Ad image

ಕುರ್ಚಿ ಕಾದಾಟದ ನಡುವೆ ಕಾಂಗ್ರೆಸ್​ಗೆ ಕಾದಿದ್ಯಾ ಶಾಕ್​? ಬಿಜೆಪಿ ನಾಯಕ ಜೊತೆ ರಾಜಣ್ಣ ಪುತ್ರ

Team SanjeMugilu
2 Min Read

ಬೆಂಗಳೂರು : ರಾಜ್ಯ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡುತ್ತಿರುವ ಬೆನ್ನಲ್ಲೇ ನಾನಾ ಬೆಳವಣಿಗೆ ನಡೆಯುತ್ತಿದ್ದು, ಹೊಸ ಹೊಸ ಟೆನ್ಷನ್ ಶುರುವಾಗುವ ಲಕ್ಷಣ ಕಾಣ್ತಿದೆ. ಕಾಂಗ್ರೆಸ್​ ಮಾಜಿ ಸಚಿವ ಕೆ.ಎನ್ ರಾಜಣ್ಣ ಪುತ್ರ ಎಲ್​ಎಲ್​ಸಿ ರಾಜೇಂದ್ರ  ಅವರು ಹಲವು ಬಿಜೆಪಿ ನಾಯಕರನ್ನ ಭೇಟಿಯಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ವಿರುದ್ಧ ಮಾತಾಡಿ ಸಚಿವ ಸ್ಥಾನ ಕಳೆದುಕೊಂಡ ಕೆಎನ್​ ರಾಜಣ್ಣ ಅವರು ಮಗನ ಭವಿಷ್ಯಕ್ಕೆ ಹೊಸ ರಣತಂತ್ರ ರೂಪಿಸಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ರಾಜಣ್ಣ ಮಾಡ್ತಿದ್ದಾರಾ ಹೊಸ ರಣತಂತ್ರ
ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಸಚಿವ ಕೆ.ಎನ್​ ರಾಜಣ್ಣ ಪುತ್ರ ಎಂಎಲ್​ಸಿ ರಾಜೇಂದ್ರ ರಾಜಣ್ಣ ರಾಜಕೀಯದಲ್ಲಿ ಹೊಸ ಹೆಜ್ಜೆ ಇಟ್ಟಂತೆ ಕಾಣ್ತಿದೆ. ದಿಢೀರ್​ ದೆಹಲಿಗೆ ತೆರಳಿರುವ ರಾಜೇಂದ್ರ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿ ಸೋಮಣ್ಣ ಹಾಗೂ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಹಾಗೂ ಅರವಿಂದ್ ಬೆಲ್ಲದ್ ಅವರನ್ನು ಭೇಟಿಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕರ ವಿಶ್ವಾಸ ಗಿಟ್ಟಿಸಿಕೊಳ್ಳಲು ಮುಂದಾದ ರಾಜಣ್ಣ ಪುತ್ರ ಎನ್ನುವ ಪ್ರಶ್ನೆ ಕೂಡ ಮೂಡಿದೆ.
ಬಿಜೆಪಿ ನಾಯಕರ ವಿಶ್ವಾಸಗಳಸೋ ಯತ್ನ
ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಕೆಲ ಪ್ರಮುಖ ರಾಜ್ಯ ಬಿಜೆಪಿ ನಾಯಕರನ್ನ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದು ರಾಜ್ಯ ಬಿಜೆಪಿ ನಾಯಕರ ವಿಶ್ವಾಸಗಳಿಸಲು ರಾಜೇಂದ್ರ ರಾಜಣ್ಣ ಮಾಡ್ತಿರುವ ಪ್ರಯತ್ನ ಎನ್ನಲಾಗ್ತಿದೆ.
ರಾಜಣ್ಣ ಮತ್ತೆ ಸಂಪುಟ ಸೇರೋದು ಡೌಟ್​
ಈಗಾಗಲೇ ಕಾಂಗ್ರೆಸ್​ನ ಮಂತ್ರಿ ಮಂಡಲದಿಂದ ಕೆಎನ್ ರಾಜಣ್ಣ ವಜಾಗೊಂಡಿದ್ದಾರೆ. ಆದ್ರೆ ಮತ್ತೊಮ್ಮೆ ರಾಜಣ್ಣ ಸಂಪುಟಕ್ಕೆ ಸೇರೋದು ಅನುಮಾನ ಎನ್ನುವ ಮಾತುಗಳು ಕೇಳಿ ಬರ್ತಿದೆ. ಈಗಾಗಲೇ ಪವರ್ ಶೇರಿಂಗ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಮುಂಬರುವ ದಿನಗಳಲ್ಲಿ ಡಿಕೆ ಶಿವಕುಮಾರ್​ ಅವರಿಗೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬಹುದು ಎನ್ನುವ ಮಾತು ಸಹ ಕೇಳಿ ಬರ್ತಿದೆ. ಹೀಗಾಗಿ ಕೆಎನ್​ ರಾಜಣ್ಣ ಹಾಗೂ ಪುತ್ರ ರಾಜೇಂದ್ರ ಹೊಸ ದಾರಿಯಲ್ಲಿ ಹೆಜ್ಜೆ ಇಡೋಕೆ ತಯಾರಿ ನಡೆಸಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಡಿಕೆಶಿ ಸಿಎಂ ಆದ್ರೆ ರಾಜಣ್ಣ ಔಟ್​!?
ಮುಂದೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ್ರೆ ಕ್ಯಾಬಿನೆಟ್ ನಲ್ಲಿ ರಾಜಣ್ಣ ಮಂತ್ರಿ ಆಗೋದು ಕಷ್ಟ. ಆ ನಂತರ ಕಾಂಗ್ರೆಸ್ ನಿಂದ ದೂರ ಉಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೀಗಾಗಿಯೇ ರಾಜ್ಯ ಬಿಜೆಪಿ ನಾಯಕರ ವಿಶ್ವಾಸದೊಂದಿಗೆ ಮುಂದೆ ಬಿಜೆಪಿಗೆ ಹತ್ತಿರ ಆಗುವ ಪ್ರಯತ್ನ ಮಾಡ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಈಗಾಗಲೇ ವಿ ಸೋಮಣ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುವ ನಿರೀಕ್ಷೆ ಇದೆ. ವಿ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷರಾದ್ರೆ ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ಬಿಜೆಪಿ ಸೇರುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕುರ್ಚಿ ಕಾದಾಟದ ನಡುವೆ ರಾಜೇಂದ್ರ ಹಾಗೂ ಬಿಜೆಪಿ ನಾಯಕರ ಭೇಟಿ ಚರ್ಚೆಗೆ ಕಾರಣವಾಗಿದೆ.

Share This Article