Ad image

ಕರ್ನಾಟಕ ಹವಾಮಾನ ವರದಿ: ಚಳಿಗೆ ನಲುಗಿದ ಕರ್ನಾಟಕ, ಪ್ರಯಾಣ ಮಾಡುವವರು ಎಚ್ಚರ

Team SanjeMugilu
2 Min Read

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಒಣಹವೆ ವಾತಾವರಣ ಇರಲಿದೆ. ಜತೆಗೆ ಗಾಳಿ ಗುಣಮಟ್ಟದಲ್ಲಿ ಬದಲಾವಣೆಗಳು ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ಮಂಜು ಕಾಣಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ 15°C, ಬೆಂಗಳೂರು ಗ್ರಾಮಾಂತರ 14°C ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಇಂದು ತಾಪಮಾನ ಶೇಕಾಡ 24.4ರಷ್ಟು ಇರಲಿದೆ. ಹಾಗೂ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಶೇಕಾಡ 24.6ರಷ್ಟು ಇದೆ. ಶುಕ್ರವಾರ (ಡಿ.19) ಹಾಗೂ ಶನಿವಾರ (ಡಿ.20) ಕೂಡ ಇದೆ ತಾಪಮಾನ ಇರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದ ಭಾಗದಲ್ಲಿ ಇಂದು ಮಂಜಿನ ವಾತಾವರಣ ಇರಲಿದೆ. ಗ್ರಾಮೀಣ ಭಾಗದಲ್ಲಿ ಮಂಜು ಮತ್ತು ಮಬ್ಬು ಎರಡು ಕೂಡ ಕಾಣಿಸಲಿದೆ.

ಇನ್ನು ಉತ್ತರ ಕರ್ನಾಟಕ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಕೂಡ ಒಣ ಹವಾಮಾನ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ. ಇನ್ನು ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಹೆಚ್ಚಾಗಿ ಒಣ ಹವೆ ಇರುತ್ತದೆ, ಆಕಾಶವು ಶುಭ್ರವಾಗಿರುತ್ತದೆ, ಸೂರ್ಯಾಸ್ತದ ನಂತರ ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬರುತ್ತದೆ. ಇಲ್ಲಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಮಧ್ಯಮ ಉಷ್ಣತೆ ಮತ್ತು ತೇವಾಂಶ ಇರುತ್ತದೆ. ಮಂಗಳೂರಿನಂತಹ ನಗರಗಳಲ್ಲಿ ಗರಿಷ್ಠ ತಾಪಮಾನ 33°C ಸಮೀಪ ಇರುತ್ತದೆ .

ಬೀದರ್,ಹಾವೇರಿ, ಮತ್ತು ದಾವಣಗೆರೆಯಲ್ಲಿ ಮುಂದಿನ 24 ಗಂಟೆಗಳ ಕಾಲ, ಶೀತ ಅಲೆಗಳ ಸ್ಥಿತಿ ಮುಂದುವರಿಯುವ ಬಗ್ಗೆ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಅಥವಾ ಮಂಜು ಕವಿದಿರುವ ಸಾಧ್ಯತೆ ಇದ್ದು, ಬೆಳಗಿನ ಪ್ರಯಾಣದ ಮಾಡುವವರು ತುಂಬಾ ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಇಲಾಖೆ ಹೇಳಿದೆ. ಇನ್ನು ಇಂದು ರಾಜ್ಯದ ಯಾವುದೇ ಭಾಗದಲ್ಲೂ ಇಂದು ಮಳೆಯಾಗುವ ಸಾಧ್ಯತೆಗಳು ಇಲ್ಲ. ಮಳೆಯಾಗುವ ಸಾಧ್ಯತೆ 0% ರಷ್ಟಿದೆ ಎಂದು ಇಲಾಖೆ ಹೇಳಿದೆ.

ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾಗಶಃ ಮೋಡ ಇರಲಿದ್ದು, ತಂಪು ವಾತಾವರಣದ ಅನುಭವವಾಗಲಿದೆ. ಉತ್ತರ ಒಳನಾಡಿನ ಇತರ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ರಾಯಚೂರು, ಕಲಬುರಗಿ ಮತ್ತು ಯಾದಗಿರಿಗಳಲ್ಲಿ ಕನಿಷ್ಠ ತಾಪಮಾನ 12°C ಮತ್ತು 14°C ನಡುವೆ ಇರುತ್ತದೆ ಎಂದು ವರದಿಯಾಗಿದೆ. ಈ ಪ್ರದೇಶಗಳಲ್ಲಿ ಬೆಳಿಗ್ಗೆ ಅಸಾಮಾನ್ಯವಾಗಿ ಶೀತ, ಕೆಲವು ಸ್ಥಳಗಳಲ್ಲಿ ಮಂಜು ಕವಿದ ವಾತಾವರಣ ಮತ್ತು ಸೂರ್ಯಾಸ್ತದ ನಂತರ ತೀವ್ರ ಚಳಿ ಇರುತ್ತದೆ.

Share This Article