Ad image

ಸಿಲಿಕಾನ್‌ ಸಿಟಿ ಮಂದಿಗೆ ಗುಡ್​ನ್ಯೂಸ್; ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ದೊಡ್ಡ ಗಿಫ್ಟ್

Team SanjeMugilu
1 Min Read

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ  ಮನೆ ಕಟ್ಟೋರಿಗೆ  ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸೆಟ್‌‌ಬ್ಯಾಕ್  ಅಂದ್ರೆ ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ​​ ಬಿಡದೆ ಮನೆ ನಿರ್ಮಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಮಹತ್ವದ‌ ಆದೇಶ ಹೊರಡಿಸಿದೆ. ಅವಘಡದ ವೇಳೆ ಕಾರ್ಯಾಚರಣೆಗಾಗಿ ಮನೆ ಅಥವಾ ಕಟ್ಟಡದ ಸುತ್ತಲು ಬಿಡಲೇಬೇಕಿದ್ದ ಜಾಗ ಇನ್ಮುಂದೆ 8 ರಿಂದ 40 ಅಡಿವರೆಗೆ ಬಿಡುವ ಅವಶ್ಯಕತೆ ಇಲ್ಲ ಎಂದಿದೆ. ಆ ಮೂಲಕ ಸಿಲಿಕಾನ್ ಸಿಟಿಯ ಜನರಿಗೆ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ದೊಡ್ಡ ಗಿಫ್ಟ್ ಕೊಟ್ಟಿದೆ. ಇದು ಸೆಟ್‌ಬ್ಯಾಕ್‌‌ ​​ಬಿಡದೆ ಸಮಸ್ಯೆ ಎದುರಿಸ್ತಿದ್ದ ಮನೆ ಮಾಲೀಕರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಸೆಟ್‌‌ಬ್ಯಾಕ್‌ನಲ್ಲಿ ವಿನಾಯಿತಿ ನೀಡಿ GBA ಆದೇಶ
ಈ ಬಗ್ಗೆ ಮಾಹಿತಿ ನೀಡಿರುವ ಜಿಬಿಎ ಚೀಫ್ ಕಮಿಷನರ್ ಮಹೇಶ್ವರ್ ರಾವ್, ಈಗಾಗಲೇ ಸರ್ಕಾರ ಆದೇಶ ಮಾಡಿದೆ. ಇದರಿಂದ ಜನರಿಗೆ ಬಹಳ ಅನುಕೂಲ ಆಗಲಿದೆ. 600 ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಕೇವಲ 0.60 ಮೀಟರ್‌‌‌‌‌‌‌‌‌‌‌‌ ಅಂದ್ರೆ 2 ಅಡಿಗೆ ಇಳಿಕೆ ಮಾಡಲಾಗಿದೆ. 600 ಚದರ ಅಡಿಯಿಂದ 1,500 ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 2.5 ಅಡಿಗೆ ಇಳಿಕೆ ಮಾಡಲಾಗಿದೆ. 40 ಸಾವಿರ ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ 8% ನಷ್ಟು ಸೆಟ್ ಬ್ಯಾಕ್ ವ್ಯಾಪ್ತಿಗೆ ಇಳಿದಿದೆ ಎಂದು ವಿವರಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೆಟ್‌​ಬ್ಯಾಕ್ ರೂಲ್ಸ್‌ನಲ್ಲಿ ​ಕೆಲ ಬದಲಾವಣೆ ಮಾಡಿದೆ. ಈ ಮೊದ್ಲು ಮನೆಗಳಿಗೆ 8 ಅಡಿಯಿಂದ 40 ಅಡಿವರೆಗೆ ಸೆಟ್‌ಬ್ಯಾಕ್ ಬಿಡುವ ಅವಶ್ಯಕತೆ ಇತ್ತು. ಆದರೆ ಈಗ ಸರ್ಕಾರ ವಿನಾಯ್ತಿ ನೀಡಿದೆ. ಕಟ್ಟಡದ ಯಾವುದಾದ್ರೂ ಒಂದು ಬದಿಯಲ್ಲಿ ಬಿಟ್ರೆ ಸಾಕು. ಉಳಿದ 3 ಕಡೆಗಳಲ್ಲಿ ಯಾವುದೇ ಸೆಟ್‌‌‌ಬ್ಯಾಕ್ ಬಿಡುವ ಅವಶ್ಯಕತೆ ಇಲ್ಲ. ಇದರಿಂದ ಸಾರ್ವಜನಿಕರಿಗೆ ಅಲ್ಪಮಟ್ಟಿಗೆ ಅನುಕೂಲ. ಆದ್ರೆ ರಿಯಲ್ ಎಸ್ಟೇಟ್ ಮಾಫಿಯಾಗೆ ರೆಡ್ ಕಾರ್ಪೆಟ್ ಹಾಕಿದಂತೆ ಅನ್ನೋ ಆರೋಪ ಕೇಳಿಬರ್ತಿದೆ.

Share This Article