Ad image

ಬೆಂಗಳೂರಿನ ಈ ಪ್ರತಿಷ್ಠಿತ ಶಾಲೆಗೆ ಬಾಂಬ್ ಭೀತಿ; ಬೆದರಿಕೆ ಮೇಲ್​ನಲ್ಲಿದೆ ಡೆಡ್​ಲೈನ್​!

Team SanjeMugilu
1 Min Read

ಬೆಂಗಳೂರು : ರಾಜ್ಯದಲ್ಲಿ ಬಾಂಬ್ ಬೆದರಿಕೆಗಳ ಪ್ರಕರಣ ಹೆಚ್ಚಿದೆ. ಜಯನಗರದ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ  ಇಮೇಲ್ ಬಂದಿದೆ. ಫೆಬ್ರುವರಿ 25ರ ವರೆಗೆ ಡೆಡ್ ಲೈನ್ ನೀಡಿರುವ ಅನಾಮಿಕ ವ್ಯಕ್ತಿ, 60 ಸಾವಿರ ಅಮೆರಿಕನ್ ಡಾಲರ್ ಅಥವಾ ಸುಮಾರು 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಬಾಂಬ್​ ಬೆದರಿಕೆ ಸಂದೇಶ ಕಂಡು ಶಾಲಾ ಆಡಳಿತ ಮಂಡಳಿ ಶಾಕ್ ಆಗಿದ್ದು, ಪೊಲೀಸರಿಗೆ ದೂರು ಸಹ ನೀಡಿದ್ದಾರೆ.
ಖಾಸಗಿ ಶಾಲೆಯಲ್ಲಿ ‘ಬಾಂಬ್’​ ಢವ ಢವ
ಜಯನಗರದ 4ನೇ ಬ್ಲಾಕ್‌ ನಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಫೆಬ್ರವರಿ 25ರ ವರೆಗೆ ಡೆಡ್ ಲೈನ್ ನೀಡಿರುವ ಅನಾಮಿಕ ವ್ಯಕ್ತಿ, ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಮೊಹಮ್ಮದ್ ಇಕ್ಬಾಲ್ ಎಂಬಾತನಿಂದ ಇ-ಮೇಲ್ ಮೂಲಕ ಈ ಬೆದರಿಕೆ ಸಂದೇಶ ಬಂದಿದೆ ಎಂದು ತಿಳಿದುಬಂದಿದೆ.
ಜನವರಿ 1 ರಂದು ಬಂದಿದ್ದ ಮೇಲೆ
ಶಾಲೆಯ ನಾಲ್ಕು ಕಡೆಗಳಲ್ಲಿ ಬಾಂಬ್ ಇಡಲಾಗಿದೆ. ಈ ಬೆದರಿಕೆಯ ಮೇಲ್ ಜನವರಿ 1 ರಂದು ಕಳಿಸಲಾಗಿತ್ತು. ಆದರೆ ತಡವಾಗಿ ಮೇಲ್ ಪರಿಶೀಲಿಸಿದ ಶಾಲೆಯ ಪ್ರಿನ್ಸಿಪಾಲ್ ಇದನ್ನು ನೋಡಿ ಶಾಕ್ ಆಗಿದ್ದಾರೆ. ಕೂಡಲೇ ತಿಲಕ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಾಂಬ್ ಸ್ಕ್ವಾಡ್ ಮೂಲಕ ತಪಾಸಣೆ
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಕ್ವಾಡ್ ಸಹಾಯದಿಂದ ತಪಾಸಣೆ ನಡೆಸಿದ್ದಾರೆ. ಈ ತನಕ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಫೆಬ್ರವರಿ 25ರ ಡೆಡ್ ಲೈನ್​ಗೆ ಹೆದರಿದ ಶಾಲೆ
ಆದರೆ, ಫೆಬ್ರವರಿ 25ರ ಡೆಡ್ ಲೈನ್​ಗೆ ಆಡಳಿತ ಮಂಡಳಿ ಹೆದರಿದೆ. ಯಾವಾಗ ಏನ್ಮಾಡ್ತಾರೋ ಎನ್ನುವ ಭೀತಿ ಅವರಿಸಿದೆ. ಈ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಪ್ರತಿದಿನವೂ ಭಯದಲ್ಲಿ ಶಾಲೆ ನಡೆಸುತ್ತಿದೆ.

 

 

Share This Article