Ad image

ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನ ಆಗಿದೆ – ರಾಹುಲ್‌ ಗಾಂಧಿ ಹೊಸ ಬಾಂಬ್‌

Team SanjeMugilu
2 Min Read

ನವದೆಹಲಿ: 2024ರ ವಿಧಾನಸಭಾ ಚುನಾವಣೆ ವೇಳೆ ಹರಿಯಾಣದಲ್ಲಿ  ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನ ಆಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ  ಹೊಸ ಬಾಂಬ್‌ ಸಿಡಿಸಿದರು.

ನವದೆಹಲಿಯ ಎಐಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾತನಾಡಿದ ಅವರು, 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ  ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಬಿಜೆಪಿ ಗೆದ್ದಿರೋದು ನಕಲಿ ಮತಗಳಿಂದ ಅನ್ನೋದು ಖಚಿತವಾಗಿದೆ. ಮಹಾದೇವಪುರ, ಆಳಂದ ಆದ್ಮೇಲೆ ಇದು ಕೆಲವು ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ, ಇಡೀ ರಾಜ್ಯ, ದೇಶವನ್ನೇ ಆವರಿಸಿಕೊಂಡಿದೆ ಅನಿಸಿತು. ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲೂ ಇದೇ ರೀತಿಯ ದೂರು ಬಂದಿದ್ದವು. ಈಗ ನಾವು ಹರಿಯಾಣವನ್ನ ಕೇಂದ್ರೀಕರಿಸಿದ್ದೇವೆ ಎಂದು ತಿಳಿಸಿದ್ರು.

ಹರಿಯಾಣ ಚುನಾವಣೆ ವೇಳೆ ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್‌  52 ರಿಂದ 62 ಸ್ಥಾನಗಳಷ್ಟು ಮುಂದಿತ್ತು. ಅದರಂತೆ ಹರಿಯಾಣ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸ್ವೀಪ್ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಫಲಿತಾಂಶ ಸಂಪೂರ್ಣ ವಿಭಿನ್ನವಾಗಿತ್ತು. ಹರಿಯಾಣದಲ್ಲಿ ಫಸ್ಟ್‌ ಟೈಮ್‌ ಅಂಚೆ ಮತಗಳು ಮತ್ತು ಸಾಮಾನ್ಯ ಮತಗಳಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿತು ಎಂದು ಆರೋಪಿಸಿದರು.

ಕಾಂಗ್ರೆಸ್‌ ಕೇವಲ 22,779 ಮತಗಳಿಂದ ಸೋತಿದೆ. ಆದ್ರೆ ಒಟ್ಟು 1.18 ಲಕ್ಷ ಮತಗಳು ವ್ಯತ್ಯಾಸ ಇದೆ. ಅಷ್ಟೇ ಅಲ್ಲ ಹರಿಯಾಣದಲ್ಲಿ 25 ಲಕ್ಷ ಮತಗಳ ಕಳ್ಳತನ ನಡೆದಿದೆ. ಶೇ.12.5 ರಷ್ಟು ನಕಲಿ ಮತಗಳು, 93,000 ವಿಳಾಸಗಳು ಅಮಾನ್ಯವಾದವುಗಳು ಎಂದು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

ಒಬ್ಬ ಮಹಿಳೆಯಿಂದ 22 ಬಾರಿ ವೋಟ್‌
ಒಬ್ಬ ಮಹಿಳೆ ಸೀಮಾ, ಸ್ವೀಟಿ, ಸರಸ್ವತಿ ಸೇರಿದಂತೆ ಹಲವು ಹೆಸರಿನಲ್ಲಿ 22 ಬಾರಿ ಮತ ಚಲಾಯಿಸಿದ್ದಾಳೆ, 10 ಬೂತ್ ನಲ್ಲಿ ಮತ ಚಲಾವಣೆಯಾಗಿದೆ. ಈ ಮಹಿಳೆ ಬ್ರೇಜಿಲ್‌ನ ಮಾಡೆಲ್‌ ಅನ್ನೋದು ನಂತರ ಗೊತ್ತಾಗಿದೆ. 25 ಲಕ್ಷ ಮತ ಕಳ್ಳತನ ಆಗಿದೆ ಅನ್ನೋದಕ್ಕೆ ಈಕೆಯೇ ಉದಾಹರಣೆ ಎಂದು ದಾಖಲೆ ಸಮೇತ ಸತ್ಯ ಸಂಗತಿಯನ್ನ ಬಿಚ್ಚಿಟ್ಟರು.

ಒಂದೇ ಗುರುತಿನಲ್ಲಿ ಹಲವು ಮತಗಳನ್ನ ಚಲಾಯಿಸಲು ನಕಲಿ ಫೋಟೋಗಳನ್ನ ಬಳಸಲಾಗಿದೆ. ಹರಿಯಾಣ ಚುನಾವಣೆಯ 2 ಕೋಟಿ ಮತಗಳಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ. ಪ್ರತಿ 8 ಮತದಾರರಲ್ಲಿ ಒಂದು ಮತ ನಕಲಿ ಆಗಿದೆ. ಒಂದು ಗುರುತಿನ ಚೀಟಿಯಲ್ಲಿ ಒಂದೇ ಕ್ಷೇತ್ರದಲ್ಲಿ ನೂರು ಮತಗಳು ಕಂಡುಬಂದಿವೆ ಇವೆಲ್ಲವೂ ಮತಗಳ್ಳತನಕ್ಕೆ ಉದಾಹರನೆ ಎಂದು ರಾಗಾ ಬಾಂಬ್‌ ಹಾಕಿದರು.

Share This Article