Ad image

ನನ್ ಹಿಂದೆ ಯಾರೂ ಬರೋದ್ ಬೇಡ! ಡಿನ್ನರ್ ಮೀಟಿಂಗ್ ಬಳಿಕ ಡಿಕೆಶಿ ಫಸ್ಟ್ ರಿಯಾಕ್ಷನ್

Team SanjeMugilu
2 Min Read

ಬೆಳಗಾವಿ: ಚಳಿಗಾಲ ಅಧಿವೇಶದ ವೇಳೆ ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಖತ್​ ಸದ್ದು ಮಾಡುತ್ತಿದೆ. ನಿನ್ನೆ ರಾತ್ರಿ ಡಿಸಿಎಂ ಡಿಕೆಶಿ ಶಾಸಕರ ಡಿನ್ನರ್​ ಮೀಟಿಂಗ್​ ನಡೆಸಿ ಕುತೂಹಲ ಮೂಡಿಸಿದ್ದಾರೆ. ಅತ್ತ ಡಿನ್ನರ್​ ಮೀಟಿಂಗ್​​​​ನಲ್ಲಿ ಭಾಗಿಯಾಗಿದ್ದ ಕೆಲ ಶಾಸಕರು ಡಿಸಿಎಂ ಡಿ.ಕೆ ಶಿವಕುಮಾರ್  ಪರ ಬ್ಯಾಟ್​ ಬೀಸ್ತಿದ್ದಾರೆ. ಶಾಸಕರ ಈ ಹೇಳಿಕೆಯಿಂದ ಕಾಂಗ್ರೆಸ್​​ ಸರ್ಕಾರದಲ್ಲಿ ಗೊಂದಲದ ವಾತವರಣ ನಿರ್ಮಾಣವಾಗಿದೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್​​ ಅವರು ನಾವು ಡಿನ್ನರ್ ಮೀಟಿಂಗ್ ಮಾಡಿಲ್ಲ ಅಂತಾ ಹೇಳಿದ್ದಾರೆ.
ನನ್ನ ಹಿಂದೆ ಯಾರೂ ಬರೋದು ಬೇಡ
ಡಿನ್ನರ್ ಮೀಟಿಂಗ್ ಮೂಲಕ ಶಕ್ತಿ ಪ್ರದರ್ಶನ ಮಾಡ್ತಿದ್ದೀರಾ ಎಂಬ ಪ್ರಶ್ನಗೆ ಉತ್ತರಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್​​​, ನಾವು ಡಿನ್ನರ್ ಮೀಟಿಂಗ್ ಮಾಡಿಲ್ಲ, ನಾನು ಮಾಜಿ DCC ಅಧ್ಯಕ್ಷ ಕರೆದಿದ್ರು ಅಲ್ಲಿಗೆ ಹೋಗಿದ್ದೆ ಅಷ್ಟೇ, ನನ್ನ ಹಿಂದೆ ಯಾರೂ ಬರೋದು ಬೇಡ, ನನಗೆ ಯಾವ ಪ್ರದರ್ಶನವೂ ಬೇಡ, ನನ್ನ ಪರ ಯಾರೂ ನಿಲ್ಲೋದು ಬೇಡ, ನಾವೆಲ್ಲರೂ ಒಂದೇ 140 ಶಾಸಕರಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ರು.
ನಾನು, ಸಿಎಂ ನಾಳೆ ದೆಹಲಿಗೆ ಹೋಗ್ತಿದ್ದೇವೆ
ದೇಶದಲ್ಲಿ ವೋಟ್​​ ಚೋರಿ ನಡೆದಿದೆ ಎಂದು ಕಾಂಗ್ರೆಸ್​​ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಡಿಸಿಎಂ ಮತ್ತು ಡಿಸಿಎಂ ದೆಹಲಿ ಪ್ರಯಾಣ ಬೆಳಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್​​, ನಾನು, ಸಿಎಂ ನಾಳೆ ದೆಹಲಿಗೆ ಹೋಗ್ತಿದ್ದೇವೆ, ವೋಟ್ ಚೋರಿ ಪ್ರತಿಭಟನೆಗಾಗಿ ಹೋಗುತ್ತಿದ್ದೇನೆ ಅಂತ ಹೇಳಿದ್ರು.
ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ
ರಾಹುಲ್ ಗಾಂಧಿ ಕರ್ನಾಟಕದಿಂದ ವೋಟ್ ಚೋರಿ ಪ್ರತಿಭಟನೆ ಶುರು ಮಾಡಿದ್ರು, 2023ರಲ್ಲೇ ಅವರು ಶುರುಮಾಡಿದ್ರು, ನಾವು ಚಿಲುಮೆಯಿಂದ ಶುರು ಮಾಡಿದ್ವಿ, ಸುರ್ಜೇವಾಲ ಸೇರಿದಂತೆ ನಾಯಕರು ಹೋಗಿ ಎಲೆಕ್ಷನ್ ಕಮಿಷನ್ ಬಳಿ‌ ಮಾತನಾಡಿ, ಕಂಡುಹಿಡಿಯುವ ಮೂಲಕ ಗೆದ್ದಿದ್ವಿ, ಲೋಕಸಭಾ, ರಾಜ್ಯಸಭಾ ಚುನಾವಣೆಗಳಲ್ಲಿ ಸಾಕಷ್ಟು ವೋಟ್ ಚೋರಿಯಾಗಿತ್ತು, ನಮ್ಮ ಎಲೆಕ್ಷನ್ ಕಮಿಷನ್ ಒಂದು ಪಕ್ಷದ ಪರವಾಗಿ ಕೆಲಸ ಮಾಡ್ತಿದೆ. ಇದು ರಾಷ್ಟ್ರದ ಸಮಸ್ಯೆ ಆದ್ರಿಂದ ದೆಹಲಿಯಲ್ಲಿ ಈ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ಸುಮಾರು 1 ಕೋಟಿಗೂ ಹೆಚ್ಚು ಜನರಿಂದ ಸಹಿ ಪಡೆದು ಅಭಿಯಾನ ಮಾಡಿದ್ದಾರೆ. ಆದ್ರಿಂದ ನಮ್ಮ ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್ ಎಂದಿದ್ದಾರೆ.
ಯತೀಂದ್ರ ಬಗ್ಗೆ ಡಿಸಿಎಂ ಮೌನ
ಇತ್ತ, ನಾಯಕತ್ವ ಬದಲಾವಣೆ ಇಲ್ಲ ಅಂತಾ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ, ಸಿಎಂ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಹೇಳಿಕೆ ಕೊಟ್ಟಿರುವ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಡಿಕೆಶಿ ಉತ್ತರ ನೀಡಲು ನಿರಾಕರಿಸಿದ್ದಾರೆ. ಪ್ರಶ್ನೆಗೆ ಉತ್ತರಿಸದೆ ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದಾರೆ.

Share This Article