Ad image

7.11 ಕೋಟಿ ದರೋಡೆ ಕೇಸ್ – CMS ವಿರುದ್ಧ ಕ್ರಮಕ್ಕಾಗಿ RBIಗೆ ಪೊಲೀಸರ ಪತ್ರ

Team SanjeMugilu
1 Min Read
ಬೆಂಗಳೂರು: ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್  ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಆರ್‌ಬಿಐಗೆ (RBI) ಪತ್ರ ಬರೆದಿದೆ.

ಹಾಡಹಗಲೇ ನಡೆದಿದ್ದ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ  ಹಣ ದರೋಡೆ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿಗೆ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಇಲಾಖೆ ಆರ್‌ಬಿಐಗೆ ಪತ್ರ ಬರೆದಿದ್ದು, ದರೋಡೆ ಪ್ರಕರಣದಲ್ಲಿ ಸಿಎಂಎಸ್ ಭದ್ರತಾ ಲೋಪ ಕಂಡುಬಂದಿದ್ದು, ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದೆ.

ಈ ನಡುವೆ RBI ಮೂಲಕ ಎಟಿಎಂಗೆ ಹಣ ತುಂಬುವ ಎಲ್ಲಾ ಸಂಸ್ಥೆಗಳ ಜೊತೆಗೆ ಪೊಲೀಸ್ ಇಲಾಖೆ ಸಭೆ ನಡೆಸಲು ಕೂಡ ತಯಾರಿ ನಡೆಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳ ಲಿಸ್ಟ್ ತಯಾರಿ ಮಾಡಲಾಗಿದೆ. ರಿಜಿಸ್ಟರ್ ಆಫ್ ಸೊಸೈಟಿಗೆ ಈಗಾಗಲೇ ಕಮಿಷನರೇಟ್ ವ್ಯಾಪ್ತಿಯ ಸಂಸ್ಥೆಗಳ ಲಿಸ್ಟ್ ಕೊಡಲು ಸೂಚನೆ ನೀಡಲಾಗಿದೆ.

ಇನ್ನೂ ನಗರದ ಆಯಾ ವಿಭಾಗದ ಡಿಸಿಪಿಗಳಿಗೆ ತಮ್ಮ ವ್ಯಾಪ್ತಿಯ ಲಿಸ್ಟ್ ತಯಾರಿಗೆ ಸೂಚನೆ ನೀಡಿದ್ದು, ರಿಜಿಸ್ಟರ್ ಆಫ್ ಸೊಸೈಟಿಯಿಂದ ಮಾಹಿತಿ ಪಡೆದು, RBI ಮೂಲಕವೇ ವಾರ್ನಿಂಗ್ ಕೊಡಿಸಲು ಪೊಲೀಸರು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಗಾಗ್ಲೇ ಆರ್‌ಬಿಐ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವ ಕಮಿಷನರ್, ಬಹುತೇಕ ಈ ವಾರ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ.
Share This Article