Ad image

ನನ್ನ ರಕ್ತದಲ್ಲೇ ಗುಂಪುಗಾರಿಕೆ ಇಲ್ಲ, ಶಾಸಕರು ದೆಹಲಿಗೆ ಹೋದರೆ ತಪ್ಪೇನು? : ಡಿಕೆಶಿ

Team SanjeMugilu
1 Min Read

ಬೆಂಗಳೂರು: ನನ್ನ ರಕ್ತದಲ್ಲೇ ಗುಂಪುಗಾರಿಕೆ ಇಲ್ಲ. ನಾನು ಯಾವುದೇ ಬಣದ ನಾಯಕ ಅಲ್ಲ. ನಾನು 140 ಜನ ಶಾಸಕರ ಅಧ್ಯಕ್ಷ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕೆಲ ಶಾಸಕರು ದೆಹಲಿಗೆ ಹೋದ ವಿಚಾರದ ಬಗ್ಗೆ ತನ್ನ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಹೇಳಿದ್ದರು. ಈ ಕಾರಣಕ್ಕೆ ಅವರು ಮಂತ್ರಿ ಸ್ಥಾನ ಕೇಳಲು ದೆಹಲಿಗೆ ಹೋಗಿರಬಹುದು ಎಂದರು.

ಶಾಸಕರು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವುದು ಸಾಮಾನ್ಯ. ಈ ಕಾರಣಕ್ಕೆ ಅವರು ದೆಹಲಿಗೆ ಹೋಗಿರಬಹುದು. ಹೈಕಮಾಂಡ್‌ ನಾಯಕರನ್ನು ಭೇಟಿಯಾಗಲು ಹೋದರೆ ತಪ್ಪೇನು? ಈ ಹಿಂದೆ ಕೆಲ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ದೆಹಲಿಗೆ ಹೋಗಿದ್ದಾರೆ. ನಾನು ಯಾರನ್ನು ದೆಹಲಿಗೆ ಕರೆದುಕೊಂಡು ಹೋಗಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಹೈಕಮಾಂಡ್‌ ಹೇಳಿದಂತೆ ಕೇಳುತ್ತಾರೆ. ಮುಖ್ಯಮಂತ್ರಿಗಳು ಅವರ ವಿಚಾರಧಾರೆಯನ್ನು ಹೇಳಿದ್ದಾರೆ. ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ . ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ.

Share This Article