ಬೆಂಗಳೂರು: ಬಿ ಟು ಎ ಖಾತಾ ಪರಿವರ್ತನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನವೆಂಬರ್ 01 ರಿಂದ 100 ದಿನಗಳ ಒಳಗಡೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಅರ್ಜಿ ಸಲ್ಲಿಕೆಯಾಗದ ಹಿನ್ನೆಲೆ 100 ದಿನಗಳ ಗಡುವು ವಿಸ್ತರಣೆಗೆ ಜಿಬಿಎ ಚಿಂತನೆ ನಡೆಸಿದೆ. ಜೊತೆಗೆ ಎ ಖಾತಾ ಪರಿವರ್ತನೆಗೆ ಸರಳೀಕರಣ ಮಾಡಲು ಮುಂದಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಮಹತ್ವಕಾಂಕ್ಷೆಯ ಯೋಜನೆ ಎ ಖಾತಾ ಪರಿವರ್ತನೆಗೆ ಅರ್ಜಿ ಸಲ್ಲಿಕೆ ಆರಂಭಗೊಂಡು ಒಂದು ತಿಂಗಳು ಆಗುತ್ತಿದೆ. ಆದರೆ ಅರ್ಜಿ ಸಲ್ಲಿಕೆ ಆಗಿರೋದು ಮಾತ್ರ ಬರೀ 1,500. ಎ ಖಾತಾ ಪರಿವರ್ತನೆಗೆ ಜನ ನೀರಸ ಪ್ರತಿಕ್ರಿಯೆ ತೋರಿಸುತ್ತಿರುವುದು ಬಯಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಏಳೂವರೆ ಬಿ ಖಾತಾಗಳು ಎ ಖಾತಾ ಪರಿವರ್ತನೆ ಆಗಬೇಕಿದೆ. 5% ದರ ಕೂಡ ಕಟ್ಟಬೇಕಿದೆ. ಅರ್ಜಿ ಸಲ್ಲಿಕೆಯಲ್ಲಿ ಜನ ನೀರಸ ಪ್ರತಿಕ್ರಿಯೆ ತೋರಿಸುತ್ತಿರುವ ಹಿನ್ನೆಲೆ 100 ದಿನಗಳ ಗಡುವನ್ನ ವಿಸ್ತರಣೆ ಮಾಡೋದಕ್ಕೆ ಚಿಂತನೆ ನಡೆದಿದೆ. ಅರ್ಜಿ ಸಲ್ಲಿಕೆ ಆಧಾರದ ಮೇಲೆ ವಿಸ್ತರಣೆ ಆಗಲಿದೆ.
5% ಮಾರ್ಗಸೂಚಿ ದರ ಮಾತ್ರ ಕಡಿಮೆ ಮಾಡಲ್ಲ. ಆದರೆ ಅರ್ಜಿ ಸಲ್ಲಿಕೆ ಸರಳೀಕರಣ ಮಾಡುತ್ತಾರಂತೆ. ಎ ಖಾತಾ ಪರಿವರ್ತನೆ ಅರ್ಜಿ ಸಲ್ಲಿಕೆಯನ್ನ ಸರಳೀಕರಣ ಮಾಡೋದಕ್ಕು ಮುಂದಾಗಿದೆಯಂತೆ. ಅರ್ಜಿ ಸಲ್ಲಿಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ, ಅರ್ಜಿ ಸಲ್ಲಿಕೆ ಆದ ತಕ್ಷಣ ಅರ್ಜಿ ವಿಲೇವಾರಿ ಮಾಡಿ ಎ ಖಾತಾ ವಿತರಣೆ ಮಾಡುತ್ತೇವೆ ಎಂದು ಕಮಿಷನರ್ ತಿಳಿಸಿದ್ದಾರೆ.
