Ad image

ಕುರ್ಚಿ ಕಿತ್ತಾಟದ ಮಧ್ಯೆ ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್

Team SanjeMugilu
1 Min Read

ಬೆಳಗಾವಿ: ಕುರ್ಚಿ ಕಿತ್ತಾಟದ ಮಧ್ಯೆ ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್ ನಡೆದಿದೆ. ಮಾಜಿ ಶಾಸಕ ಫಿರೋಜ್ ಸೇಠ್ ಮನೆಯಲ್ಲಿಅಹಿಂದ ನಾಯಕರ ಜೊತೆ ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ  ಡಿನ್ನರ್ ಮೀಟಿಂಗ್ ಮಾಡಿದ್ದಾರೆ.

ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಫಿರೋಜ್ ಸೇಠ್ ಮನೆಯಲ್ಲಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ ಖಾದರ್, ಜಮೀರ್ ಅಹಮದ್‌, ಭೈರತಿ ಸುರೇಶ್, ಸಲೀಂ ಅಹ್ಮದ್ ಸೇರಿ ಹಲವರು ಭಾಗಿಯಾಗಿದ್ದರು. ಭೋಜನಕ್ಕೆ ತರಹೇವಾರಿ ಮೀನಿನ ಊಟ, ಮಟನ್ ಚಾಪ್ಸ್, ಮಟನ್ ಬಿರಿಯಾನಿ ಸೇರಿ 30ಕ್ಕೂ ಹೆಚ್ಚು ಖಾದ್ಯಗಳನ್ನು ಫಿರೋಜ್ ಸೇಠ್ ಮಾಡಿಸಿದ್ದರು.

ಅಹಿಂದ ನಾಯಕರು ಡಿನ್ನರ್‌ ಪಾಲಿಟಿಕ್ಸ್‌ ಮಾಡಿದರೆ ಮತ್ತೊಂದು ಕಡೆ ವಾಲ್ಮೀಕಿ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಕಂಪ್ಲಿ ಗಣೇಶ್, ಚಳ್ಳಕೆರೆ ರಘು, ಬಸನಗೌಡ ತುರವಿಹಾಳ್, ಬಸನಗೌಡ ದದ್ದಲ್, ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಭಾಗಿಯಾಗಿದ್ದರು.

ವಾಲ್ಮೀಕಿ ಜಾತ್ರೆ, ಸಮಾಜದ ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ನಾಯಕರು ಚರ್ಚೆ ಮಾಡಿದ್ದಾರೆ.

Share This Article