ ಎನ್ನುವ ವಿಚಾರವಾಗಿ ಮಹೇಂದ್ರ ರೆಡ್ಡಿ ವಾಟ್ಸಾಪ್ ಅನ್ನು ಸ್ನೇಹಿತೆ ಬ್ಲಾಕ್ ಮಾಡಿದ್ದರಂತೆ. ಗೆಳತಿ ಬ್ಲಾಕ್ ಮಾಡಿದ್ರೂ ಸುಮ್ಮನಿರದ ಈತ ಫೋನ್ ಪೇನಲ್ಲೂ ಚಾಟ್ ಮಾಡಲು ಶುರು ಮಾಡಿದ್ದ ಎನ್ನಲಾಗ್ತಿದೆ.
ಫೋನ್ ಪೇನಲ್ಲಿ ಮೆಸೇಜ್​ಗಳು ಡಿಲೀಟ್ ಆಗಲ್ಲ
ಡಾ. ಮಹೇಂದ್ರ ರೆಡ್ಡಿ ತನ್ನ ಹಾಗೂ ಕೃತಿಕಾ ವೈಯಕ್ತಿಕ ವಿಚಾರಗಳ ಬಗ್ಗೆ ಸ್ನೇಹಿತೆ ಜೊತೆ ಚಾಟಿಂಗ್ ಮಾಡಿದ್ದ ಎನ್ನಲಾಗ್ತಿದೆ. ಫೋನ್ ಪೇನಲ್ಲಿ ಮೆಸೇಜ್​ಗಳು ಡಿಲೀಟ್ ಆಗಲ್ಲ, ಹೀಗಾಗಿ FSLನಿಂದ ಇಡೀ ಚಾಟಿಂಗ್ ಹಿಸ್ಟರಿ ಬಯಲಾಗಿದೆ. ಇದರ ಜೊತೆ ಕೃತಿಕಾಳ ಮೊಬೈಲ್​ ಡಾಟಾ ರಿಟ್ರೀವ್​ಗೆ ಪೊಲೀಸರು ಮುಂದಾಗಿದ್ದಾರೆ.
ಮಹೇಂದ್ರ ರೆಡ್ಡಿ ಮೊಬೈಲ್ ಫೋನ್ ಹಾಗೂ ಲ್ಯಾಪ್‌ ಟಾಪ್​ ಅನ್ನು ಎಫ್ಎಸ್ಎಲ್ ಗೆ ರವಾನೆ ಮಾಡಿದ್ರು. ಕೃತಿಕಾ ಅವರ ಫೋನ್ ಲಾಕ್ ಆಗಿದ್ದರಿಂದ ಲಾಕ್ ಓಪನ್ ಆಗದೇ ಪೊಲೀಸರ ತನಿಖೆಗೆ ಕಷ್ಟವಾಗ್ತಿದೆ. ಐಫೋನ್‌ ಹಾಗೂ ಲ್ಯಾಪ್‌ ಟಾಪ್ ಎರಡನ್ನೂ ಓಪನ್ ಮಾಡಿಸೋಕೆ ಪ್ರಯತ್ನ ಮಾಡ್ತಿದ್ದಾರೆ.
ಕಿಲ್ಲರ್​​ ಗಂಡನ ಚಾಟಿಂಗ್ ರಹಸ್ಯ
ಆಪ್ತ ಸ್ನೇಹಿತೆ ಜೊತೆ ಮಹೇಂದ್ರ ನಿರಂತರವಾಗಿ ಚಾಟಿಂಗ್ ಮಾಡ್ತಿದ್ದ ಎನ್ನಲಾಗ್ತಿದೆ. ಈತನ ಕಾಟಕ್ಕೆ ಬೇಸತ್ತು ಸ್ನೇಹಿತೆಯೇ ವಾಟ್ಸಾಪ್ ಬ್ಲಾಕ್ ಮಾಡಿದ್ದಳಂತೆ. ಚಾಟಿಂಗ್ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದು, ಮಹಿಳೆಯ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ. ಜೊತೆಗೆ ಕೃತಿಕಾ ಕುಟುಂಬಸ್ಥರು ಕೂಡ ಕೊಲೆಗೆ ಅಕ್ರಮ ಸಂಬಂಧ ಕಾರಣ ಎಂಬ ಆರೋಪ ಕೂಡ ಮಾಡಿದ್ರು.
ಕೃತಿಕಾಳನ್ನು ಕೊಂದಿದ್ದು ನಾನೇ ಎಂದು ಆರೋಪಿ ಮಹೇಂದ್ರ ರೆಡ್ಡಿ ಒಪ್ಪಿಕೊಂಡಿದ್ದಾನಂತೆ. ಕೊಲೆಗೆ ಪ್ರಮುಖ ಕಾರಣಗಳು ಮತ್ತು ಕೊಲೆ ಹಿಂದಿನ ಪ್ಲಾನ್ ಎಲ್ಲವನ್ನ ಕೂಡ ಕಿಲ್ಲರ್​ ಡಾಕ್ಟರ್ ಬಾಯ್ಬಿಟ್ಟಿದ್ದು, ಈತನ ಮಾಸ್ಟರ್​ ಪ್ಯಾನ್ ಹಾಗೂ ಅದರ ಹಿಂದಿನ ಉದ್ದೇಶ ಕೇಳಿ ತನಿಖಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಕೃತಿಕಾಳನ್ನು ಕೊಲೆಗೈಯಲು ಇದೇ ಕಾರಣ
ಕೃತಿಕಾಳನ್ನು ಕೊಲೆ ಮಾಡಲು ಆಕೆಯ ಆರೋಗ್ಯ ಸಮಸ್ಯೆಯೇ ಕಾರಣ ಎಂದು ಆತ ಪೊಲೀಸರ ಮುಂದೆ ಹೇಳಿದ್ದಾನೆ. ಆಕೆಯ ಆರೋಗ್ಯ ಸಮಸ್ಯೆಯಿಂದ ಆತ ಬೇಸತ್ತಿದ್ದನಂತೆ. ಪರ್ಸನಲ್ ಲೈಫ್ ಇಲ್ಲದೇ ಮಹೇಂದ್ರ ರೆಡ್ಡಿ ಕೋಪಗೊಂಡಿದ್ದ ಎನ್ನಲಾಗ್ತಿದೆ. ಈ ವಿಚಾರಕ್ಕೆ ಆಕೆಗೆ ಡಿವೋರ್ಸ್ ನೀಡಿದ್ರೆ ನನಗೆ ಆಸ್ತಿ ಏನೂ ಸಿಗಲ್ಲ ಅಂತ ಕೊಲೆಗೆ ಪ್ಲಾನ್ ಮಾಡಿದ್ದ ಎನ್ನಲಾಗ್ತಿದೆ.

Share This Article