Ad image

ಜೈಲಲ್ಲಿ ಮಾದಕ ವಸ್ತು ನಿರ್ಬಂಧಿಸಿದ್ದಕ್ಕೆ ರೌಡಿಗಳಿಂದ ಕಿರಿಕ್ – ಜೈಲರ್‌ ಸೇರಿ ಮೂವರು ಆಸ್ಪತ್ರೆ‌ ಪಾಲು

Team SanjeMugilu
1 Min Read

ಕಾರವಾರ: ಮಾದಕ ವಸ್ತುಗಳನ್ನು ಜೈಲಿನಲ್ಲಿ ಬಿಡದೆ ಬಿಗಿ ಮಾಡಿದ್ದಕ್ಕೆ ರೌಡಿಗಳು ಜೈಲರ್‌ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಸೇರಿಕೊಂಡು ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಜೈಲರ್ ಜೊತೆ ಮಾದಕ ವಸ್ತುಗಳ ವಿಚಾರಕ್ಕೆ ಗಲಾಟೆ ಮಾಡಿದರೂ ಒಪ್ಪದ ಹಿನ್ನೆಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಜೈಲರ್ ಹಾಗೂ ಸಿಬ್ಬಂದಿಯನ್ನು ಕಾರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಆರೋಪಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರೋಪಿಗಳನ್ನು ಕಾರವಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಮಾದಕ ಪದಾರ್ಥಗಳನ್ನು ಸಂಪೂರ್ಣವಾಗಿ ಜೈಲಲ್ಲಿ ನಿರ್ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.

Share This Article