ಬೆಳಗಾವಿ : ನರೇಗಾ ಹೆಸರು ಬದಲಾವಣೆ ಹಾಗೂ ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ ಗಾಂಧಿ ಕುಟುಂಬಸ್ಥರ ಮೇಲೆ ಸುಳ್ಳು ಕೇಸ್ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸುವರ್ಣ ಸೌಧದ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್, ಎಂ.ಬಿ ಪಾಟೀಲ್, ತನ್ವೀರ್ ಸೇಠ್, ಸಲೀಂ ಅಹಮದ್, ನಂಜೇಗೌಡ, ಬೇಳೂರು ಗೋಪಾಲಕೃಷ್ಣ ಬೋಸರಾಜು ಸೇರಿದಂತೆ ಹಲವರು ಭಾಗಿಯಾಗಿದ್ರು.
ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಒಬ್ಬೊಬ್ಬರ ಮೇಲೂ ಕೇಸ್
ಪ್ರತಿಭಟನೆ ವೇಳೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಬಿಜೆಪಿಯವರು ಕೇಸ್ ಹಾಕಿಸಿದ್ರು. ಸುಬ್ರಹ್ಮಣ್ಯಂ ಸ್ವಾಮಿ ಕಂಪ್ಲೆಂಟ್ ಕೊಟ್ರು ಅಂತ ಮಾಡಿದ್ರು. ನನಗೂ ನಮ್ಮ ತಮ್ಮನಿಗೂ ನೊಟೀಸ್ ಕೊಟ್ಟಿದ್ರು. ದಿವಗಂತ ಶಾಮನೂರು ಕುಟುಂಬಸ್ಥರು ಯಂಗ್ ಇಂಡಿಯಾಗೆ ದುಡ್ಡು ಕೊಟ್ಟಿದ್ರು, ಷೇರ್ ಹೋಲ್ಡರ್ ಆಗಿದ್ರು ಅವರಿಗೂ ನೊಟೀಸ್ ಕೊಟ್ಟಿದ್ರು.
ಶಾಸಕರು, ಸಚಿವರು ನಿಗಮಗಳಿಗೆ ಚೇರ್ಮನ್ ಆಗಿರ್ತಾರೆ. ನಾವು ಅಧಿಕಾರದಿಂದ ಹೋದ್ಮೇಲೆ ಚೇರ್ಮನ್ ಶಿಪ್ ಹೋಗುತ್ತೆ. ಕಾಂಗ್ರೆಸ್ ಭವನ ಟ್ರಸ್ಟ್ಗೆ ನಾನು, ಸಿಎಂ ಅಧ್ಯಕ್ಷರು- ಮೆಂಬರ್, ಹಾಗಂತ ಕಾಂಗ್ರೆಸ್ ಆಸ್ತಿ ನಮ್ಮ ಆಸ್ತಿ ಆಗೋಯ್ತಾ? ನನಗೂ ನೊಟೀಸ್ ಕೊಟ್ಟಿದ್ದು, ನನ್ನ ತಮ್ಮನಿಗೂ ನೊಟೀಸ್ ಕೊಟ್ಟಿದ್ದಾರೆ ಎಂದು ಡಿಕೆಶಿ ಕಿಡಿಕಾರಿದ್ರು.
