Ad image

ಅನಧಿಕೃತವಾಗಿ ಮನೆ ನಿರ್ಮಾಣ ಆಗಿದ್ದು ನಿಜ: ಕೃಷ್ಣಬೈರೇಗೌಡ

Team SanjeMugilu
1 Min Read

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ  ಅನಧಿಕೃತವಾಗಿ ಮನೆ ನಿರ್ಮಾಣ ಆಗಿದ್ದು ನಿಜ. ಇದು ಬಿಬಿಎಂಪಿ ಜಾಗವಾಗಿದ್ದು, ಕಂದಾಯ ಇಲಾಖೆಯ ಜಾಗವಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಇಂದು ಮುಂಜಾನೆ ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಕೃಷ್ಣ ಬೈರೇಗೌಡ  ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಬಿಬಿಎಂಪಿ ಇರಲಿ, ಕಂದಾಯ ಇರಲಿ ಒತ್ತುವರಿಯಾಗಿರುವ ಜಾಗವನ್ನು ನಿರಂತರವಾಗಿ ತೆರವು ಮಾಡಲಾಗುತ್ತದೆ. ಇದು ಆಡಳಿತ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುವ ಕೆಲಸ. ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರ ತೆರವು ನಡೆಯುತ್ತಿರುತ್ತದೆ. ಸರ್ಕಾರಿ ಜಾಗದಲ್ಲಿ ಇರಬಹುದು, ಬಿಬಿಎಂಪಿ ಜಾಗದಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎಂದರು.

ಇದು ಒಂದೇ ಪ್ರಕರಣ ಅಲ್ಲ, ಬೇರೆ ಪ್ರಕರಣ ಇದೆ. ಸರ್ಕಾರಿ ಜಾಗವನ್ನು ಭದ್ರ ಮಾಡಲು ತೆರವು ಮಾಡಲಾಗಿದೆ. ತೆರವಾದ ಜಾಗದಲ್ಲಿ ಬಡವರು, ಅರ್ಹರು ಇದ್ದಾರೆ. ಬಹಳ ಕಾಲದಿಂದ ವಾಸ ಮಾಡುತ್ತಿರುವ ಕಾರಣ ಮಾನವೀಯ ದೃಷ್ಟಿಯಿಂದ ಬಡವರಿಗೆ ಮನೆ ನೀಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.

ಬಾಂಗ್ಲಾದೇಶದವರು  ನೆಲೆಸಿದ್ದಾರೆ ಎನ್ನುವುದು ಊಹಾಪೋಹ. ಊಹಾಪೋಹಗಳ ಮೇಲೆ ಹೇಳಿಕೆ ಮಾಡಬಾರದು. ರಾಜ್ಯದವರು ಯಾರು? ಹೊರ ರಾಜ್ಯದವರು ಇದ್ದಾರೆ ಎನ್ನುವುದನ್ನು ಪೊಲೀಸರು ತನಿಖೆ ನಡೆಸಲಿ. ವಸೀಂ ನನ್ನ ಜೊತೆ ಇದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಯಾರೇ ಭಾಗಿಯಾಗಿದರೂ ಕಾನೂನು ಕ್ರಮ ನಡೆಯಲಿ. ಬಿಜೆಪಿ ಕಾರ್ಯಕರ್ತರು ಅಕ್ರಮದಲ್ಲಿ ಭಾಗಿಯಾಗಿದ್ದರೆ ಕ್ರಮ ಆಗಲಿ ಎಂದು ಆಗ್ರಹಿಸಿದರು.

Share This Article