ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಟ್ರಯಲ್ ಇಂದು ಪ್ರಾರಂಭ ಆಗುತ್ತಿದೆ. ಪ್ರಕರಣದಲ್ಲಿ ಮೊದಲ ಹಂತವಾಗಿ ಇಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ ಸಾಕ್ಷಿ ನುಡಿಯಲಿದ್ದಾರೆ.
ಈಗಾಗಲೇ ಪ್ರಾಸಿಕ್ಯೂಷನ್ ಮನವಿಯ ಮೇರೆಗೆ ಎರಡು ಸಾಕ್ಷಿಗೂ ಸಮನ್ಸ್ ನೀಡಲಾಗಿತ್ತು. ಇಂದು ಇಬ್ಬರೂ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದು, ಘಟನಾವಳಿಯ ಬಗ್ಗೆ ಸಂಪೂರ್ಣ ಹೇಳಿಕೆಯನ್ನು ನುಡಿಯಲಿದ್ದಾರೆ. ರೇಣುಕಾಸ್ವಾಮಿ ಯಾವಾಗ ಮನೆಯಿಂದ ಹೊರಟ, ಮಧ್ಯಾಹ್ನ ಊಟಕ್ಕೆ ಬರೋದಿಲ್ಲ ಅಂದಿದ್ದು, ಬಳಿಕ ಸಾವಿನ ವಿಚಾರ ತಿಳಿದಿದ್ದು, ಈ ಎಲ್ಲಾ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ.
ಇತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಕೊಲೆಯಾದ ಸ್ಥಳಕ್ಕೆಲ್ಲಾ ಭೇಟಿ ನೀಡಿ ಪ್ರಕರಣದ ಬಗ್ಗೆ ಮತ್ತೊಮ್ಮೆ ಸವಿವರವಾದ ಮಾಹಿತಿಯನ್ನು ಪಡೆದುಕೊಂಡಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.
