Ad image

ಗಗನಕ್ಕೇರಿದ ತರಕಾರಿಗಳ ಬೆಲೆ – ಯಾವುದಕ್ಕೆ ಎಷ್ಟು?

Team SanjeMugilu
1 Min Read

ಬೆಂಗಳೂರು: ರಾಜ್ಯದಲ್ಲಿ ಚಳಿ ಅಬ್ಬರಿಸುತ್ತಿದ್ದು, ತರಕಾರಿಗಳ ಮೇಲೆಯೂ ಚಂಡಮಾರುತದ ಎಫೆಕ್ಟ್  ಬೀರಿದೆ. ಇದರಿಂದ ಇಳುವರಿ ಕಡಿಮೆಯಾಗಿದ್ದು, ತರಕಾರಿಗಳ ಬೆಲೆ ಗಗನಕ್ಕೇರಿದೆ.

ಹೌದು, ಕೆಲ ತರಕಾರಿಗಳ ಬೆಲೆ ಶತಕದ ಗಡಿ ದಾಟಿದ್ರೇ, ನುಗ್ಗೆಕಾಯಿ ಬೆಲೆ ಐದನೂರರ ಗಡಿ ದಾಟಿದೆ. ಕಳೆದ ಒಂದು ವಾರದಿಂದ ಈ ಚಳಿ ರಾಜಧಾನಿ ಜನರನ್ನು ಫ್ರಿಜ್‌ನಲ್ಲಿ ಇಟ್ಟಂತೆ ತಂಪಾಗಿಸಿದೆ. ಆದರೆ ಅಡುಗೆಗೆ ಬೇಕಾದ ತರಕಾರಿಗಳ ದರ ಜನರ ಜೇಬು ಸುಡುತ್ತಿದೆ.

ಬಹುತೇಕ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ನುಗ್ಗೇಕಾಯಿ ಹಾಪ್ ಕಾಮ್ಸ್ನಲ್ಲಿ ಒಂದು ಕೆಜಿ 510 ರೂ.ಗೆ ಮಾರಾಟವಾಗ್ತಿದೆ. ಮಾರ್ಕೆಟ್‌ಗಳಲ್ಲಿ ಒಂದು ನುಗ್ಗೇಕಾಯಿ 50 ರೂ., ಜೋಡಿ ನುಗ್ಗೇಕಾಯಿ 100 ರೂ. ಆಗಿದೆ. ಇದರಿಂದ ಸಿಲಿಕಾನ್ ಸಿಟಿ ಜನರು ನುಗ್ಗೇಕಾಯಿ ಸಹವಾಸ ಬೇಡ ಅಂತಿದ್ದಾರೆ. ಈಗಾಗಲೇ ಟೊಮೆಟೋ ಬೆಲೆ ಅರ್ಧಶತಕ ಬಾರಿಸಿದ್ದು, ಉಳಿದ ತರಕಾರಿಗಳು ನಿಧಾನವಾಗಿ ಶತಕಬಾರಿಸುತ್ತಿದೆ. ಎಲ್ಲಾ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ ಎಂದು ಗೃಹಿಣಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಯಾವುದರ ಬೆಲೆ ಎಷ್ಟು?
ನುಗ್ಗೇಕಾಯಿ- ಕೆ.ಜಿಗೆ 510 ರೂ.
ಅವರೇಕಾಯಿ- ಕೆ.ಜಿಗೆ 85 ರೂ.
ಹುರುಳಿಕಾಯಿ – ಕೆ.ಜಿಗೆ 62 ರೂ.
ಊಟಿ ಕ್ಯಾರೆಟ್ – ಕೆ.ಜಿಗೆ 88 ರೂ.
ಬಿಟ್‌ರೂಟ್ – ಕೆ.ಜಿಗೆ 55 ರೂ.
ಹಣ್ಣು ಹುರಳಿಕಾಯಿ – ಕೆ.ಜಿಗೆ 110 ರೂ.
ಹಸಿ ಮೆಣಸಿನಕಾಯಿ– ಕೆ.ಜಿಗೆ 70 ರೂ.
ಬೆಂಡೆಕಾಯಿ – ಕೆ.ಜಿಗೆ 84 ರೂ.
ಟೊಮ್ಯಾಟೋ – ಕೆ.ಜಿಗೆ 70 ರೂ.

ಇನ್ನೂ ಟೊಮ್ಯಾಟೋ ಬೆಲೆಯಂತು ದಿನೇ ದಿನೇ ಏರಿಕೆಯಾಗುತ್ತಿದೆ. ಕೆ.ಜಿ ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ 70 ರೂ.ಯಿಂದ 90 ರೂ. ಮಾರಾಟವಾಗ್ತಿದೆ. ಕಳೆದ ಒಂದು ವರ್ಷದಿಂದ ಟೊಮ್ಯಾಟೋಗೆ ಉತ್ತಮ ಬೆಲೆ ಇಲ್ಲದೆ ರೈತರು ಕಂಗಲಾಗಿದ್ರು, ಆದ್ರೀಗ ಟೊಮ್ಯಾಟೋಗೆ ಉತ್ತಮ ಬೆಲೆ ಬಂದಿದ್ರಿಂದ ರೈತರು ಮೊಗದಲ್ಲಿ ಮಂದಹಾಸ ಮೂಡಿದೆ.

Share This Article