Ad image

ಕ್ಯಾಬ್‌ಗೆ ಕಾರು ಟಚ್ – ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕನ ಮೇಲೆ ಯುವಕರ ಗುಂಪಿನಿಂದ ಹಲ್ಲೆ

Team SanjeMugilu
1 Min Read

ಬೆಂಗಳೂರು: ಕ್ಯಾಬ್‌ಗೆ ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಎಣ್ಣೆ ಮತ್ತಿನಲ್ಲಿದ್ದ ಯುವಕರ ಗುಂಪು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ  ಕಾರ್ಪೋರೇಷನ್ ಸರ್ಕಲ್  ಬಳಿ ನಡೆದಿದೆ.
ಕಾರ್ಪೋರೇಷನ್ ಸರ್ಕಲ್ ಬಳಿ ಕ್ಯಾಬ್ ನಿಂತಿತ್ತು. ಈ ವೇಳೆ ಯುವಕರಿದ್ದ ಕಾರು ಹಿಂದಿನಿಂದ ಬಂದು ಕ್ಯಾಬ್‌ಗೆ ಟಚ್ ಆಗಿದೆ. ಇದನ್ನು ಕ್ಯಾಬ್ ಚಾಲಕ ಪ್ರಶ್ನಿಸಿದ್ದಾನೆ. ಈ ವೇಳೆ ಯುವಕರು ಚಾಲಕನನ್ನು ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಗಳ ಬಿಡಿಸಲು ಮುಂದಾದ ಕೆಲ ಚಾಲಕರ ಮೇಲೆಯೂ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಜಗಳ ತಾರಕಕ್ಕೇರಿ ಕ್ಯಾಬ್ ಚಾಲಕನನ್ನು ನೆಲಕ್ಕೆ ಹಾಕಿ ಯುವಕರು ತುಳಿದಿದ್ದಾರೆ.
10ಕ್ಕೂ ಹೆಚ್ಚು ಯುವಕರು ಪುಡಾಂಟ ನಡೆಸಿದ್ದು, ನಡುರಸ್ತೆಯಲ್ಲಿ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರು ನಡೆಸಿದ ಹಲ್ಲೆಗೆ ಚಾಲಕ ಒದ್ದಾಡಿದ್ದಾನೆ. ಇಂದು ಬೆಳಗಿನ ಜಾವ 3:16ರ ಸುಮಾರಿಗೆ ಘಟನೆ ನಡೆದಿದೆ.

Share This Article