FIR ಕಾಪಿ ಕೊಡಿ ಅಂತ ನಾನು ಪತ್ರ ಬರೆದಿದ್ದೆ. ಎಫ್ಐಆರ್ ಕಾಪಿ ಕೊಡಿ ಅಂದ್ರೆ ಕೊಡ್ತಿಲ್ಲ. ನನ್ನ ಸ್ವಂತ ದುಡ್ಡನ್ನು ನಾನು ಯಾರಿಗಾದ್ರೂ ಕೊಡ್ತೀನಿ. ನನ್ನ ಮೇಲೂ ಪಿಎಂಎಲ್ಎ ಕೇಸ್ ಹಾಕಿಸಿ ಜೈಲಿಗೆ ಹಾಕಿದ್ರು ಆಮೇಲೆ ಕೇಸ್ ಏನಾಯ್ತು?ಕೋಲಾರದಲ್ಲಿ ಭಾಷಣ ಮಾಡಿದ್ರೆ ರಾಹುಲ್ ಗಾಂಧಿ ಎಂಪಿ ಸೀಟನನ್ನೇ ವಜಾ ಮಾಡಿಸಿದ್ರಲ್ಲ ಎಲ್ಲಾದ್ರೂ ಉಂಟೇನ್ರಿ? ಎಂದು ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಇದೇ ವೇಳೆ ಮಾತಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ಅವರದ್ದು ದ್ವೇಷದ ರಾಜಕಾರಣ ಎಂದಿದ್ದಾರೆ. ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆ ಎಲ್ಲ ಕಡೆ ಕಾಂಗ್ರೆಸ್ ನವರನ್ನು ಟಾರ್ಗೆಟ್ ಮಾಡಿ ಅವರನ್ನು ಕೋರ್ಟ್ಗೆ ಅಲೆಸುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ನವರನ್ನು ಅಪರಾಧಿಗಳನ್ನಾಗಿ ಮಾಡುತ್ತದೆ ಬಿಜೆಪಿ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಹೀಗೆ ಮಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು.
ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ರಾಷ್ಟ್ರವನ್ನು ಬಹಳ ಸಾಲಗಾರ ದೇಶವನ್ನಾಗಿ ಮಾಡಲಾಗಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ 53 ಲಕ್ಷ ಕೋಟಿ ಇದ್ದ ಸಾಲ, ಈಗ 200 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಇವರು ಬಂದ ಮೇಲೆ 148 ಲಕ್ಷ ಕೋಟಿ ಸಾಲ ಮಾಡಿದೆ. ಇಷ್ಟು ವರ್ಷಗಳಲ್ಲಿ ಇಷ್ಡು ದೊಡ್ಡ ಮೊತ್ತದ ಸಾಲ ಮಾಡಿದ್ದಾರೆ. ಇದನ್ನು ಯಾರು ಮಾಡಿದ್ರು? ಮೋದಿ ಬಿಜೆಪಿ ಇದನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಸಿದ್ದರಾಮಯ್ಯ ಗುಡುಗಿದ್ರು.
ಎಂ ನರೇಗಾ ಹೆಸರನ್ನೂ ಚೇಂಜ್ ಮಾಡಿದ್ದಾರೆ. ಮಹಾತ್ಮಾ ಗಾಂಧಿ ಹೆಸರಿದ್ರೆ ಏನಾಗ್ತಿತ್ತು ಇವರಿಗೆ?? ಮೊದಲಿನಿಂದಲೂ ಬಿಜೆಪಿ ಅವರಿಗೆ ಗಾಂಧಿ ಕಂಡ್ರೆ ಆಗಲ್ಲ. ನೆಹರೂ ಕಂಡ್ರೆ ಆಗಲ್ಲ ಅಂಬೇಡ್ಕರ್ ಕಂಡ್ರೂ ಆಗಲ್ಲ. ಕೊನೆಗೆ ಬಡವರನ್ನು ಕಂಡ್ರೂ ಬಿಜೆಪಿಗೆ ಆಗಲ್. ಕಾಂಗ್ರೆಸ್ ನವರು ಕೈ ಕಟ್ಟಿ ಕೂರುವವರಲ್ಲ. ಬಿಜೆಪಿಯದ್ದು ದ್ವೇಷದ ರಾಜಕಾರಣ ಸಿಎಂ ಗುಡುಗಿದ್ರು.
ಕೇಸ್ ಮೇಲೆ ಕೇಸ್ ಹಾಕ್ತಾರೆ, ಬಿಜೆಪಿಯಿಂದ ದ್ವೇಷದ ರಾಜಕಾರಣ; ಕೇಂದ್ರದ ವಿರುದ್ಧ ಸಿಎಂ, ಡಿಸಿಎಂ ಗುಡುಗು
