ʻಫ್ಯಾಮಿಲಿ ಮ್ಯಾನ್ʼ, ʻಸಿಟಾಡೆಲ್ ಹನಿಬನಿʼ ನಿರ್ದೇಶಕನ ಜೊತೆ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ತಿಂಗಳಿಂದ ಬಹಿರಂಗವಾಗೇ ಈ ಜೋಡಿ ಕಾಣಿಸ್ಕೊಳ್ತಾ ಬಂದಿತ್ತು. ಇದೀಗ ಗುಟ್ಟಾಗಿ ಕಲ್ಯಾಣವಾಗಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಮದುವೆಯ ಫೋಟೋಗಳನ್ನ ಸಮಂತಾ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ರಾಜ್ ನಿಡಿಮೋರು ಈಗಾಗ್ಲೇ ವಿವಾಹವಾಗಿದ್ದು ಸಮಂತಾ ಜೊತೆ ಅವರಿಗೆ 2ನೇ ವಿವಾಹ.
ಲಿಂಗಭೈರವಿ ದೇವಿಯ ಆರಾಧಕಿ ಆಗಿರುವ ಸಮಂತಾ ಮನೆಯಲ್ಲಿ ನಿತ್ಯವೂ ಪೂಜೆ ಮಾಡೋದಾಗಿ ಹೇಳಿಕೊಂಡಿದ್ರು. ದೇವಿ ಮುಂದೆ ಧ್ಯಾನ ಮಾಡುವ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಅದೇ ದೇವಿಯ ಮುಂದೆ ರಾಜ್ ಸಮಂತಾ ಅಧಿಕೃತ ದಾಂಪತ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸರಳ ವಿವಾಹ ಸುಂದರ ಫೋಟೋಗಳನ್ನ ಸಮಂತಾ ರಿಲೀಸ್ ಮಾಡಿದ್ದಾರೆ. ಲಿಂಗಭೈರವಿ ದೇವಿ ಮುಂದೆ ಇಂದು ಬೆಳ್ಳಂಬೆಳಗ್ಗೆ ಹಿಂದೂ ಸಂಪ್ರದಾಯದ ಪ್ರಕಾರ ಸಮಂತಾ ರಾಜ್ ಶಾಸ್ತೋಕ್ತ ಕಲ್ಯಾಣ ನಡೆದಿದೆ.
