ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಹಾಗೂ ಸಂಪುಟ ಪುನಾರಚನೆಗೆ ಚರ್ಚೆ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿರುವ ಡಿಸಿಎಂ ಡಿಕೆ ಶಿವಕುಮಾರ್ , ಹೈಕಮಾಂಡ್ ಸ್ಪಷ್ಟನೆಗಾಗಿ ಕಾಯ್ತಿದ್ದಾರೆ. ರಾಹುಲ್ ಗಾಂಧಿ ಮನವೊಲಿಕೆ ನಾನಾ ಸರ್ಕಸ್ ಮಾಡ್ತಿದ್ದಾರೆ. ಡಿಕೆಶಿ ಪರ ಇರುವ ಶಾಸಕರ ಮತ್ತೊಂದು ತಂಡ ದೆಹಲಿಗೆ ತೆರಳಿದ್ದು, ಹೈಕಮಾಂಡ್ ಮುಂದೆ ಡಿಕೆ ಪರ ಲಾಬಿ ನಡೆಸುವ ಸಾಧ್ಯತೆ ಇದೆ.
ಡಿಕೆಶಿಗೆ ಶಾಸಕರ ಬೆಂಬಲವಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಬಣಕ್ಕೆ ತಿರುಗೇಟು ನೀಡಲು ಡಿಸಿಎಂ ಡಿಕೆ ಶಿವಕುಮಾರ್ ಮುಂದಾದ್ರಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ನನ್ನ ಜೊತೆಯೂ ಹಲವು ಶಾಸಕರಿದ್ದಾರೆ ಎನ್ನುವುದನ್ನ ಮನವರಿಕೆ ಮಾಡಲು ಡಿಕೆ ಶಿವಕುಮಾರ್ ದೆಹಲಿಗೆ ಶಾಸಕರನ್ನು ಕಳುಹಿಸ್ತಿದ್ದಾರೆ ಎನ್ನಲಾಗ್ತಿದೆ. ಇದೀಗ ಡಿಕೆಶಿ ಪರ ಇರುವ ಮತ್ತೊಂದು ಶಾಸಕರ ತಂಡ ದೆಹಲಿ ತೆರಳಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಐವರು ಶಾಸಕರ ತಂಡ
ಡಿಕೆ ಶಿವಕುಮಾರ್ ಪರ ಲಾಬಿ ನಡೆಸಲು ಮಾಗಡಿ ಬಾಲಕೃಷ್ಣ ನೇತೃತ್ವದಲ್ಲಿ ಐವರು ಶಾಸಕರು ದೆಹಲಿಗೆ ತೆರಳಿದ್ದಾರೆ. ಕದಲೂರು ಉದಯ್ ಗೌಡ, ಶರತ್ ಬಚ್ಚೇಗೌಡ, ನಯನ ಮೋಟಮ್ಮ, ಇಕ್ಬಾಲ್ ಹುಸೇನ್ ಅವರ ತಂಡ ತಡರಾತ್ರಿ ದೆಹಲಿಗೆ ತೆರಳಿದೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ಗೆ ಒತ್ತಡ ಹೇರಲು ಮುಂದಾದ ಶಾಸಕರು
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿಗೆಂದು ಶಾಸಕರು ತೆರಳಿದ್ದು, ಡಿಕೆಶಿ ಅವರನ್ನ ಸಿಎಂ ಮಾಡುವಂತೆ ಹೈಕಮಾಂಡ್ಗೆ ಒತ್ತಡ ಹೇರಲು ಶಾಸಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಪರ ಲಾಬಿಗೆ ದೆಹಲಿಗೆ ತೆರಳಿದೆ ಮತ್ತೊಂದು ಟೀಮ್; ಹೈಕಮಾಂಡ್ ಮುಂದೆ ‘ಕೈ’ ಬಿಕ್ಕಟ್ಟು
