Ad image

ಸೀರಿಯಲ್‌ ನಟಿಗೆ ರೇಣುಕಾಸ್ವಾಮಿ ರೀತಿ ಲೈಂಗಿಕ ಕಿರುಕುಳ – ಗುಪ್ತಾಂಗದ ವಿಡಿಯೋ ಕಳಿಸಿ ವಿಕೃತಿ!

Team SanjeMugilu
1 Min Read

ಖ್ಯಾತ ಸೀರಿಯಲ್‌ ನಟಿಗೆ ಕಾಮುಕನೊಬ್ಬ ಮೃತ ರೇಣುಕಾಸ್ವಾಮಿ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಯೆಸ್‌. ಫೇಸ್‌ಬುಕ್‌ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ನಟಿಗೆ ಟಾರ್ಚರ್ ನೀಡಿದ್ದಾನೆ. ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿದ್ದು, ಆರೋಪಿ ಕಳೆದ 3 ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಟಿಯ ಹೆಸರು ಬಹಿರಂಗಪಡಿಸಲಾಗಿಲ್ಲ.

ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್‌
ಆರೋಪಿ ಮೊದಲು ಫೇಸ್‌ಬುಕ್‌ನಲ್ಲಿ ʻNAVEENZʼ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ನಟಿ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್‌ನಲ್ಲಿ ಮೆಸೇಜ್ ಮಾಡಿದ್ದಾನೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ಬ್ಲಾಕ್‌ ಮಾಡಿದ್ರೂ ತಪ್ಪಿಲ್ಲ ಕಿಡಿಗೇಡಿಯ ಕಾಟ
ನಟಿ ಮೆಸೇಜ್ ಮಾಡದಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕಿರುಕುಳ ಹೆಚ್ಚಾಗ್ತಿದ್ದ ಹಿನ್ನೆಲೆ ಆತನ ಅಕೌಂಟ್‌ ಬ್ಲಾಕ್ ಮಾಡಿದ್ದರು ನಟಿ. ಬಳಿಕ ಬೇರೆ ಐಡಿಯಿಂದ ಅಶ್ಲೀಲ ಮೆಸೇಜ್‌ ಕಳಿಸಿದ್ದ, ಗುಪ್ತಾಂಗದ ವಿಡಿಯೋ ಕಳಿಸಿ ವಿಕೃತಿ ಮೆರೆಯುತ್ತಿದ್ದ. ಆದ್ರೂ ತಾಳ್ಮೆ ಕಳೆದುಕೊಳ್ಳದ ನಟಿ ಇದೇ ನವೆಂಬರ್‌ 1ರಂದು ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಆರೋಪಿಯನ್ನ ಭೇಟಿ ಮಾಡಿ ಬುದ್ಧಿ ಮಾತು ಹೇಳಿದ್ದರು.

ಈ ರೀತಿ ಮೆಸೇಜ್‌ ಮಾಡಬಾರದು ಅಂತ ಕಿವಿಮಾತು ಹೇಳಿದ್ರು. ಆದ್ರೂ ಬುದ್ಧಿ ಕೇಳದ ಆರೋಪಿ ಮತ್ತೆ ಅಶ್ಲೀಲ ಮೆಸೇಜ್‌ ಮಾಡೋದನ್ನ ಮುಂದುವರಿದ್ದ. ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ನಟಿ ದೂರು ನೀಡಿದ್ದರು. ನಟಿಯ ದೂರಿನ ಆಧಾರದ ಮೇಲೆ ಕೇಸ್‌ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Share This Article