ಹಾವೇರಿ: ಜಿಲ್ಲೆಯಲ್ಲಿ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಪ್ಪಲಿ ಹಾರ ಹಾಕಿ ಶಿಕ್ಷಕನ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಡಿ.10ರಂದು ಲೈಂಗಿಕ ಕಿರುಕುಳ ಆರೋಪದ ಮೇಲೆ ಶಿಕ್ಷಕ ಜಗದೀಶ್ ಅವರಿಗೆ ಧರ್ಮದೇಟು ನೀಡಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಈ ಸಂಬಂಧ ಶಾಲಾ ಮುಖ್ಯ ಶಿಕ್ಷಕರು ದೂರು ದಾಖಲಿಸಿದ್ದು, ಏಕಾಏಕಿ ಶಾಲೆಗೆ ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ 22 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಾದಿಕ್ ಮನಿಯಾರ್, ಜಿಶನ್ ನಾಗದ, ಅಬ್ದುಲಗನಿ ಪರಾಸ್, ಫಾಜಿಲ್‌ಅಹ್ಮದ್ ಮನಿಯಾರ್, ಅತ್ತಾವುಲ್ಲ ಖಾನ್ ಭಕ್ಷಿ, ಸುಲೇದ್ ಮನಿಯಾರ್, ಮೋಷಿನ್ ಖತೀಬ್, ಆಸಿಫ್ ದುಖಂದರ್, ಇಮ್ರಾನ್ ಖಾಂಜಾಡೆ, ಮಹಮ್ಮದ್ ಅಸಂ ತೆಲಾರ್, ಅಮಿರಾಖಾನ್ ಗುತ್ತಲ, ಅಹ್ಮದ್‌ಖಾನ್ ಖಾಂಜಾಡೆ, ಅಲ್ಲಾಭಕ್ಷ ಚೋಪದಾರ್, ದಾದಾಪೀರ ಮೊಹಮ್ಮದ್ ಅಸೀಮ್ ಕಿಲ್ಲೇದಾರ, ಅಶೋಕ ಮನ್ನಂಗಿ, ಮಹಮ್ಮದ್-ಫೀಕ್ ಚುಡಿಗಾರ, ಆಸಿಫ್ ಅಹ್ಮದ್ ದುಖಾಂದಾರ್, ಅಲ್ತಾಫ್ ಮಕಾಂನದಾರ, ಮಹಮ್ಮದ್ ಹಷತ್ ಕಿಲ್ಲೇದಾರ, ಮಹಮ್ಮದ್ ಸಾದಿಕ್ ಚೋಪದಾರ್, ದಾದಾಪೀರ ತಂಬುಳಿ, ಮಹಮ್ಮದ್‌ಹನೀಫ್ ದುಖಾಂದಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈವರೆಗೂ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಬಗ್ಗೆ ಯಾವುದೇ ದೂರು ನೀಡಿಲ್ಲ. ಸದ್ಯ ಶಾಲೆ ಶಿಕ್ಷಕರ ನಡುವೆ ವೈಮನಸ್ಸು ಹಿನ್ನೆಲೆ ಈ ರೀತಿ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
