Ad image

ಡಿಕೆಶಿ ಮಹತ್ವಾಕಾಂಕ್ಷೆ ಯೋಜನೆ ಎ ಖಾತಾ ಪರಿವರ್ತನೆಗೆ ಜನರಿಂದ ನೀರಸ ಪ್ರತಿಕ್ರಿಯೆ

Team SanjeMugilu
1 Min Read

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್  ಅವರ ಮಹತ್ವಾಕಾಂಕ್ಷೆ ಯೋಜನೆ ಅಟ್ಟರ್ ಪ್ಲಾಪ್ ಆಗಿದೆ. ಬಿ ಖಾತದಿಂದ  ಎ ಖಾತಾ ಪರಿವರ್ತನೆಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೇಂದ್ರ ನಗರ ಪಾಲಿಕೆಯಲ್ಲಿ ಬರೀ 5 ಅರ್ಜಿ ಸಲ್ಲಿಕೆ ಆಗಿದೆ. ಉಳಿದ ನಾಲ್ಕು ಪಾಲಿಕೆಗಳಲ್ಲೂ ಅರ್ಜಿ ಸಲ್ಲಿಕೆ ಆಗ್ತಿಲ್ಲ ಎಂದು ತಿಳಿದು ಬಂದಿದೆ.

ಬಿ ಖಾತಾದಾರರಿಗೆ ನಗರಾಭಿವೃದ್ಧಿ ಇಲಾಖೆ ಸುವರ್ಣ ಅವಕಾಶ ಮಾಡಿಕೊಟ್ಟಿದೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ಅವಕಾಶ ನೀಡಿದೆ. 5% ಮಾರ್ಗಸೂಚಿ ದರ ಕಟ್ಟಿ ಎ ಖಾತಾ ಪಡೆಯಬಹುದಾಗಿದೆ. ಆದರೆ ಡಿ.ಕೆ ಶಿವಕುಮಾರ್ ಅವರ ಮಹತ್ವಕಾಂಕ್ಷೆಯ ಎ ಖಾತಾ ಪರಿವರ್ತನೆಗೆ ಜನರು ಆಸಕ್ತಿ ತೋರುತ್ತಿಲ್ಲ. ಕೇಂದ್ರ ನಗರ ಪಾಲಿಕೆಯಲ್ಲಿ ಎ ಖಾತಾ ಪರಿವರ್ತನೆಗಾಗಿ ಬರೀ 5 ಅರ್ಜಿ ಸಲ್ಲಿಕೆ ಆಗಿದೆ ಅನ್ನೋ ಮಾಹಿತಿ ಸಿಕ್ಕಿದೆ.

ಇನ್ನೂ ಕೇಂದ್ರ ನಗರ ಪಾಲಿಕೆ ಹೊರತುಪಡಿಸಿ ಉಳಿದ ನಾಲ್ಕು ಪಾಲಿಕೆಗಳನ್ನ ಒಟ್ಟುಗೂಡಿಸಿಕೊಂಡರು ಕೂಡ ಬರೀ ಒಂದೂವರೆ ಸಾವಿರ ಅರ್ಜಿ ಸಲ್ಲಿಕೆ ಆಗಿರೋದು ಬೆಳಕಿಗೆ ಬರ್ತಿದೆ. ಅರ್ಜಿ ಸಲ್ಲಿಕೆಗೆ ಜಾಗೃತಿ ಮೂಡಿಸೋದಕ್ಕೂ ಕೂಡ ಪ್ಲ್ಯಾನ್ ಮಾಡಲಾಗಿದ್ಯಂತೆ.

ಡಿಕೆಶಿ ಕನಸಿಗೆ ಹೊಡೆತ ಕೊಟ್ರಾ ಹೆಚ್‌ಡಿಕೆ?
ಇನ್ನೂ ಈ ಯೋಜನೆ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಟೀಕೆ ಮಾಡಿದ್ದರು. ಯಾರೂ ದುಡ್ಡು ಕೊಟ್ಟು ಎ ಖಾತಾ ಮಾಡಿಸಿಕೊಳ್ಳಬೇಡಿ ನಮ್ಮ ಸರ್ಕಾರ ಬರುತ್ತೆ ಎಂದಿದ್ರು. ಈ ಹೇಳಿಕೆಯಿಂದ ಹೊಡೆತ ಆಯ್ತಾ ಎಂಬ ಪ್ರಶ್ನೆ ಎದ್ದಿದೆ. ಹಾಗಾಗಿ ಜನ ಅರ್ಜಿ ಸಲ್ಲಿಕೆಗೆ ಮುಂದಾಗಿಲ್ಲ ಎಂದು ಹೇಳಲಾಗ್ತಿದೆ. ಇನ್ನೂ ಬೆಂಗಳೂರು ಒನ್‍ಗಳಲ್ಲೂ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶ ಕೂಡ ಮಾಡಿಲ್ಲ.

ಒಟ್ಟಾರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಸಲ್ಲಿಕೆ ಕಡಿಮೆ ಆಗಿದೆ. ಯಾವ ಕಾರಣಕ್ಕೆ ಅಂತಾ ಜಿಬಿಎ ಸತ್ಯ ತಿಳಿಯಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದು ನೋಡಬೇಕಿದೆ.

Share This Article