Ad image

ಕೋಗಿಲು ಲೇಔಟ್​​ ಧ್ವಂಸ; ಅಧಿಕಾರಿಗಳ ತಲೆದಂಡ? ಸಿಟಿಜನ್ ಶಿಪ್ ತನಿಖೆಯನ್ನ NIAಗೆ ಕೊಡಿ ಎಂದು R ಅಶೋಕ್​ ಆಗ್ರಹ

Team SanjeMugilu
2 Min Read

ಬೆಂಗಳೂರು: ಕೋಗಿಲು ಲೇಔಟ್​ನಲ್ಲಿ ಮನೆಗಳ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಲೆ ದಂಡವಾಗುವ ಸಾಧ್ಯತೆ ಇದೆ. ಒತ್ತುವರಿ ಬಗ್ಗೆ ಕ್ರಮ ಜರುಗಿಸಿದ ಅಧಿಕಾರಿಗಳ  ಅಮಾನತಿಗೆ ಜಿಬಿಎ ಸಿದ್ಧತೆ ನಡೆಸಿದೆ. ಒತ್ತುವರಿ ನಡೆಯುವಾಗ ಸುಮ್ಮನಿದ್ದ ಅಧಿಕಾರಿಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ. ಮತ್ತೊಂದೆಡೆ ಅಕ್ರಮ ಮನೆಗಳ ತೆರವುಗೊಳಿಸಿದ ಸ್ಥಳಕ್ಕೆ ಬಿಜೆಪಿ ನಾಯಕರ  ಭೇಟಿ ನೀಡಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಯಲಹಂಕ ವಲಯ ಅಧಿಕಾರಿಗಳಿಗೆ ಶಾಕ್ ನೀಡಲು ಜಿಬಿಎ ಮುಂದಾಗಿದೆ. ಜೊತೆಗೆ ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದ್ದು. ಅನಧಿಕೃತ ಮನೆಗಳಿಗೆ ಕರೆಂಟ್, ನೀರು ಪೂರೈಸಿರುವ ಬೆಸ್ಕಾಂ, BWSSB ಅಧಿಕಾರಿಗಳಿಗೂ ಸಂಕಷ್ಟ ಎದುರಾಗಿದೆ.
ಅಧಿಕಾರಿಗಳ ವಿರುದ್ಧ ಕ್ರಮ
ಯಾವುದೇ ದಾಖಲೆಗಳು ಇಲ್ಲದ ಮನೆಗಳಿಗೆ ನೀರು, ಕರೆಂಟ್​ನ‌ ಸೌಕರ್ಯ ಒದಗಿಸಿರುವ ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ಬಳಿ ಜಿಬಿಎ ನಗರಾಭಿವೃದ್ಧಿ ಇಲಾಖೆ ಮಾಹಿತಿ ಕೇಳಿದೆ. ಶೀಘ್ರವೇ ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಆಗಿರುವ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದೆ.
ಕೋಗಿಲು ಲೇಔಟ್​ಗೆ ಬಿಜೆಪಿ ನಾಯಕ ಭೇಟಿ
ಅಕ್ರಮ ಮನೆಗಳ ತೆರವುಗೊಳಿಸಿದ ಕೋಗಿಲು ಲೇಔಟ್​​ಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ. ನಿರಾಶ್ರಿತರ ಜೊತೆ ಮಾತಾಡಿ ಬಿಜೆಪಿ ನಾಯಕರು ಮಾಹಿತಿ ಕಲೆ ಹಾಕಿದ್ದಾರೆ.
ನಮ್ಮ ಬಳಿ ಕಾರ್ಡ್ ಇಲ್ಲ ಎಂದ ಜನರು
ಸರ್ಕಾರದ ಗುರುತಿನ ಚೀಟಿ ತೋರಿಸುವಂತೆ ಅಶೋಕ್ ಕೇಳಿದ್ದು, ಈ ವೇಳೆ ಸ್ಥಳೀಯರು ನಮ್ಮ ಬಳಿ ಕಾರ್ಡ್ ಇಲ್ಲ ಎಂದಿದ್ದಾರೆ. ನೀವು ಹುಟ್ಟಿದ್ದು ಎಲ್ಲಿ ಎಂಬ ಅಶೋಕ್​ ಪ್ರಶ್ನೆಗೆ ಅಲ್ಲಿನ ಮಹಿಳೆಯರು, ಕನ್ನಡ ಬರಲ್ಲ, ಹಿಂದಿಯಲ್ಲಿ ಮಾತಾಡಿ ಎಂದಿದ್ದಾರೆ.
ಸಿಟಿಜನ್ ಶಿಪ್ ತನಿಖೆಯನ್ನ NIAಗೆ ಕೊಡ್ಬೇಕು
ಈ ವೇಳೆ ಮಾಧ್ಯಮಗಳ ಜೊತೆ ಮಾಡಿದ ಆರ್​. ಅಶೋಕ್​, ದಾಖಲೆಯೇ ಇಲ್ಲ. ಸಿಟಿಜನ್ ಶಿಪ್ ಮೊದಲು ವೆರಿಫೈ ಆಗ್ಬೇಕು. ಸಿಟಿಜನ್ ಶಿಪ್ ತನಿಖೆಗೆ NIAಗೆ ಕೊಡ್ಬೇಕು. ವಾಸೀಂ ಅನ್ನೋನು ಇಲ್ಲಿ ಲೇಔಟ್ ಮಾಡಿದ್ದಾರೆ‌. ಅವನು ಕಾಂಗ್ರೆಸ್ ಏಜೆಂಟ್. ಈ ಜಮೀನು ರಾಜ್ಯದ ಜನರಿಗೆ ಸೇರಿರೋದು. ಕರ್ನಾಟಕದ ಜನರ ಇದರ ವಿರುದ್ದ ಚಳುವಳಿ ಮಾಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಇಲ್ಲದೆ ಹೋದ್ರೆ ನಮ್ಮ ಸರ್ಕಾರದವರು ಕೇರಳ ಅಲ್ಲ ಪಾಕಿಸ್ತಾನಕ್ಕೂ ಮಂಡಿಯೂರುತ್ತೆ. ಕರ್ನಾಟಕವನ್ನ ಬಾಂಗ್ಲಾದೇಶ ಮಾಡಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ ಎಂದು ಆರ್​ ಅಶೋಕ್ ಕಿಡಿಕಾರಿದ್ದಾರೆ.

Share This Article