Ad image

ನಾನು, ಸಿಎಂ ಬ್ರದರ್ಸ್ ಥರ ಕೆಲಸ ಮಾಡ್ತಿದ್ದೀವಿ – ಮತ್ತೆ ಡಿಕೆಶಿ ಒಗ್ಗಟ್ಟಿನ ಮಂತ್ರ

Team SanjeMugilu
1 Min Read

ಬೆಂಗಳೂರು: ನಾನು – ಸಿಎಂ ಬ್ರದರ್ಸ್‌ ತರಹ ಕೆಲಸ ಮಾಡ್ತೀವಿ, ನಮ್ಮ ನಡುವೆ ಯಾವುದೇ ಗುಂಪು ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಹಿನ್ನೆಲೆ ವಿಧಾನಸೌಧದಲ್ಲಿಂದು ಡಿಸಿಎಂ ಡಿಕೆಶಿ ಹನುನಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಸಲ್ಲಿಸಿದರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್‌ ಮೀಟಿಂಗ್‌  ವಿಚಾರ ನನಗೂ ಸಿಎಂಗೆ ಸಂಬಂಧಿಸಿದ ವಿಚಾರ. ನಾವಿಬ್ರೂ ಬ್ರದರ್ಸ್ ಥರ ಇದ್ದೀವಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ ಎಂದು ನುಡಿದರು.

ನಮ್ಮಲ್ಲಿ ಯಾವುದೇ ಗುಂಪಿಲ್ಲ, ನಾವು ಹುಟ್ಟುವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ. ಹಾಗಾಗಿ ಗುಂಪು ಯಾಕೆ ಬೇಕು? ನೀವೆಲ್ಲ ಏನೇನೋ ತೋರಿಸ್ತಿದೀರ, ಸಿದ್ದರಾಮಯ್ಯದೊಂದು ಗುಂಪು, ಡಿಕೆಶಿ ಗುಂಪು ಅಂತ ನಮ್ಮಲ್ಲಿ ಗುಂಪು ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದುವರಿದು.. ಹನುನಂತಯ್ಯ ವಿಧಾನಸೌಧ ಕಟ್ಟಿದ್ರು, ಎಸ್.ಎಂ ಕೃಷ್ಣ ವಿಕಾಸಸೌಧ ಕಟ್ಟಿದ್ರು. ಬೆಂಗಳೂರನ್ನು ಕೆಂಪೇಗೌಡ ಕಟ್ಟಿದ್ದಾರೆ. ಅಧಿಕಾರ ಸಿಕ್ಕಿದಾಗ ಇವರೆಲ್ಲ ಸಾಕ್ಷಿಗುಡ್ಡೆ ಬಿಟ್ ಹೋಗಿದ್ದಾರೆ. ಯಾರೇ ಆಗಲೀ ಅಧಿಕಾರ ಸಿಕ್ಕಿದಾಗ ಇಂಥ ಸಾಕ್ಷಿ ಗುಡ್ಡೆ ಬಿಟ್ ಹೋಗಬೇಕು. ನಾವೂ ಕೂಡಾ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ನಾನು, ಸಿಎಂ ಬ್ರದರ್ಸ್ ಥರ ಕೆಲಸ ಮಾಡ್ತಿದೀವಿ. ನಿಮ್ಮ ಒತ್ತಡಕ್ಕೆ ಬ್ರೇಕ್‌ಫಾಸ್ಟ್ ಎಲ್ಲ, ನಮಗೇನೂ ಅಗತ್ಯ ಇಲ್ಲ. ನಮ್ಮಲ್ಲಿ ಯಾವುದೇ ಗುಂಪಿಲ್ಲ. 140 ಜನರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡ್ತಿದೀವಿ ಎಂದು ಹೇಳಿದರು.

ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ  ಪ್ರತಿಕ್ರಿಯಿಸಿ, ಡಿಕೆಶಿ ಬ್ರೇಕ್ ಫಾಸ್ಟ್ ಗೆ ಇನ್ನೂ ಕರೆದಿಲ್ಲ, ಕರೆದೇ ಕರೆಯುತ್ತಾರೆ, ಕರೆದ್ರೆ ಹೋಗ್ತೀನಿ ಎಂದು ಹೇಳಿದರು.

Share This Article