Ad image

ಎರಡೂವರೆ ವರ್ಷ ತುಂಬಲಿ ಆಮೇಲೆ ಮಾಡೋಣ ಅಂದಿದ್ದೆ, ಈಗ್ಲೂ ಹೈಕಮಾಂಡ್ ಹೇಳಿದಂತೆ ಕೇಳುವೆ: ಸಿಎಂ

Team SanjeMugilu
1 Min Read

ಚಿಕ್ಕಬಳ್ಳಾಪುರ: ಹೈಕಮಾಂಡ್ 4-5 ತಿಂಗಳ ಹಿಂದೆಷ್ಟೇ ಸಚಿವ ಸಂಪುಟ ಪುನಾರಚನೆ ಮಾಡಿ ಅಂದಿದ್ದರು. ಎರಡೂವರೆ ವರ್ಷ ತುಂಬಲಿ ಆಮೇಲೆ ಮಾಡೋಣ ಅಂದೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೆ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ  ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ  ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗೆ ಭೂಮಿ ಪೂಜೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಎರಡೂವರೆ ವರ್ಷ ಆಗಲಿ ಆಮೇಲೆ ಸಂಪುಟ ಪುನಾರಚನೆ ಮಾಡೋಣ ಅಂತ ಹೇಳಿದ್ದೆ. ಈಗಲೂ ಹೈಕಮಾಂಡ್ ಇರು ಅಂದ್ರೆ ಇರ್ತೀನಿ ಅಂತ ಸ್ಪಷ್ಟಪಡಿಸಿದ್ರು.

ಇನ್ನೂ ಎಲ್ಲಾ ಜಿಲ್ಲೆಗಳಲ್ಲೂ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದೇವೆ. ಬಿಜೆಪಿಯವರು ದುಡ್ಡು ಇಲ್ಲ ಅಂತಾರೆ. ದುಡ್ಡು ಇಲ್ಲದೆ ಮಾಡೋಕೆ ಆಗುತ್ತಾ? ಬಿಜೆಪಿಯವರು ಸುಳ್ಳು ಅಪಪ್ರಚಾರ ಮಾಡುತ್ತಾರೆ ಎಂದು ಕಿಡಿಕಾರಿದರು.

ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದೇವೆ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ಸುಳ್ಳು ಹೇಳೋದು ಅವರ ಕೆಲಸ. ಗ್ಯಾರಂಟಿಗಳಿಗೆ 1 ಲಕ್ಷ ಕೋಟಿ ಖರ್ಚು ಮಾಡಿದ್ದೇವೆ. ಹೈಕಮಾಂಡ್ ಏನು ಹೇಳುತ್ತಾರೆ ಅದನ್ನೇ ಕೇಳೋದು. ನನ್ನನ್ನೇ ಮುಂದುವರೆಸಿ ಅಂದ್ರೆ ನಾನೇ ಮುಂದುವರೆಯುತ್ತೇನೆ. ಹೈಕಮಾಂಡ್ ಹೇಳಿದ್ರೆ ನಾನು ಒಪ್ಕೋಬೇಕು ಡಿಸಿಎಂ ಡಿಕೆ ಶಿವಕುಮಾರ್ ಸಹ ಒಪ್ಪಿಕೊಳ್ಳಬೇಕು ಎಂದರು.

Share This Article