Ad image

ಇಂಡಿಗೋ ವಿಮಾನದಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು, ಸಚಿವರು ಲಾಕ್! ಕಾರಣ ಏನು?

Team SanjeMugilu
1 Min Read

ದೆಹಲಿ : ದೇಶದಾದ್ಯಂತ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿದೆ. ಡಿಸೆಂಬರ್  ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮುಂಜಾನೆ ಹಿಮಪಾತವಾಗ್ತಿರುವ  ಹಿನ್ನೆಲೆ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗ್ತಿದೆ. ದೆಹಲಿಗೆ ತೆರಳಿದ್ದ ರಾಜ್ಯದ 20ಕ್ಕೂ ಹೆಚ್ಚು ಶಾಸಕ, ಸಚಿವರು ಇಂಡಿಗೋ ವಿಮಾನದಲ್ಲೇ ಸಿಲುಕಿದ ಘಟನೆ ನಡೆದಿದೆ.
ಇಂಡಿಗೋ ವಿಮಾನದಲ್ಲೇ ಶಾಸಕ ಸಚಿವರು ಲಾಕ್​
ಹವಾಮಾನ ವೈಪರೀತ್ಯ ಹಿನ್ನಲೆ ಇಂಡಿಗೋ ವಿಮಾನದಲ್ಲಿ ರಾಜ್ಯದ 20 ಕ್ಕೂ ಹೆಚ್ಚು ಶಾಸಕರು, ಮೂವರು ಸಚಿವರು ಸಿಲುಕಿಕೊಂಡಿದ್ರು. ಶಾಸಕರೆಲ್ಲಾ ದೆಹಲಿಯಿಂದ ಮರಳಿ ಬೆಳಗಾವಿಗೆ ಆಗಮಿಸಲು ಇಂಡಿಗೋ ವಿಮಾನ ಏರಿದ್ರು.
ಫ್ಲೈಟ್​ ಟೇಕ್ ಆಫ್​ಗಾಗಿ ಕಾದು ಕುಳಿತ ಶಾಸಕರು
ಬೆಳ್ಳಗ್ಗೆ 6:45ಕ್ಕೆ ಟೇಕ್ ಆಫ್​ ಆಗಬೇಕಿದ್ದ ಇಂಡಿಗೋ ವಿಮಾನ, ಹವಾಮಾನ ವೈಪರಿತ್ಯದ ಕಾರಣ ಸಮಯಕ್ಕೆ ಸರಿಯಾಗಿ ಟೇಕ್ ಆಫ್​ ಆಗಲಿಲ್ಲ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಫ್ಲೈಟ್​ ಏರಿ ಟೇಕ್ ಆಫ್​ಗಾಗಿ ಶಾಸಕರು ಸಚಿವರು ಕಾಯ್ತಿದ್ರು.
ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ನಾಲ್ವರು ಸಚಿವರು
ಪೈಟ್ ನಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್. ಶರಣ ಪ್ರಕಾಶ್​ ಪಾಟೀಲ , ಎಚ್ ಕೆ ಪಾಟೀಲ್ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಶಾಸಕರಿದ್ದರು ಎಂದು ತಿಳಿದು ಬಂದಿದೆ.

Share This Article